ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು; ದ್ವೀಪ ರಾಷ್ಟ್ರಕ್ಕೆ 3,050 ಮೆಟ್ರಿಕ್ ಟನ್ ಉಪ್ಪು ಕಳುಹಿಸಿದ ಭಾರತ
ಉಪ್ಪು ಉತ್ಪಾದಕರ ಸಂಘದ ಪ್ರಕಾರ, 30,000 ಮೆಟ್ರಿಕ್ ಟನ್ ಅಯೋಡಿಕರಿಸದ ಉಪ್ಪನ್ನು ಆಮದು ಮಾಡಿಕೊಳ್ಳುವಲ್ಲಿ ವಿಳಂಬವಾಗಿರುವುದರಿಂದ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಸಮುದ್ರ ತೀರದಲ್ಲಿ ಸಂಗ್ರಹವಾಗಿದ್ದ ಉಪ್ಪು ಕೊಚ್ಚಿ ಹೋಗಿದೆ. ಶ್ರೀಲಂಕಾದಲ್ಲಿ ಉಪ್ಪಿನ ಬೆಲೆ 1 ಕೆಜಿಗೆ 145 ರೂ.ಗೆ ತಲುಪಿದೆ. ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಶ್ರೀಲಂಕಾ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿತ್ತು. ಶ್ರೀಲಂಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತ ಈಗ 3,050 ಮೆಟ್ರಿಕ್ ಟನ್ ಉಪ್ಪನ್ನು ಕಳುಹಿಸುವ ಮೂಲಕ ಶ್ರೀಲಂಕಾಕ್ಕೆ ಸಹಾಯಹಸ್ತ ಚಾಚಿದೆ.

ನವದೆಹಲಿ, ಮೇ 26: ನೆರೆಯ ದೇಶವಾದ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು (Sri Lanka Salt Crisis) ಹೆಚ್ಚಾಗಿದೆ. ಹೀಗಾಗಿ, ಬೆಲೆ ಏರಿಕೆಯ ನಡುವೆಯೂ ಭಾರತವು 3,050 ಮೆಟ್ರಿಕ್ ಟನ್‌ಗಳಷ್ಟು ಉಪ್ಪು ಪೂರೈಕೆಗೆ ಮುಂದಾಗಿದೆ. ಶ್ರೀಲಂಕಾ ಕರಾವಳಿಯಲ್ಲಿ ಉಪ್ಪಿನ ಬೆಳೆಗಳು ಭಾರೀ ಮಳೆಯಿಂದ ಕೊಚ್ಚಿಹೋಗಿ, ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಭಾರೀ ಹೆಚ್ಚಾಗಿದೆ. ಮಾನವೀಯತೆಯ ದೃಷ್ಟಿಯಿಂದ ಭಾರತವು 3,050 ಮೆಟ್ರಿಕ್ ಟನ್ ಉಪ್ಪನ್ನು ಶ್ರೀಲಂಕಾಕ್ಕೆ ರವಾನಿಸಿದೆ.
ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಭಾರತವನ್ನು ಬೆಂಬಲಿಸಿದ ಹಿಂದೂ ಮಹಾಸಾಗರದ ಭಾರತದ ಹತ್ತಿರದ ನೆರೆಯ ರಾಷ್ಟ್ರವಾದ ಶ್ರೀಲಂಕಾ, ಉಪ್ಪಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಲ್ಲಿ ಅಡುಗೆ ಸಾಮಗ್ರಿಗಳ ಬೆಲೆಗಳು 3 ಪಟ್ಟು ಮತ್ತು 4 ಪಟ್ಟು ಹೆಚ್ಚಾಗಿದೆ. ವರದಿಗಳ ಪ್ರಕಾರ, ಭಾರೀ ಮಳೆಯು ಸಮುದ್ರ ತೀರಗಳಲ್ಲಿ ಸಂಗ್ರಹವಾದ ಉಪ್ಪನ್ನು ಕೊಚ್ಚಿಹೋಗುವಂತೆ ಮಾಡಿದೆ. ಇದು ದ್ವೀಪ ರಾಷ್ಟ್ರದಲ್ಲಿ ತೀವ್ರ ಉಪ್ಪು ಬಿಕ್ಕಟ್ಟನ್ನು ಸೃಷ್ಟಿಸಿದೆ. ಉಪ್ಪಿನ ಕೊರತೆಯಿಂದಾಗಿ ಉಪ್ಪಿನ ಬೆಲೆಗಳು ಕೆ.ಜಿಗೆ 145 ರೂ.ಗಳಿಗೆ ಏರಿದೆ. ಆದರೂ ಸಂಗ್ರಹಣೆದಾರರು ಮತ್ತು ಕಪ್ಪು ಮಾರುಕಟ್ಟೆದಾರರು ಉಪ್ಪು ಸರಬರಾಜುಗಳನ್ನು ಸಂಗ್ರಹಿಸುವ ಮೂಲಕ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: ಆರಾಮಾಗಿ ಕೂತು ರೊಟ್ಟಿ ತಿನ್ನಿ, ಇಲ್ಲದಿದ್ದರೆ ನಮ್ಮ ಗುಂಡೇಟು ತಿನ್ನಿ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಭಾರತವು ತನ್ನ ನೆರೆಯ ರಾಷ್ಟ್ರಕ್ಕೆ 3,050 ಮೆಟ್ರಿಕ್ ಟನ್ ಉಪ್ಪನ್ನು ಕಳುಹಿಸುವ ಮೂಲಕ ಸಹಾಯ ಮಾಡಿದೆ. ಒಟ್ಟು ಸಾಗಣೆಯಲ್ಲಿ, ಸರ್ಕಾರಿ ಸ್ವಾಮ್ಯದ ಉಪ್ಪು ಕಂಪನಿಗಳು 2,800 ಮೆಟ್ರಿಕ್ ಟನ್‌ಗಳನ್ನು ರವಾನಿಸಿವೆ. ಆದರೆ ಉಳಿದ 250 ಮೆಟ್ರಿಕ್ ಟನ್‌ಗಳನ್ನು ಖಾಸಗಿ ಸಂಸ್ಥೆಗಳಿಂದ ಖರೀದಿಸಲಾಗಿದೆ ಎನ್ನಲಾಗಿದೆ. ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಶ್ರೀಲಂಕಾ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿತು. ಕೊಲಂಬೊ ಯಾವುದೇ ದೇಶವು ಭಾರತದ ವಿರುದ್ಧ ದಾಳಿ ನಡೆಸಲು ತನ್ನ ಭೂಮಿ ಮತ್ತು ನೀರನ್ನು ಬಳಸಲು ಅನುಮತಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು.
ಇದನ್ನೂ ಓದಿ: ಭಾರತ ಧರ್ಮಛತ್ರವಲ್ಲ; ಶ್ರೀಲಂಕಾ ವಲಸಿಗನಿಗೆ ಆಶ್ರಯ ನಿರಾಕರಿಸಿದ ಸುಪ್ರೀಂ ಕೋರ್ಟ್
ಶ್ರೀಲಂಕಾ ಎರಡು ವರ್ಷಗಳ ಹಿಂದೆ ನಿರ್ಣಾಯಕ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಇದು ಅಗತ್ಯ ವಸ್ತುಗಳ ಬೃಹತ್ ಕೊರತೆಯನ್ನು ಸೃಷ್ಟಿಸಿತು ಮತ್ತು ದೇಶವನ್ನು ಆಹಾರ ಅಭದ್ರತೆಯತ್ತ ತಳ್ಳಿತು. ಲಭ್ಯವಿರುವ ಮಾಹಿತಿಯ ಪ್ರಕಾರ, ವಿದೇಶಿ ವಿನಿಮಯ ಮೀಸಲು ಕ್ಷೀಣಿಸುವುದು, ಕೃಷಿ ವಲಯದಲ್ಲಿ ವಿಫಲವಾದ ಸರ್ಕಾರಿ ನೀತಿಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮುಂತಾದ ಹಲವಾರು ಅಂಶಗಳಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ದೇಶದ ಜನಸಂಖ್ಯೆಯ ಸುಮಾರು ಶೇ. 28ರಷ್ಟು ಅಂದರೆ 6 ಮಿಲಿಯನ್‌ಗಿಂತಲೂ ಹೆಚ್ಚು ಶ್ರೀಲಂಕಾದ ಜನರು ಆಹಾರ ಅಭದ್ರತೆಯನ್ನು ಎದುರಿಸಬೇಕಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




