ಅಮೆರಿಕದ ಅಧೀನ ಕಾರ್ಯದರ್ಶಿ ಜೆಫ್ರಿಯನ್ನು ಭೇಟಿಯಾದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಅಮೆರಿಕದ ಅಧೀನ ಕಾರ್ಯದರ್ಶಿ ಜೆಫ್ರಿ ಕೆಸ್ಲರ್ ನಡುವಿನ ಸಭೆಯಲ್ಲಿ, ನಿರ್ಣಾಯಕ ತಂತ್ರಜ್ಞಾನ ಮತ್ತು ವ್ಯವಹಾರ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಅತ್ಯಾಧುನಿಕ ತಂತ್ರಜ್ಞಾನ, ವ್ಯವಹಾರ ಮತ್ತು ನೀತಿ ಸಂವಹನದಲ್ಲಿ ಭಾರತ-ಅಮೆರಿಕ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ವಿಕ್ರಮ್ ಮಿಸ್ರಿ ಮತ್ತು ಜೆಫ್ರಿ ಕೆಸ್ಲರ್ ತೀವ್ರ ಚರ್ಚೆ ನಡೆಸಿದ್ದು, ಈ ವರ್ಷ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯ ಪ್ರಗತಿಯ ಭಾಗವಾಗಿದೆ.

ವಾಷಿಂಗ್ಟನ್, ಮೇ 28: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ(Vikram Misri) ಇಂದು ಅಮೆರಿಕದ ಅಧೀನ ಕಾರ್ಯದರ್ಶಿ ಜೆಫ್ರಿ ಕೆಸ್ಲರ್ನ್ನು ಭೇಟಿಯಾಗಿದ್ದಾರೆ. ಉತ್ತಮ ತಂತ್ರಜ್ಞಾನಗಳ ಮೂಲಕ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಕುರಿತು ಇಬ್ಬರ ನಡುವೆ ಚರ್ಚೆ ನಡೆಯಿತು. ಈ ಮಾಹಿತಿಯನ್ನು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದೆ. ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ನೀಡಿದ ಭೇಟಿಯ ಮುಂದುವರಿದ ಭಾಗವಾಗಿ ವಿಕ್ರಮ್ ಮಿಸ್ರಿ ಅವರ ಈ ಭೇಟಿ ನಡೆದಿದೆ.
ಪ್ರಮುಖ ವಿಷಯಗಳ ಕುರಿತು ಚರ್ಚೆ ಕೆಸ್ಲರ್ ಅವರೊಂದಿಗಿನ ಸಭೆಯಲ್ಲಿ ಮಿಸ್ರಿ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತ-ಯುಎಸ್ ಸಹಕಾರವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ತಂತ್ರಜ್ಞಾನ ಮತ್ತು ವ್ಯವಹಾರ ಸಹಕಾರವನ್ನು ಬಲಪಡಿಸಲು ಭಾರತ-ಯುಎಸ್ ಕಾರ್ಯತಂತ್ರದ ವ್ಯಾಪಾರ ಸಂವಾದವನ್ನು ಶೀಘ್ರವಾಗಿ ನಡೆಸುವ ಬಗ್ಗೆಯೂ ಅವರು ಚರ್ಚಿಸಿದರು ಎಂದು ರಾಯಭಾರ ಕಚೇರಿ ತಿಳಿಸಿದೆ.
ಇದಕ್ಕೂ ಮೊದಲು, ವಿದೇಶಾಂಗ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಿಸ್ರಿ ಮೇ 27 ರಿಂದ 29 ರವರೆಗೆ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಅಮೆರಿಕದ ಆಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿತ್ತು.
ಮತ್ತಷ್ಟು ಓದಿ: ಡೊನಾಲ್ಡ್ ಟ್ರಂಪ್ನ್ನೂ ಬಿಡದ ಸೈಬರ್ ವಂಚಕರು: ರಾಜ್ಯದ ನೂರಾರು ಜನರಿಂದ ಕೋಟ್ಯಂತರ ರೂ ವಂಚನೆ
ಫೆಬ್ರವರಿ 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದರ ಮುಂದುವರಿದ ಭಾಗವಾಗಿ ಈ ಭೇಟಿ ಎಂದು ಸಚಿವಾಲಯ ಹೇಳಿತ್ತು. ಎರಡೂ ದೇಶಗಳು ‘ಭಾರತ-ಯುಎಸ್ ಕಾಂಪ್ಯಾಕ್ಟ್’ (ಮಿಲಿಟರಿ ಪಾಲುದಾರಿಕೆ, ವೇಗವರ್ಧಿತ ವಾಣಿಜ್ಯ ಮತ್ತು ತಂತ್ರಜ್ಞಾನಕ್ಕಾಗಿ ಅವಕಾಶಗಳನ್ನು ಉತ್ತೇಜಿಸುವುದು) ಎಂಬ ಹೊಸ ಪಾಲುದಾರಿಕೆಯನ್ನು ಪ್ರಾರಂಭಿಸಿವೆ.
Foreign Secretary Vikram Misri met Under Secretary Jeffrey Kessler to advance 🇮🇳🇺🇸 cooperation in critical & emerging technologies. They also discussed early convening of the India-US Strategic Trade Dialogue to deepen tech & trade collaboration. pic.twitter.com/QocLyCMVQd
— India in USA (@IndianEmbassyUS) May 28, 2025
ಪ್ರಧಾನಿ ಮೋದಿಯವರ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಿಕೊಂಡವು. ಜನವರಿಯಲ್ಲಿ ಅಧ್ಯಕ್ಷ ಟ್ರಂಪ್ ತಮ್ಮ ಎರಡನೇ ಅವಧಿಯನ್ನು ಆರಂಭಿಸಿದ ನಂತರ ಇದು ಪ್ರಧಾನಿ ಮೋದಿ ಅವರ ಮೊದಲ ಅಮೆರಿಕ ಭೇಟಿಯಾಗಿದೆ. ಗಮನಾರ್ಹವಾಗಿ, ಹೊಸ ಆಡಳಿತದ ಅಡಿಯಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಿದ ಮೊದಲ ಜಾಗತಿಕ ನಾಯಕರಲ್ಲಿ ಮೋದಿ ಕೂಡ ಒಬ್ಬರು, ಟ್ರಂಪ್ ಅಧಿಕಾರ ವಹಿಸಿಕೊಂಡ ಮೂರು ವಾರಗಳೊಳಗೆ ಅವರನ್ನು ಆಹ್ವಾನಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:59 am, Wed, 28 May 25




