AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್​ನಿಂದ ಇನ್ನಷ್ಟು ಲೇ ಆಫ್; ವರ್ಚುವಲ್ ರಿಯಾಲಿಟಿ ಟೀಮ್​ಗೆ ಕಾದಿದೆಯಾ ಸಂಕಷ್ಟ?

Meta Layoffs: ಮಾರ್ಕ್ ಜುಕರ್ಬರ್ಗ್ ನೇತೃತ್ವದ ಮೆಟಾ ಸಂಸ್ಥೆ ಮತ್ತೊಂದು ಸುತ್ತಿನ ಉದ್ಯೋಗಕಡಿತಕ್ಕೆ ಹಾಕುತ್ತಿರುವ ಸುದ್ದಿ ಕೇಳಿಬಂದಿದೆ. ಆಂತರಿಕವಾಗಿ ಮೆಟಾ ಉತ್ಪನ್ನಗಳಿಗೆ ಬಲ ನೀಡಲು ಬೇಕಾದ ಚಿಪ್​ಸೆಟ್​ಗಳನ್ನು ತಯಾರಿಸುವ ಫಾಸ್ಟ್ ಎಂಬ ಟೀಮ್​ನಲ್ಲಿ ಲೇ ಆಫ್ ಆಗಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮೆಟಾದಿಂದ ಅಧಿಕೃತ ಹೇಳಿಕೆ ಬಂದಿಲ್ಲ.

ಫೇಸ್​ಬುಕ್​ನಿಂದ ಇನ್ನಷ್ಟು ಲೇ ಆಫ್; ವರ್ಚುವಲ್ ರಿಯಾಲಿಟಿ ಟೀಮ್​ಗೆ ಕಾದಿದೆಯಾ ಸಂಕಷ್ಟ?
ಮೆಟಾ ಸಂಸ್ಥೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2023 | 12:05 PM

ನವದೆಹಲಿ, ಅಕ್ಟೋಬರ್ 4: ಪ್ರಖ್ಯಾತ ಮೆಸೇಜಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಾದ ವಾಟ್ಸಾಪ್, ಫೇಸ್ಬುಕ್, ಇನ್ಸ್​ಟಾಗ್ರಾಮ್​ನ ಮಾಲಕ ಸಂಸ್ಥೆ ಮೆಟಾ (Meta platforms) ಮತ್ತೊಂದು ಸುತ್ತಿನ ಲೇ ಆಫ್ (layoffs) ನಡೆಸುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಪ್ರಕಾರ ಮೆಟಾದ ವರ್ಚುವಲ್ ರಿಯಾಲಿಟಿ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ತಂಡದಲ್ಲಿ ಈ ಲೇ ಆಫ್ ನಡೆಯಬಹುದು ಎನ್ನಲಾಗಿದೆ. ಮೆಟಾ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಮಾರ್ಕ್ ಜುಕರ್​ಬರ್ಗ್ ಮಾಲಕತ್ವದ ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ತಯಾರಿಸುವತ್ತ ಸಾಕಷ್ಟು ಗಮನ ಮತ್ತು ಸಂಪನ್ಮೂಲ ವ್ಯಯಿಸುತ್ತಿದೆ. ಈ ಉತ್ಪನ್ನಗಳನ್ನು ತಯಾರಿಸುವ ಅದರ ಒಂದು ಘಟಕ ಫೇಸ್​ಬುಕ್ ಎಜೈಲ್ ಸಿಲಿಕಾನ್ ಟೀಮ್ (FAST- facebook agile silicon team). ಈ ತಂಡದಲ್ಲಿ 600 ಉದ್ಯೋಗಿಗಳಿದ್ದು, ಅವರಲ್ಲಿ ಹೆಚ್ಚಿನ ಮಂದಿಯನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕದ ಕ್ರಿಪ್ಟಾನ್, ಟೆಕ್ಸಾಸ್ ಇನ್ಸ್​ಟ್ರುಮೆಂಟ್ಸ್, ಇಆರ್​ಪಿ ಲಾಜಿಕ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆ ಸಾಧ್ಯತೆ

ಮೆಟಾದ ಸಾಧನಗಳ ಕ್ಷಮತೆ ಹೆಚ್ಚಿಸಲು ಚಿಪ್​ಗಳನ್ನು ಡಿಸೈನ್ ಮಾಡಿಕೊಡುವುದು ಈ ಫಾಸ್ಟ್ ಟೀಮ್​ನ ಕೆಲಸವಾಗಿದೆ. ಆದರೆ, ನಿರೀಕ್ಷಿತ ರೀತಿಯಲ್ಲಿ ಉತ್ತಮ ಚಿಪ್​ಗಳನ್ನು ತಯಾರಿಸಲು ಈ ತಂಡ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕ್ವಾಲ್​ಕಾಮ್ ಎಂಬ ಕಂಪನಿಯಿಂದ ಮೆಟಾ ತನಗೆ ಬೇಕಾದ ಚಿಪ್​ಗಳನ್ನು ಮಾಡಿಸುತ್ತಿದೆ. ತನ್ನ ಫಾಸ್ಟ್ ಟೀಮ್​ನಿಂದ ನಿರೀಕ್ಷಿತ ಮಟ್ಟದಲ್ಲಿ ಉತ್ಪನ್ನ ಬರದೇ ಇರುವುದು ಮೆಟಾವನ್ನು ಒತ್ತಡಕ್ಕೆ ಸಿಲುಕಿಸಿದೆ. ಇತ್ತೀಚೆಗಷ್ಟೇ ಈ ವಿಭಾಗಕ್ಕೆ ಹೊಸ ಎಕ್ಸಿಕ್ಯೂಟಿವ್ ಅವರನ್ನು ನೇಮಕ ಮಾಡಿಕೊಂಡಿತ್ತು.

ಇದನ್ನೂ ಓದಿ: ಐಟಿ ಉದ್ಯೋಗಿಗಳ ವರ್ಕ್ ಫ್ರಂ ಹೋಮ್ ಸವಲತ್ತು ಪೂರ್ಣ ನಿಲ್ಲುತ್ತಾ? ಕಚೇರಿ ಹೋಗಿ ಕೆಲಸ ಮಾಡುವುದು ಕಡ್ಡಾಯ?

ಮೆಟಾ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ವರ್ಚುವಲ್ ರಿಯಾಲಿಟಿ (VR), ಆಗ್ಮೆಂಟೆಡ್ ರಿಯಾಲಿಟಿ (AR) ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಿದೆ. ಮಾಮೂಲಿಯ ಕನ್ನಡಕ (ಸನ್ ಗ್ಲಾಸ್) ರೀತಿಯ ಸರಳ ವಿನ್ಯಾಸ ಹೊಂದಿರುವ ಎಆರ್ ಗ್ಲಾಸ್​ಗಳನ್ನು ಮೆಟಾ ಅಭಿವೃದ್ಧಿಪಡಿಸುತ್ತಿದೆ. ಸ್ಮಾರ್ಟ್​ವಾಚ್​ಗಳ ಜೊತೆ ಬರುವ ಎಆರ್ ಗ್ಲಾಸ್​ಗಳು ಮುಂದಿನ ವರ್ಷ ಸಿದ್ಧಗೊಳ್ಳುವ ನಿರೀಕ್ಷೆ ಇದ್ದು, ಒಂದೆರಡು ವರ್ಷದಲ್ಲಿ ಮಾರುಕಟ್ಟೆಗೆ ಅಡಿ ಇಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ