ಮಂಗಳೂರು ಮಳಲಿ ಮಸೀದಿ ವಿವಾದ; ತಾಂಬೂಲ ಪ್ರಶ್ನೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

| Updated By: sandhya thejappa

Updated on: May 25, 2022 | 8:59 AM

ಇಂದು ಹೊರಟ ಸಮಯದಿಂದ ಆಗುವ ಶಕುನಗಳನ್ನ ಪೊದುವಾಲ್ ಗಮನಿಸುತ್ತಾರೆ. ಎದುರಿಗೆ ಬರುವ ಜನರು, ಪ್ರಾಣಿಗಳು, ಪಕ್ಷಿಗಳು, ಅವುಗಳ ಸಂಚಾರದ ಬಗ್ಗೆ ನಮೂದು ಮಾಡಿಕೊಳ್ಳುತ್ತಾರೆ.

ಮಂಗಳೂರು ಮಳಲಿ ಮಸೀದಿ ವಿವಾದ; ತಾಂಬೂಲ ಪ್ರಶ್ನೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
ತಂತ್ರಿಗಳು ತಾಂಬೂಲ ಪ್ರಶ್ನೆ ಪ್ರಕ್ರಿಯೆ ಆರಂಭಿಸಿದ್ದಾರೆ
Follow us on

ಮಂಗಳೂರು: ಜ್ಞಾನವಾಪಿ ಮಸೀದಿ ವಿವಾದದ ಬೆನ್ನಲ್ಲೆ ಮಂಗಳೂರಿನ ಮಳಲಿ ಮಸೀದಿ (Malali Masjid) ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿವಾದದ ನಡುವೆ ಇಂದು (ಮೇ 25) ಕೇರಳದಿಂದ ಆಗಮಿಸಿರುವ ತಂತ್ರಿಗಳು ತಾಂಬೂಲ ಪ್ರಶ್ನೆ (Tambula Preshne) ನಡೆಸುತ್ತಾರೆ. ತಾಂಬೂಲ ಪ್ರಶ್ನೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಕೆಲ ಮಾಹಿತಿ ಟಿವಿ9 ಲಭ್ಯವಾಗಿದೆ. ತಂತ್ರಿಗಳಿಗೆ ವೀಳ್ಯ ನೀಡಿದ ದಿನದಿಂದ ಟಿಪ್ಪಣಿ ಪ್ರಕ್ರಿಯೆ ಆರಂಭವಾಗುತ್ತದೆ. ಶರಣ್ ಪಂಪ್ವೆಲ್ ಕೇರಳಕ್ಕೆ ಹೋಗಿ ತಂತ್ರಿಗಳಿಗೆ ವೀಳ್ಯ ನೀಡಿದ್ದರು. ಅಂದು ವೀಳ್ಯ ಕೊಡಲು ಹೋಗಿದ್ದವರು ಹಾಕಿದ್ದ ಬಟ್ಟೆ ಬಣ್ಣ, ಕೊಟ್ಟ ವೀಳ್ಯದ ಎಲೆಗಳು ಎಷ್ಟು, ಬಾಡಿದ್ದ ಎಲೆಗಳು ಎಷ್ಟಿತ್ತು ಅನ್ನೊದನ್ನು ತಂತ್ರಿಗಳು ಟಿಪ್ಪಣಿ ಮಾಡಿಕೊಳ್ಳುತ್ತಾರೆ.

ಇಂದು ಹೊರಟ ಸಮಯದಿಂದ ಆಗುವ ಶಕುನಗಳನ್ನ ಪೊದುವಾಲ್ ಗಮನಿಸುತ್ತಾರೆ. ಎದುರಿಗೆ ಬರುವ ಜನರು, ಪ್ರಾಣಿಗಳು, ಪಕ್ಷಿಗಳು, ಅವುಗಳ ಸಂಚಾರದ ಬಗ್ಗೆ ನಮೂದು ಮಾಡಿಕೊಳ್ಳುತ್ತಾರೆ. ಕೇರಳದಿಂದ ಮಳಲಿ ತಲುಪುವವರೆಗೂ ಮಧ್ಯದಲ್ಲಿ ನಡೆಯುವ ಎಲ್ಲಾ ಆಗುಹೋಗುಗಳನ್ನ ತಂತ್ರಿಗಳು ಗಮನಿಸುತ್ತಾರೆ. ತಾಂಬೂಲ ಪ್ರಶ್ನೆ ನಡೆಯುವ ಸ್ಥಳಕ್ಕೆ ತಲುಪಿದ ಬಳಿಕ ಅಲ್ಲಿ ಕೂಡ ನೋಟ್ ಮಾಡಿಕೊಳ್ಳುತ್ತಾರೆ.

ಇನ್ನು ತಂತ್ರಿಗಳನ್ನ ಯಾರು ಸ್ವಾಗತಿಸಿದರು ಎನ್ನುವುದನ್ನೂ ತಂತ್ರಿಗಳು ಬರೆದಿಟ್ಟುಕೊಳ್ಳೊತ್ತಾರೆ. ತಾಂಬೂಲ ಪ್ರಶ್ನೆ ವೇಳೆ ಇದನ್ನೆಲ್ಲಾ ಲೆಕ್ಕ ಹಾಕಿ ಪೊದುವಾಲ್ ಉತ್ತರ ನೀಡುತ್ತಾರೆ. ಇಂದು ನಡೆಯುವ ತಾಂಬೂಲ ಪ್ರಶ್ನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್, ತಾಂಬೂಲ ಪ್ರಶ್ನೆ ಇಡದೆ ಈಗಲೇ ಏನನ್ನೂ ಹೇಳಲು ಆಗುವುದಿಲ್ಲ. ದೇವರ ಸಾನ್ನಿಧ್ಯ ಇದೆಯಾ ಎಂದು ತಿಳಿಯಲು ಅಷ್ಟಮಂಗಲ ಪ್ರಶ್ನೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: INR USD Exchange Rate: ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೇ 24ಕ್ಕೆ ಯಾವ ದೇಶದ ವಿರುದ್ಧ ಎಷ್ಟಿದೆ?

ತಾಂಬೂಲ ಪ್ರಶ್ನೆ ಪ್ರಕ್ರಿಯೆ ಆರಂಭ:
ಮರದ ಮಣೆ ಮೇಲೆ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಕುಂಡಲಿ ಬರೆದಿಟ್ಟಿದ್ದಾರೆ. ಕುಂಡಲಿ ಮೇಲೆ ಒಂದು ಶಿವಲಿಂಗ ಇರಿಸಿದ್ದಾರೆ. ಪಣಿಕ್ಕರ್ ಸೇರಿ ಒಟ್ಟು ಮೂವರು ಅರ್ಚಕರಿಂದ ತಾಂಬೂಲ ಪ್ರಶ್ನೆ ಪ್ರಕ್ರಿಯೆ ಆರಂಭವಾಗಿದೆ. ತಾಂಬೂಲ ಪ್ರಶ್ನೆ ಜಾಗದಲ್ಲಿ ಗ್ರಾಮದ ಮುಖಂಡರು, ವಿ.ಎಚ್.ಪಿ ಮುಖಂಡರು ಸೇರಿ 20 ಜನರು ಭಾಗಿಯಾಗಿದ್ದಾರೆ.ರಾಮ, ಹಿಂದೂ ಸನಾತನ ಧರ್ಮ, ಭಾರತ್​ ಮಾತಾಕೀ ಜೈ ಘೋಷಣೆ ಹಾಕಿ ವಿಧಿವಿಧಾನ ಆರಂಭಿಸಿದ್ದಾರೆ.

500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ:
ಇಂದು ತಾಂಬೂಲ ಪ್ರಶ್ನೆ ಇರುವುದರಿಂದ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:52 am, Wed, 25 May 22