ಮತ್ತಷ್ಟು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಖರೀದಿ ಕುರಿತು ಭಾರತದೊಂದಿಗೆ ಮಾತುಕತೆ; ರಷ್ಯಾದ ರಾಯಭಾರಿ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ರಷ್ಯಾ ತೀವ್ರವಾಗಿ ಖಂಡಿಸಿದೆ. ರಷ್ಯಾದ ರಾಯಭಾರಿ ಈ ಘಟನೆಯನ್ನು ಘೋರ ಅಪರಾಧ ಎಂದು ಕರೆದಿದ್ದಾರೆ ಮತ್ತು ರಷ್ಯಾ ಭಾರತದ ಜೊತೆ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಈ ದಾಳಿಯ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ರಷ್ಯಾದ ರಾಯಭಾರಿ ಬ್ರಹ್ಮೋಸ್ ಕ್ಷಿಪಣಿಯ ಯಶಸ್ಸು ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಎಸ್-400 ವ್ಯವಸ್ಥೆಯ ಬಳಕೆಯ ಬಗ್ಗೆಯೂ ಮಾತನಾಡಿದ್ದಾರೆ. ಭಾರತ ಮತ್ತು ಮಾಸ್ಕೋ ನಡುವೆ ಹೆಚ್ಚಿನ S-400 ವಾಯು ರಕ್ಷಣಾ ವ್ಯವಸ್ಥೆಯ ಘಟಕಗಳ ಖರೀದಿ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.

ನವದೆಹಲಿ, ಮೇ 28: ಆಪರೇಷನ್ ಸಿಂಧೂರ್ (Operation Sindoor), ಭಯೋತ್ಪಾದನೆ ವಿರುದ್ಧ ಭಾರತದ ಕ್ರಮ, ಸೇನೆಯ ಧೈರ್ಯ ಮತ್ತು ಎಸ್-400 ಬಳಕೆಯ ಬಗ್ಗೆ ಮಾತನಾಡಿದ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್, ಭಾರತವು ಗುರಿಗಳನ್ನು ಸ್ಪಷ್ಟವಾಗಿ ತಿಳಿಸಿದೆ ಮತ್ತು ಕ್ರಮ ಕೈಗೊಂಡಿದೆ. ಭಾರತವು ತನ್ನ ಟಾರ್ಗೆಟ್ ಗುರುತಿಸಿದ್ದು, ಭಯೋತ್ಪಾದಕರನ್ನು ಕೊಲ್ಲಲಾಗುವುದು ಎಂದು ಹೇಳಿದೆ. ನಮಗೆ ತಿಳಿದಿರುವಂತೆ, ಕಾರ್ಯಾಚರಣೆಯ ಸಮಯದಲ್ಲಿ ಎಸ್-400 ಬಳಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿಗಳು ಸಹ ಇದರಲ್ಲಿ ಸೇರಿವೆ. ಈ ಆಯುಧಗಳ ಕಾರ್ಯಕ್ಷಮತೆ ಅತ್ಯುತ್ತಮವಾಗಿತ್ತು ಎಂದಿದ್ದಾರೆ. ಹಾಗೇ, ಭಾರತ ಹೆಚ್ಚುವರಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂಬ ವರದಿಗಳ ಬಗ್ಗೆ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಮಾತನಾಡಿದ್ದು, ಇತರ ಹಲವು ವಿಷಯಗಳಂತೆ ಈ ವಿಷಯದ ಬಗ್ಗೆ ನಮ್ಮ ಚರ್ಚೆ ಮುಂದುವರೆದಿದೆ ಎಂದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತಕ್ಕೆ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿದ್ದಾರೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯು ಘೋರ ಅಪರಾಧ ಎಂದು ಅವರು ಹೇಳಿದ್ದಾರೆ. ರಷ್ಯಾ ಸೇರಿದಂತೆ ಹಲವು ದೇಶಗಳು ಭಾರತಕ್ಕೆ ಬೆಂಬಲವಾಗಿ ಪ್ರತಿಕ್ರಿಯಿಸಿದವು.
IANS Exclusive
Delhi: Russian Ambassador to India, Denis Alipov on the reports that India is seeking to purchase additional S-400 air defense systems says, “Our discussion on this particular topic as on many other is ongoing. It is a continuous one but it would be incorrect for… pic.twitter.com/y7GwM8NTtq
— IANS (@ians_india) May 28, 2025
ಈ ದಾಳಿಯ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ತಿಳಿದ ತಕ್ಷಣ ಅವರು ಪ್ರಧಾನಿ ಮೋದಿ ಅವರಿಗೆ ವಿಶೇಷ ಸಂದೇಶವನ್ನು ಕಳುಹಿಸಿದರು. ಅದರಲ್ಲಿ ಅವರು ತಮ್ಮ ಸಂತಾಪ ಸೂಚಿಸಿದರು. ಅಪರಾಧಿಗಳನ್ನು ಗುರುತಿಸಿ, ಪತ್ತೆಹಚ್ಚಿ ಶಿಕ್ಷೆ ವಿಧಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
IANS Exclusive
Delhi: On PM Narendra Modi, Russian Ambassador to India, Denis Alipov says, “I don’t think there is anybody anywhere in the world that doubts the credentials of Prime Minister Modi. His strong leadership is steering the country to global prominence…” pic.twitter.com/EKRjYdGS65
— IANS (@ians_india) May 28, 2025
ಇದನ್ನೂ ಓದಿ: Narendra Modi: ಮೇ 29ರಿಂದ ಎರಡು ದಿನ ಈ ನಾಲ್ಕು ರಾಜ್ಯಗಳಿಗೆ ಪ್ರಧಾನಿ ಮೋದಿ ಭೇಟಿ
IANS Exclusive
Delhi: When asked about Operation Sindoor, India’s anti-terror response, forces’ courage & use of S-400, Russian Ambassador to India, Denis Alipov said,”…India has clearly stated the goals and undertook actions, having identified the targets, the terrorists it… pic.twitter.com/BtAnVZZbyo
— IANS (@ians_india) May 28, 2025
ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಮಾತನಾಡಿ, “ಭಯೋತ್ಪಾದನೆ ಗಡಿಯಾಚೆಯಿಂದಾಗಲಿ ಅಥವಾ ಇನ್ನಾವುದೇ ರೀತಿಯದ್ದಾಗಲಿ, ಅದರ ಬಗ್ಗೆ ಯಾವುದೇ ದ್ವಿಮುಖ ನೀತಿ ಇರಬಾರದು ಎಂದು ನಾವು ಯಾವಾಗಲೂ ಹೇಳಿದ್ದೇವೆ” ಎಂದು ಹೇಳಿದರು.
IANS Exclusive
Delhi: Russian Ambassador to India, Denis Alipov says, “BrahMos missiles are manufactured in India. It is an Indian product, a product of the Joint collaboration with Russia. We have a joint venture designing and producing the these weapons and we have very… pic.twitter.com/alCzNgvHHn
— IANS (@ians_india) May 28, 2025
ಅಲಿಪೋವ್ ಬ್ರಹ್ಮೋಸ್ ಕ್ಷಿಪಣಿಯ ಬಗ್ಗೆಯೂ ಅವರು ಮಾತನಾಡಿದರು. ಈ ಕ್ಷಿಪಣಿಯನ್ನು ಭಾರತದಲ್ಲಿಯೇ ತಯಾರಿಸಲಾಗಿದೆ ಎಂದು ಅವರು ಹೇಳಿದರು. ಇದು ರಷ್ಯಾದೊಂದಿಗಿನ ಜಂಟಿ ಸಹಕಾರದ ಭಾರತೀಯ ಉತ್ಪನ್ನವಾಗಿದೆ.
IANS Exclusive
Delhi: On Pahalgam terror attack, Russian Ambassador to India, Denis Alipov says,”You know, it was an heinous crime, a outrageous attack that happened on April 22. And it was widely condemned. And the support of India was expressed by all Russia included… pic.twitter.com/uMRuQtVnsp
— IANS (@ians_india) May 28, 2025
ಈ ಶಸ್ತ್ರಾಸ್ತ್ರಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಜಂಟಿ ಉದ್ಯಮವನ್ನು ನಾವು ಹೊಂದಿದ್ದೇವೆ. ಮುಂದೆ ಕಾರ್ಯಗತಗೊಳಿಸಲಾಗುತ್ತಿರುವ ಹಲವಾರು ಇತರ ಯೋಜನೆಗಳನ್ನು ವಿಸ್ತರಿಸಲು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








