AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾ: ಎಣ್ಣೆ ಕುಡಿದು, ಡ್ಯಾನ್ಸ್​ ಮಾಡುವಂತೆ ಸಹ ಸಂಸದರಿಂದ ಮುಸ್ಲಿಂ ಸಂಸದೆ ಫಾತಿಮಾಗೆ ಕಿರುಕುಳ

ಆಸ್ಟ್ರೇಲಿಯಾದ ಸ್ವತಂತ್ರ ಸೆನೆಟರ್ ಫಾತಿಮಾ ಪೇಮನ್ ಹಿರಿಯ ಸಹೋದ್ಯೋಗಿ ವಿರುದ್ಧ ಆರೋಪ ಮಾಡಿದ್ದಾರೆ.ಕಾರ್ಯಕ್ರಮವೊಂದರಲ್ಲಿ ತನಗೆ ಟೇಬಲ್​ ಮೇಲೆ ನಿಂತು ನೃತ್ಯ ಮಾಡುವಂತೆ, ಮದ್ಯಪಾನ ಮಾಡುವಂತೆ ಸಹೋದ್ಯೋಗಿಯೊಬ್ಬರು ಒತ್ತಾಯಿಸಿದ್ದರು. ಹಾಗೂ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು ಎಂದು ಫಾತಿಮಾ ಹೇಳಿದ್ದಾರೆ. ಹಿಜಾಬ್ ಧರಿಸಿ ಆಸ್ಟ್ರೇಲಿಯಾ ಸಂಸತ್ತು ಪ್ರವೇಶಿಸಿದ ಮೊದಲ ಸಂಸದೆ ಫಾತಿಮಾ

ಆಸ್ಟ್ರೇಲಿಯಾ: ಎಣ್ಣೆ ಕುಡಿದು, ಡ್ಯಾನ್ಸ್​ ಮಾಡುವಂತೆ ಸಹ ಸಂಸದರಿಂದ ಮುಸ್ಲಿಂ ಸಂಸದೆ ಫಾತಿಮಾಗೆ ಕಿರುಕುಳ
ಫಾತಿಮಾ
ನಯನಾ ರಾಜೀವ್
|

Updated on:May 28, 2025 | 10:37 AM

Share

ಆಸ್ಟ್ರೇಲಿಯಾದಲ್ಲಿ ಮುಸ್ಲಿಂ ಸಂಸದೆ ಫಾತಿಮಾ ಪೇಮನ್(Fatima Payman)​ಗೆ ಸಹ ಸಂಸದರು ಕಿರುಕುಳ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಟ್ರೇಲಿಯಾ ಸಂಸತ್​ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ಸಂಸದೆಯಾಗಿರುವ ಫಾತಿಮಾಗೆ ಟೇಬಲ್​ ಮೇಲೆ ಹತ್ತಿ ನೃತ್ಯ ಮಾಡಿ, ಎಣ್ಣೆ ಕುಡಿಯುವಂತೆ ಸಹ ಸಂಸದರು ಕಿರುಕುಳ ಕೊಟ್ಟಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಈ ಕುರಿತು ಎಬಿಸಿ ವರದಿ ಮಾಡಿದೆ, ಸೆನೆಟರ್ ಫಾತಿಮಾ ತಾನು ಮದ್ಯಪಾನ ಮಾಡುವುದಿಲ್ಲ  ನಿರಾಕರಿಸಿದ್ದಾಗಿ ಹೇಳಿದ್ದಾರೆ. ಸಮಾರಂಭವೊಂದರಲ್ಲಿ ಮದ್ಯದ ಮತ್ತಿನಲ್ಲಿದ್ದ ಹಿರಿಯ ಸಹೋದ್ಯೋಗಿಯೊಬ್ಬರು ಅನುಚಿತವಾಗಿ ಕಮೆಂಟ್ ಮಾಡಿದ್ದಾರೆ ಎಂದು ಫಾತಿಮಾ ಹೇಳಿದ್ದಾರೆ.

ನಿಮಗೂ ಕೂಡ ಮದ್ಯ ಕೊಡುತ್ತೇವೆ ಅದನ್ನು ಕುಡಿದು ಟೇಬಲ್​ ಮೇಲೆ ಡ್ಯಾನ್ಸ್​ ಮಾಡಿ ಎಂದು ಕೆಟ್ಟದಾಗಿ ಹೇಳಿದ್ದಾರೆಂದು ವರದಿಯಾಗಿದೆ.ಫಾತಿಮಾ ಅಫ್ಘಾನಿಸ್ತಾನದಲ್ಲಿ ಜನಿಸಿದರು. ಆಸ್ಟ್ರೇಲಿಯಾದ ಸಂಸತ್ತಿನೊಳಗೆ ಹಿಜಾಬ್ ಧರಿಸಿ ಬಂದ ಮೊದಲ ಸಂಸದೆ ಅವರು.

ಮತ್ತಷ್ಟು ಓದಿ: ಮನೆ ಬಾಗಿಲು ತೆರೆಯಲು ನಿರಾಕರಣೆ! ನಮ್ಮ ಮಗಳು ಯಾವುದೇ ಪ್ರತಿಕ್ರಿಯೆ ನೀಡಲ್ಲ; ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ತಂದೆ ಹೇಳಿಕೆ

ಸ್ವತಂತ್ರ ಸಂಸದೆ ಫಾತಿಮಾ 2024ರಲ್ಲಿ ಎಡಪಂಥೀಯ ಲೇಬರ್ ಸರ್ಕಾರದಿಂದ ಬೇರ್ಪಟ್ಟರು ಮತ್ತು ಗಾಜಾದಲ್ಲಿ ಪ್ಯಾಲೆಸ್ತೀನಿಯನ್ನರಿಗೆ ಸಹಾಯ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ಯಾವಾಗ ನಡೆದಿದೆ ಹಾಗೂ ಆ ಸಂಸದ ಯಾರು ಎನ್ನುವ ಕುರಿತು ಸ್ಪಷ್ಟವಾಗಿಲ್ಲ.

2021ರಲ್ಲಿ ಬ್ರಿಟಾನಿ ಹಿಗ್ಗಿನ್ಸ್​ ಎಂಬುವವರು ಸಂಸದೀಯ ಕಚೇರಿಯೊಳಗೆ ಸಹೋದ್ಯೋಗಿಯಿಂದ ಅತ್ಯಾಚಾರಕ್ಕೊಳಗಾಗಿದ್ದರು. ದೇಶಾದ್ಯಂತ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ನಂತರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮದ್ಯಪಾನ, ಬೆದರಿಕೆ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಪ್ರಚಲಿತದಲ್ಲಿವೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:31 am, Wed, 28 May 25

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್