ಬೆಂಗಳೂರು: ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿತ್ತು. ಮಾರ್ಗಸೂಚಿ ಅನ್ವಯ ಸಂತೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ತಳ್ಳುವ ಗಾಡಿ ವ್ಯಾಪಾರಕ್ಕೆ ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅವಕಾಶ ನೀಡಿದೆ. ಇದರಿಂದ ಬ್ಯಾಟರಾಯನಪುರ ಸಂತೆಯಲ್ಲಿ ನಿನ್ನೆ ರೈತರು ಪ್ರತಿಭಟನೆ ನಡೆಸಿದರು. ಹೂವು, ತರಕಾರಿಯನ್ನು ನೆಲಕ್ಕೆ ಸುರಿದು ರೈತರ ಸಂತೆ ಕ್ಲೋಸ್ ಮಾಡಬಾರದೆಂದು ರೈತರು ಆಗ್ರಹಿಸಿದ್ದರು. ಆದರೆ ಪ್ರತಿಭಟನೆ ಬೆನ್ನಲ್ಲೆ ಇದೀಗ ಬ್ಯಾಟರಾಯನಪುರ ರೈತರ ಸಂತೆ ವ್ಯಾಪಾರಕ್ಕೆ ಕೃಷಿ ಮಾರಾಟ ಇಲಾಖೆ ಅವಕಾಶ ನೀಡಿದೆ.
ಸಂತೆ, ವಾರದ ಸಂತೆಗೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದೇಶದನ್ವಯ ನಿನ್ನೆ ರೈತರ ಸಂತೆಯಲ್ಲಿ ವ್ಯಾಪಾರ ಮಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಅಧಿಕಾರಿಗಳ ನಡೆ ಖಂಡಿಸಿ ರೈತರು ಮಾರಲು ತಂದಿದ್ದ ಹೂ, ತರಕಾರಿಯನ್ನು ನೆಲಕ್ಕೆ ಸುರಿದು ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ನಾವು ಯಾಕೆ ಕ್ಲೋಸ್ ಮಾಡಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ ರೈತರು, ನಾವು ಬೆಳೆದ ತರಕಾರಿ ಮಾರಲು ಎಲ್ಲಿಗೆ ಹೋಗಬೇಕು? ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ವ್ಯಾಪಾರ ಮಾಡುತ್ತಿದ್ದೆವು. ಈಗ ಏಕಾಏಕಿ ಕ್ಲೋಸ್ ಮಾಡಿ ಎಂದರೆ ಹೇಗೆ ಅಂತ ರೈತರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಪ್ರತಿಭಟನೆ ಬಳಿಕ ಎಚ್ಚೆತ್ತ ಎಪಿಎಂಸಿ ಅಧಿಕಾರಿಗಳು ಇದೀಗ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆಯೇ ಕೊರೊನಾ ಹಿನ್ನೆಲೆ ಯಲಹಂಕ ರೈತರ ಸಂತೆ ಬ್ಯಾಟರಾಯರಪುರಕ್ಕೆ ಶಿಫ್ಟ್ ಆಗಿತ್ತು. ಹೀಗಾಗಿ ಮೇ 1ರಂದು ಹೊರಡಿಸಿದ ಆದೇಶ ಬ್ಯಾಟರಾಯರಪುರ ಸಂತೆಗೆ ಅನ್ವಯವಾಗಲ್ಲ. ಇದರಿಂದ ಕೃಷಿ ಮಾರಾಟ ಇಲಾಖೆ ಕೊರೊನಾ ನಿಯಮಾವಳಿ ಪಾಲಿಸಿ ವ್ಯಾಪಾರ ನಡೆಸುವಂತೆ ರೈತರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ
ಕೋಲಾರ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ; ಸಿಟಿ ಸ್ಕ್ಯಾನ್ ಮಾಡಿಸಲು ಆಸ್ಪತ್ರೆ ಮುಂದೆ ಕ್ಯೂ ನಿಂತ ಸಾರ್ವಜನಿಕರು
ಹುಬ್ಬಳ್ಳಿ ಆಸ್ಪತ್ರೆಯಲ್ಲೂ ಆಕ್ಸಿಜನ್ ದುರಂತ ಆರೋಪ | ಐಸಿಯುನಲ್ಲಿದ್ದ ಐವರ ಸಾವು, ಮಗಳ ಕಣ್ಣೀರ ರೋದನೆ
(Department of Agriculture Marketing has sanctioned sale of Byatarayanapura farmers)