ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ಮೂರು ಬಾರಿಯ ತಲಾಖ್ ಸಂದೇಶ ನೀಡಿದ್ದ, ಸಾಲದು ಅಂತಾ, ಮತ್ತೆ ಕರೆ ಮಾಡಿ ಪುನರುಚ್ಚರಿಸಿದ್ದ!

ಮೊದಲ ಮಗುವಾದ ಬಳಿಕ ಮಿಸ್ರೀಯಾ ವಿದೇಶದಲ್ಲಿ ಪತಿ ಜೊತೆ ನೆಲೆಸಿದ್ದರು. ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪ ತಲೆದೋರಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ಮೂರು ಬಾರಿಯ ತಲಾಖ್ ಸಂದೇಶ ನೀಡಿದ್ದ, ಸಾಲದು ಅಂತಾ, ಮತ್ತೆ ಕರೆ ಮಾಡಿ ಪುನರುಚ್ಚರಿಸಿದ್ದ!
ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಭೂಪ!
Edited By: ಸಾಧು ಶ್ರೀನಾಥ್​

Updated on: Sep 20, 2023 | 1:16 PM

ಮಂಗಳೂರು, ಸೆಪ್ಟೆಂಬರ್​ 20: ಭಾರತದಲ್ಲಿ ತಲಾಖು ಇಲ್ಲ; ತ್ರವಳಿ ತಲಾಖೂ ಇಲ್ಲ; ಆದರೂ ವಿದೇಶದಲ್ಲಿರುವ ಪತಿರಾಯನೊಬ್ಬ ಡೆಲಿವರಿಗೆಂದು ಭಾರತಕ್ಕೆ ಬಂದಿರುವ ತನ್ನ ಹೆಂಡತಿಗೆ ತಲಾಖ್ ನೀಡಿದ್ದಾನೆ.  ಅಂದ್ರೆ ವಿವಾಹ ವಿಚ್ಛೇದನ (Divorce) ನೀಡಿದ್ದಾನೆ. ತನ್ನ ಗಂಡ ವಾಟ್ಸಾಪ್ ನಲ್ಲಿ ತ್ರಿವಳಿ ತಲಾಖ್ ನೀಡಿದ್ದು, ಕಾನೂನು ಕ್ರಮ ಕೈಗೊಳ್ಳಿ ಎಂದು ಗಂಡನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಮಧ್ಯೆ ಇತ್ತೀಚೆಗೆ ಕೌಟುಂಬಿಕ ಕಲಹ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಹೆಂತಿ ಮಿಸ್ರೀಯಾ (Misriya, Jayanagar in Sullia) ಎರಡನೇ ಮಗುವಿನ ಹೆರಿಗೆಗೆ ಭಾರತಕ್ಕೆ ಬಂದಿದ್ದು, 6 ತಿಂಗಳಿಂದ ಇಲ್ಲೇ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಮಧ್ಯೆ ಆಕೆಯ ವಿರುದ್ಧ ವೈಮನಸ್ಯ ಬೆಳೆಸಿಕೊಂಡ ಗಂಡ ಅಬ್ದುಲ್ ರಷೀದ್ (Abdul Rasheed) ದಿಢೀರನೆ ತಲಾಕ್ ಸಂದೇಶ (triple talaq message on WhatsApp) ರವಾನಿಸಿದ್ದಾನೆ. ತ್ರಿವಳಿ ತಲಾಖ್​ಗೆ ದೇಶಾದ್ಯಂತ ನಿಷೇಧವಿದ್ದು, ಅದನ್ನು ಅನುಸರಿಸಿದರೆ ಕಠಿಣ ಶಿಕ್ಷೆ ಜಾರಿಗೊಳಿಸುವ ಕಾಯ್ದೆ ಜಾರಿ ಮಾಡಲಾಗಿದೆ. ಹಾಗಿದ್ದರೂ, ಅಬ್ದುಲ್ ರಷೀದ್ ಎಂಬಾತ ಇಸ್ಲಾಂ ನಿಯಮವನ್ನು ಪತ್ನಿಯ ಮೇಲೆ ಹೇರಲು ಯತ್ನಿಸಿದ್ದಾನೆ. ಅಬ್ದುಲ್ ರಷೀದ್ ಮೂಲತಃ ಕೇರಳದ ತ್ರಿಶೂರ್​ ನಿವಾಸಿ (Thrissur, Kerala)

ಇದನ್ನೂ ಓದಿ: ಕೋಲಾರ: ಅಂತರಗಂಗೆ ಬೆಟ್ಟದ ಮೇಲೆ ಪಾಕ್ ಧ್ವಜದ ಮಾದರಿ ಹಸಿರು ಬಣ್ಣ ಬಳಿದು 786 ಬರೆದ ಕಿಡಿಕೇಡಿಗಳು

ಮೊದಲ ಮಗುವಾದ ಬಳಿಕ ಮಿಸ್ರೀಯಾ ವಿದೇಶದಲ್ಲಿ ಪತಿ ಜೊತೆ ನೆಲೆಸಿದ್ದರು. ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪ ತಲೆದೋರಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮೂರು ಬಾರಿ ತಲಾಖ್ ಸಂದೇಶ ಸಾಲದು ಅಂತಾ, ಮತ್ತೆ ಕರೆ ಮಾಡಿ ಪುನರುಚ್ಚರಿಸಿದ್ದ ಭೂಪ!

ಮಂಗಳೂರು: ವಿದೇಶದಲ್ಲಿ ಕುಳಿತು ಹೆಂಡತಿಗೆ ತ್ರಿಬಲ್ ತಲಾಖ್ ನೀಡಿದ ಪ್ರಕರಣ ಆರೋಪಿ ವಿರುದ್ಧ ‘ದಿ ಮುಸ್ಲಿಂ ವುಮೆನ್ ಆ್ಯಕ್ಟ್ 2019’ ರಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸುಳ್ಯ ಠಾಣೆ ಪೊಲೀಸರು ಐಪಿಸಿ 504, 506 ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೂನ್ 5ರಂದೇ ತ್ರಿಬಲ್ ತಲಾಖ್ ಹೇಳಿದ್ದ ಆರೋಪಿ ಅಬ್ದುಲ್ ರಷೀದ್ ಫೋನ್ ಕರೆ ಹಾಗೂ ವಾಟ್ಸಪ್ ಮೂಲಕ ತಲಾಖ್ ಸಂದೇಶ ರವಾನೆ ಮಾಡಿದ್ದಾನೆ. ಸಾಲದು ಅಂತಾ ಆರೋಪಿ ಗಂಡ, ಜುಲೈ 7ರಂದು ತ್ರಿಬಲ್ ತಲಾಖ್ ನೀಡಿದರ ಬಗ್ಗೆ ಪುನರುಚ್ಚರಿಸಿದ್ದಾನೆ.

ನೀನು‌ ನಿನ್ನ ತಾಯಿಯೊಂದಿಗೆ ಜೀವಿಸು. ಇನ್ನು ನೀನು ನನಗೆ ಬೇಡ ಎಂದಿದ್ದಾನೆ ಆರೋಪಿ‌ ರಷೀದ್. ಸದ್ಯ ಸಂತ್ರಸ್ಥ ಮಹಿಳೆ ಮಿಸ್ರೀಯಾ ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:23 am, Wed, 20 September 23

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us