ಪ್ರಧಾನಿ ಮೋದಿಯವರ ಆ ಘೋಷಣೆಯಿಂದಾಗಿ… 12 ವರ್ಷದಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 70 ವರ್ಷದ ರೈತ ನಾಯಕ ಕಾಲಿಗೆ ಚಪ್ಪಲಿ ಹಾಕಿದರು! ಏನಿದರ ವೃತ್ತಾಂತ?

ಮಹಬೂಬ್ ನಗರದಲ್ಲಿ  ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಹಳದಿ ಬೋರ್ಡ್ ಸ್ಥಾಪನೆಯ ಘೋಷಣೆ ಮಾಡಿದರು. ಈ ಮೂಲಕ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಿದೆ. ಆದರೆ ಈ ಭರವಸೆ ಈಡೇರುವುದಕ್ಕೂ ಮುನ್ನ, ರಾಜ್ಯದಲ್ಲಿ ಹಳದಿ ಮಂಡಳಿ ಸ್ಥಾಪನೆ ಮಾಡುವವರೆಗೂ ಬರಿಗಾಲಿನಲ್ಲಿ (Footwear) ನಡೆಯುವುದಾಗಿ ರೈತ ಮನೋಹರ ಶಂಕರ್ ರೆಡ್ಡಿ ದೀಕ್ಷೆ ತೊಟ್ಟಿದರು ಎಂಬುದು ದಾಖಲಾರ್ಹ ಸಂಗತಿ.

ಪ್ರಧಾನಿ ಮೋದಿಯವರ ಆ ಘೋಷಣೆಯಿಂದಾಗಿ... 12 ವರ್ಷದಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 70 ವರ್ಷದ ರೈತ ನಾಯಕ ಕಾಲಿಗೆ ಚಪ್ಪಲಿ ಹಾಕಿದರು! ಏನಿದರ ವೃತ್ತಾಂತ?
ಅರಿಶಿನ ಮಂಡಳಿ ಸ್ಥಾಪನೆ ಘೋಷಿಸಿದ ಪ್ರಧಾನಿ ಮೋದಿ, 12 ವರ್ಷದಿಂದ ಬರಿಗಾಲು ದಾಸಯ್ಯ ಆಗಿದ್ದ 70 ವರ್ಷದ ರೈತ ಕಾಲಿಗೆ ಚಪ್ಪಲಿ ಹಾಕಿದರು!
Follow us
|

Updated on:Oct 03, 2023 | 12:55 PM

ದೇಶದಲ್ಲಿ ಅರಿಶಿನ ಬೆಳಗಾರರಿಗೆ ತೆಲಂಗಾಣ ಮಣ್ಣಿನಿಂದ ಉಡುಗೊರೆ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ( PM Narendra Modi) ಮೊನ್ನೆ ಭಾನುವಾರ ಘೋಷಿಸಿರುವಂತೆ ರಾಷ್ಟ್ರೀಯ ಅರಿಶಿನ ಮಂಡಳಿ (National Turmeric Board) ರಚನೆಯಾಗುತ್ತಿರುವುದು ಇಡೀ ತೆಲಂಗಾಣ ಜನತೆಯಷ್ಟೇ ಅಲ್ಲ ದೇಶದ ಎಲ್ಲಾ ಅರಿಶಿನ ರೈತರಿಗೆ (Farmers) ಇದೊಂದು ಸಮಾಧಾನದ ಮತ್ತು ಸಂತೋಷದ ಸುದ್ದಿಯಾಗಿದೆ. ಅದರಲ್ಲೂ ರೈತ ಮುತ್ಯಾಲ ಮನೋಹರ್ ರೆಡ್ಡಿಯವರಿಗೆ ಇದು ಒಳ್ಳೆಯ ಸುದ್ದಿಗಿಂತ ದೊಡ್ಡ ಸುದ್ದಿಯಾಗಿದೆ. ಯಾಕೆಂದರೆ ಅವರು ಈ ಬೇಡಿಕೆ ಮುಂದಿಟ್ಟು ಸಂಕಲ್ಪ ಮಾಡಿದ್ದರು. ಅವರು ಇಂತಹ ಮಂಡಳಿಯ ಅಸ್ತಿತ್ವಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದರು. ಯಾರು ಈ ರೈತ? ಅವರ ಬೇಡಿಕೆ/ಸಂಕಲ್ಪ ಏನಾಗಿತ್ತು ಎಂಬ ವಿವರಗಳನ್ನು ನೋಡುವುದಾದರೆ…

ಅಂದಹಾಗೆ ಭಾರತವು ಅರಿಶಿನದ ಪ್ರಮುಖ ಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ. ಅರಿಶಿನದ ಜೊತೆಗೆ ಈಗಾಗಲೇ ಚಹಾ, ಕಾಫಿ, ಮಸಾಲೆಗಳು, ಸೆಣಬು, ತೆಂಗಿನಕಾಯಿ ಇತ್ಯಾದಿಗಳ ಬೋರ್ಡ್‌ಗಳಿವೆ. ಈ ಮಂಡಳಿಗಳು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಹಾಯ ಮಾಡುತ್ತವೆ, ಜೊತೆಗೆ ಅವರ ಇತರ ಕೃಷಿ ಅಗತ್ಯಗಳನ್ನು ನೋಡಿಕೊಳ್ಳುತ್ತವೆ. ಪ್ರಸ್ತುತ ಅರಿಶಿನದ ಬೆಲೆ 10 ಸಾವಿರ ರೂಪಾಯಿಯಷ್ಟಿದ್ದು, ಇದೀಗ ಮಂಡಳಿಯ ರಚನೆ ನಂತರ ಅದು 20 ಸಾವಿರ ರೂಪಾಯಿಗೆ ತಲುಪುವ ಆಶಯದಲ್ಲಿದ್ದಾರೆ ಅರಿಶಿನ ಬೆಳೆಗಾರರು.

ಮಹಬೂಬ್ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಹಳದಿ ಬೋರ್ಡ್ ಸ್ಥಾಪನೆಯ ಘೋಷಣೆ ಮಾಡಿದರು. ಈ ಮೂಲಕ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಿದೆ. ಆದರೆ ಈ ಭರವಸೆ ಈಡೇರುವುದಕ್ಕೂ ಮುನ್ನ, ರಾಜ್ಯದಲ್ಲಿ ಹಳದಿ ಮಂಡಳಿ ಸ್ಥಾಪನೆ ಮಾಡುವವರೆಗೂ ಬರಿಗಾಲಿನಲ್ಲಿ (Footwear) ನಡೆಯುವುದಾಗಿ ರೈತ ಮನೋಹರ ಶಂಕರ್ ರೆಡ್ಡಿ ದೀಕ್ಷೆ ತೊಟ್ಟಿದರು. ಪ್ರಧಾನಿ ಮೋದಿಯವರ ಈ ನೂತನ ಘೋಷಣೆಯೊಂದಿಗೆ ಅವರ ಸಂಕಲ್ಪ ಈಡೇರಿದೆ. ಆದರೆ ದುರಾದೃಷ್ಟವೆಂದರೆ ಇಂದು ಶಂಕರ ರೆಡ್ಡಿಗೆ ಕೃಷಿ ಮಾಡಲು ಜಮೀನಿಲ್ಲ. ವ್ಯಾಪಾರದಲ್ಲಿ ಆದ ನಷ್ಟವನ್ನು ಭರಿಸಲು ರೈತ ಮನೋಹರ್ ಶಂಕರ್ ರೆಡ್ಡಿ ತನ್ನ ಜಮೀನನ್ನೆಲ್ಲ ಮಾರಿದ್ದಾರೆ.

ಇದನ್ನೂ ಓದಿ: ಒಣ ಅರಿಶಿನ ಪುಡಿಗಿಂತ ಹಸಿ ಅರಿಶಿನ ಹೆಚ್ಚು ಪ್ರಯೋಜನಕಾರಿ, ಅದನ್ನು ಹೇಗೆ ಬಳಸುವುದು ತಿಳಿಯೋಣ

ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ಮಂಡಲದ ಪಾಲೆಮ್ ಗ್ರಾಮದ ನಿವಾಸಿ ಮನೋಹರ್ ಶಂಕರ್ ಅವರು ಈ ಹಿಂದೆ ಅರಿಶಿನ ಬೆಳೆಗಾರರಿಗಾಗಿ ಅರಿಶಿನ ಬೋರ್ಡ್ ಸ್ಥಾಪಿಸಲು ಒತ್ತಾಯಿಸಿದ್ದರು. ಸ್ವತಃ ಅವರೂ ಅರಿಶಿನ ಬೆಳೆಸುತ್ತಿದ್ದರು. ನವೆಂಬರ್ 4, 2011 ರಂದು ಅವರು ಅರಿಶಿನ ಬೋರ್ಡ್ ಸ್ಥಾಪಿಸುವವರೆಗೆ ಶೂ ಅಥವಾ ಚಪ್ಪಲಿಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅಷ್ಟೇ ಅಲ್ಲ ಪಾಲಿಕೆ ಸದಸ್ಯನಾಗುವ ಆಸೆಯಿಂದ ಆದಿಲಾಬಾದ್ ಜಿಲ್ಲೆಯ ಇಚೋಡದಿಂದ ತಿರುಪತಿಯ ವೆಂಕಟೇಶ್ವರನ ಬಟ್ಟಕ್ಕೆ 63 ದಿನಗಳ ಕಾಲ ಬರಗಾಲಲ್ಲಿ ಪಾದಯಾತ್ರೆಯನ್ನೂ ಮಾಡಿದ್ದರು. ಇಂದು ಟಿವಿಯಲ್ಲಿ ಅರಶಿನ ಬೋರ್ಡ್ ಸ್ಥಾಪಿಸುವ ಘೋಷಣೆ ಕೇಳಿದ ತಕ್ಷಣ ಮನೋಹರ್ ಶಂಕರ್ ರೆಡ್ಡಿ ಅವರು ದೇವರ ದಯೆ ಎಂದು ಸಂತಸ ವ್ಯಕ್ತಪಡಿಸಿದರು. ಮಂಡಳಿಯ ಘೋಷಣೆ ಬಳಿಕ ರೈತ ಶಂಕರ್ ರೆಡ್ಡಿ ಅವರಿಗೆ ರೈತರು ಹೊಸ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಹಿಂದೆ ರೈತ ಮನೋಹರ್ ಶಂಕರ್ ರೆಡ್ಡಿ ಕೂಡ 11 ವಾರಗಳ ದೀಕ್ಷಾ ಯಾತ್ರೆ ಕೈಗೊಂಡಿದ್ದರು. ಆ ಯಾತ್ರೆಯ ವೇಳೆ ಅವರು ಆರ್ಮರ್ ಮತ್ತು ಬಾಲ್ಕೊಂಡ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಿದ್ದರು. ಹೀಗಾಗಿಯೇ ಅವರಿಗೆ ‘ಅರಿಶಿನದ ಮನೋಹರ ರೆಡ್ಡಿ’ ಎಂಬ ಹೆಸರು ಬಂದಿದೆ. ಯಾತ್ರೆಯ ಅವರ ಪರಿಸ್ಥಿತಿಯನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಹಿತೈಷಿಗಳು ಶಂಕರ ರೆಡ್ಡಿ ಅವರಿಗೆ ಚಪ್ಪಲಿಗಳನ್ನು ಧರಿಸುವಂತೆ ಮನವಿ ಮಾಡಿಕೊಂಡರು. ಆದರೆ ಶಂಕರರೆಡ್ಡಿ ಆಗ ಯಾರ ಮಾತನ್ನೂ ಕೇಳಲಿಲ್ಲ. ಕೊನೆಗೆ ಮಂಡಳಿಯ ಘೋಷಣೆ ಬಳಿಕ ರೈತರು ಉಡುಗೊರೆಹಯಾಗಿ ನೀಡಿದ ಹೊಸ ಚಪ್ಪಲಿಯನ್ನು ಶಂಕರರೆಡ್ಡಿ ಅವರು ಕೊನೆಗೂ ಧರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:54 pm, Tue, 3 October 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ