ತೀವ್ರ ನಷ್ಟಕ್ಕೊಳಗಾಗಿದ್ದ ಸಾರ್ವಜನಿಕ ವಲಯ ಲಾಭದ ಉತ್ತುಂಗದಲ್ಲಿದೆ; ಸಚಿವ ಕಿಶನ್ ರೆಡ್ಡಿ
ಕಳೆದ ದಶಕದಲ್ಲಿ ಪಿಎಸ್‌ಯುಗಳ ಒಟ್ಟು ನಿವ್ವಳ ಮೌಲ್ಯ 9.5 ಲಕ್ಷ ಕೋಟಿ ರೂ.ನಿಂದ 17 ಲಕ್ಷ ಕೋಟಿ ರೂ.ಗೂ ಹೆಚ್ಚಾಗಿದೆ. 2014ರಲ್ಲಿ ಪ್ರಾರಂಭವಾದ ಈ ನಿರಂತರ ಬೆಳವಣಿಗೆಯ ಪಥವು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಯಶಸ್ಸಿನ ಅರ್ಥ ಸ್ವಾವಲಂಬಿ, ಸಮರ್ಥ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಭಾರತ. ಇದು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಬಂದಿರುವ ನೀತಿ ಆಧಾರಿತ ಆಡಳಿತ, ನೀತಿ ಸುಧಾರಣೆಗಳು, ಹೊಣೆಗಾರಿಕೆ ಮತ್ತು ನಾವೀನ್ಯತೆಯ ಪ್ರಜ್ಞೆಯ ನೇರ ಪರಿಣಾಮವಾಗಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ.

ನವದೆಹಲಿ, ಮೇ 28: ಒಂದು ಕಾಲದಲ್ಲಿ ನಷ್ಟ ಉಂಟುಮಾಡುವ ಮತ್ತು ಬಿಳಿ ಆನೆ ಎಂದು ಅಪಹಾಸ್ಯಕ್ಕೊಳಗಾಗಿದ್ದ ಸಾರ್ವಜನಿಕ ವಲಯವು ಈಗ ತನ್ನ ಉತ್ತುಂಗದಲ್ಲಿದೆ. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಇದು ಸಾರ್ವಜನಿಕ ವಲಯದ ಪುನರುಜ್ಜೀವನಕ್ಕೆ ಕಾರಣವಾಗಿದೆ. ಇಂದು ಸಾರ್ವಜನಿಕ ವಲಯವು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸ್ವಾವಲಂಬನೆಯ ಶಕ್ತಿಶಾಲಿ ಎಂಜಿನ್ ಆಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಸಾರ್ವಜನಿಕ ವಲಯದ ಏರಿಕೆಯನ್ನು ಎತ್ತಿ ತೋರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ನೀಡಿದ ಉತ್ತರದಲ್ಲಿ ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳ ಮೇಲಿನ ಜನರ ನಂಬಿಕೆ ಹೆಚ್ಚಾಗಿದೆ ಮತ್ತು ಅವುಗಳ ದಕ್ಷತೆಯೂ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದ್ದರು . ಇದು ಕೇವಲ ಮಾತಲ್ಲ, ಅಂಕಿ-ಅಂಶಗಳು ಅದನ್ನು ಸಾಬೀತುಪಡಿಸುತ್ತವೆ. 2014ರಲ್ಲಿ ಪ್ರಾರಂಭವಾದ ಈ ಅಭಿವೃದ್ಧಿಯ ಪ್ರಯಾಣದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಒಟ್ಟು ನಿವ್ವಳ ಮೌಲ್ಯವು 9.5 ಲಕ್ಷ ಕೋಟಿ ರೂ.ಗಳಿಂದ ಈಗ 17 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಈ ಅಂಶಗಳು ಭಾರತದ ರಾಷ್ಟ್ರ ನಿರ್ಮಾಣಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿವೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪೊಟ್ಯಾಶ್ ಗಣಿಗಾರಿಕೆಯತ್ತ ಭಾರತದ ಮೊದಲ ಹೆಜ್ಜೆ; ಕೇಂದ್ರ ಸಚಿವ ಕಿಶನ್ ರೆಡ್ಡಿ ಶ್ಲಾಘನೆ
ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO) ತನ್ನ ಆರಂಭದಿಂದಲೂ ಅತ್ಯುನ್ನತ ಆರ್ಥಿಕ ಕಾರ್ಯಕ್ಷಮತೆಯನ್ನು ಸಾಧಿಸಿದೆ, ಇದು ಭಾರತದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೊಸ ಶಕ್ತಿ ಮತ್ತು ಉದ್ದೇಶವನ್ನು ಸಂಕೇತಿಸುವ ಸಾಧನೆಯಾಗಿದೆ. ಅದೇ ರೀತಿ, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (HCL) ಕೂಡ 2024-25ರ ಹಣಕಾಸು ವರ್ಷದಲ್ಲಿ ಪ್ರಾರಂಭವಾದಾಗಿನಿಂದ ಅತ್ಯಧಿಕ ನಿವ್ವಳ ಲಾಭವನ್ನು ದಾಖಲಿಸಿದೆ. ಈ ಕಾರ್ಯಕ್ಷಮತೆಯು ಭಾರತದ ಖನಿಜಗಳು ಮತ್ತು ಲೋಹ ವಲಯದಲ್ಲಿ ಪಿಎಸ್‌ಯುಗಳ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ ಎಂದು ಕಿಶನ್ ರೆಡ್ಡಿ ಬಣ್ಣಿಸಿದ್ದಾರೆ.
ಆತ್ಮನಿರ್ಭರ ಭಾರತದಡಿ ಭಾರತದ ಸಾರ್ವಜನಿಕ ಉದ್ದಿಮೆಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ, ತಂತ್ರಜ್ಞಾನ, ದಕ್ಷತೆ ಮತ್ತು ಉದ್ದೇಶದಿಂದ ತುಂಬಿಸಲಾಗುತ್ತಿದೆ. ಅಸಾಧಾರಣ ಕಾರ್ಯಕ್ಷಮತೆ ಮತ್ತು ಶ್ರೇಷ್ಠತೆಗಾಗಿ NALCO, HCL ತಂಡಗಳಿಗೆ ಅಭಿನಂದನೆಗಳು ಎಂದು ಕಿಶನ್ ರೆಡ್ಡಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








