ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನ ಷೇರಿಗೆ ಭರ್ಜರಿ ಬೇಡಿಕೆ; ಆರು ತಿಂಗಳಲ್ಲಿ ಎರಡೂವರೆ ಪಟ್ಟು ಬೆಲೆ ಹೆಚ್ಚಳ

Ujjivan Small Finance Bank Updates: ಬೆಂಗಳೂರಿನ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಷೇರುಬೆಲೆ ಕಳೆದ 6 ತಿಂಗಳಲ್ಲಿ ಭರ್ಜರಿಯಾಗಿ ಏರಿದೆ. ಅದರ ಹೋಲ್ಡಿಂಗ್ ಸಂಸ್ಥೆಯಾದ ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಜೊತೆ ಬ್ಯಾಂಕ್ ವಿಲೀನಗೊಳ್ಳುತ್ತಿದೆ. ಇದಾದ ಬಳಿಕ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಸ್ಥಗಿತಗೊಳ್ಳುತ್ತದೆ. ಅದರ ಷೇರುದಾರರಿಗೆ ಬ್ಯಾಂಕ್​ನ 11.6 ಷೇರುಗಳು ಸಿಗುತ್ತವೆ. ಇದೇ ವೇಳೆ, ಉಜ್ಜೀವನ್ ಬ್ಯಾಂಕ್​ನ ಷೇರಿಗೆ ಇನ್ನಷ್ಟು ಬೇಡಿಕೆ ಬಂದಿದೆ.

ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನ ಷೇರಿಗೆ ಭರ್ಜರಿ ಬೇಡಿಕೆ; ಆರು ತಿಂಗಳಲ್ಲಿ ಎರಡೂವರೆ ಪಟ್ಟು ಬೆಲೆ ಹೆಚ್ಚಳ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
Follow us
|

Updated on:Oct 04, 2023 | 12:57 PM

ಬೆಂಗಳೂರು, ಅಕ್ಟೋಬರ್ 4: ಕೋರಮಂಗಲದಲ್ಲಿ ಮುಖ್ಯಕಚೇರಿ ಹೊಂದಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಷೇರುಗಳ ಮೇಲೆ ಬಹಳಷ್ಟು ಹೂಡಿಕೆದಾರರ ಚಿತ್ತ ನೆಟ್ಟಿದೆ. ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಲಿ (UFSL) ಮತ್ತು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (USFB) ಸಂಸ್ಥೆಗಳು ವಿಲೀನಗೊಳ್ಳುತ್ತಿವೆ. ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ತನ್ನ ಬ್ಯಾಂಕ್​ನಲ್ಲಿ ಶೇ. 70ಕ್ಕಿಂತಲೂ ಹೆಚ್ಚು ಷೇರುಮಾಲಕತ್ವ ಹೊಂದಿದೆ. ತನ್ನದೇ ಬ್ಯಾಂಕ್ ಜೊತೆ ಅದು ವಿಲೀನಗೊಳ್ಳಲಿದೆ. ಈ ಎರಡೂ ಕಂಪನಿಗಳು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವಂಥವು. ನವೆಂಬರ್ 3ರಂದು ಉಜ್ಜೀವನ್ ಬ್ಯಾಂಕ್​ನ ಮಹಾಸಭೆ ನಡೆಯಲಿದ್ದು, ಎರಡೂ ಕಂಪನಿಗಳ ವಿಲೀನ ನಿರ್ಧಾರ ಅಂತಿಮಗೊಳ್ಳಲಿದೆ.

ಉಜ್ಜೀವನ್ ಬ್ಯಾಂಕ್ ಷೇರು ಹಂಚಿಕೆ ಹೇಗೆ?

ಆಗಲೇ ಹೇಳಿದಂತೆ ಎರಡೂ ಕಂಪನಿಗಳು ಷೇರುಪೇಟೆಯಲ್ಲಿ ಲಿಸ್ಟ್ ಆಗಿವೆ. ವಿಲೀನಗೊಂಡ ಬಳಿಕ ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಸ್ಥಗಿತಗೊಳ್ಳಲಿದೆ. ಈ ಕಾರಣಕ್ಕೆ ಅದರ ಷೇರುದಾರರಿಗೆ ಷೇರುಹಂಚಿಕೆ ಸೂತ್ರ ರಚಿಸಲಾಗಿದೆ. ಅದರಂತೆ ಫೈನಾನ್ಷಿಯಲ್ ಸರ್ವಿಸಸ್​ನ ಪ್ರತೀ 10 ಷೇರಿಗೆ ಬ್ಯಾಂಕ್​ನ 116 ಷೇರುಗಳು ಸಿಗುತ್ತವೆ. ಅಂದರೆ ಪ್ರತೀ ಷೇರಿಗೆ ಬ್ಯಾಂಕ್​ನ 11.6 ಷೇರು ಸಿಗುತ್ತವೆ. 2022ರ ಅಕ್ಟೋಬರ್​ನಲ್ಲೇ ಈ ಹಂಚಿಕೆ ಸೂತ್ರ ಮಾಡಲಾಗಿತ್ತು.

ಇದನ್ನೂ ಓದಿ: ಅಮೆರಿಕದ ಕ್ರಿಪ್ಟಾನ್, ಟೆಕ್ಸಾಸ್ ಇನ್ಸ್​ಟ್ರುಮೆಂಟ್ಸ್, ಇಆರ್​ಪಿ ಲಾಜಿಕ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆ ಸಾಧ್ಯತೆ

ಉಜ್ಜೀವನ್ ಬ್ಯಾಂಕ್ ಷೇರಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರಿನ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಕಷ್ಟು ಲಾಭ ತೋರಿಸಿದೆ. ಕಳೆದ ಒಂದು ವರ್ಷದಿಂದ ಇದರ ಷೇರಿಗೆ ಭರ್ಜರಿ ಬೇಡಿಕೆ ಬಂದಿದೆ. ಅದರಲ್ಲೂ ಇದೇ ಸೆಪ್ಟೆಂಬರ್ 26ರಂದು ಎಸ್​ಎಂಸಿ ಗ್ಲೋಬಲ್ ಸೆಕ್ಯೂರಿಟೀಸ್ ಕಂಪನಿ ಜೊತೆ ಇದು ಪಾಲುದಾರಿಕೆ ಮಾಡಿಕೊಂಡ ಬಳಿಕವಂತೂ ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ. ಇಂದು ಬುಧವಾರ ಹೆಚ್ಚೂಕಡಿಮೆ 60 ರೂ ಸಮೀಪದವರೆಗೂ ಷೇರುಬೆಲೆ ಏರಿತ್ತು. ಮಧ್ಯಾಹ್ನಕ್ಕೆ 57 ರೂ ಆಸುಪಾಸಿನಲ್ಲಿ ಅದರ ಬೆಲೆ ಇದೆ.

ಮಾರ್ಚ್ ಮೂರನೇ ವಾರದಲ್ಲಿ 23 ರೂನಷ್ಟಿದ್ದ ಉಜ್ಜೀವನ್ ಬ್ಯಾಂಕ್ ಆರು ತಿಂಗಳಲ್ಲಿ ಬಹುತೇಕ ಮೂರು ಪಟ್ಟು ಬೆಲೆ ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ: ಐಟಿ ಉದ್ಯೋಗಿಗಳ ವರ್ಕ್ ಫ್ರಂ ಹೋಮ್ ಸವಲತ್ತು ಪೂರ್ಣ ನಿಲ್ಲುತ್ತಾ? ಕಚೇರಿ ಹೋಗಿ ಕೆಲಸ ಮಾಡುವುದು ಕಡ್ಡಾಯ?

ಇನ್ನು, ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರುಬೆಲೆ 580 ರೂ ಆಸುಪಾಸಿನಲ್ಲಿದೆ. ಮುಂದಿನ ತಿಂಗಳು ಬ್ಯಾಂಕ್ ಜೊತೆ ಫೈನಾನ್ಷಿಯಲ್ ಸರ್ವಿಸಸ್ ವಿಲೀನಗೊಳ್ಳುವ ನಿರ್ಧಾರ ಅಂತಿಮಗೊಳ್ಳುತ್ತದಾ ಕಾದುನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Wed, 4 October 23