ಚಿತ್ರದುರ್ಗದ ಮಠಕ್ಕೆ ಯುವರಾಜ್ ಸ್ವಾಮೀಜಿಯಾಗಿದ್ದ.. ಆದರೆ ಆತನನ್ನು ಅಲ್ಲಿಂದ ಹೊರಗೆ ಹಾಕಿದ್ರು -ಲಕ್ಷ್ಮಣ ಸವದಿ

|

Updated on: Jan 08, 2021 | 6:31 PM

ನನಗೆ ತಿಳಿದ ಹಾಗೆ, ಯುವರಾಜ ಚಿತ್ರದುರ್ಗದ ಕಡೆಯಿದ್ದ ಮಠವೊಂದಕ್ಕೆ ಮೊದಲು ಸ್ವಾಮೀಜಿ ಆಗಿದ್ದ. ಆದರೆ, ಆತನನ್ನು ಆ ಮಠದಿಂದ ಹೊರಗೆ ಹಾಕಿದ್ದರು ಎಂದು ಸವದಿ ಹೇಳಿದರು.

ಚಿತ್ರದುರ್ಗದ ಮಠಕ್ಕೆ ಯುವರಾಜ್ ಸ್ವಾಮೀಜಿಯಾಗಿದ್ದ.. ಆದರೆ ಆತನನ್ನು ಅಲ್ಲಿಂದ ಹೊರಗೆ ಹಾಕಿದ್ರು -ಲಕ್ಷ್ಮಣ ಸವದಿ
ಯುವರಾಜ್ ಸ್ವಾಮಿ (ಎಡ); ಲಕ್ಷ್ಮಣ ಸವದಿ (ಬಲ)
Follow us on

ಬೆಳಗಾವಿ: ಬಿಜೆಪಿ, RSS ನಾಯಕನೆಂದು ಯುವರಾಜ್ ಮೋಸ ಮಾಡಿದ್ದಾನೆ. ಬಿಜೆಪಿ ನಾಯಕರ ಭೇಟಿಯಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನಗರದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನನಗೆ ತಿಳಿದ ಹಾಗೆ, ಯುವರಾಜ್​ ಚಿತ್ರದುರ್ಗದ ಕಡೆಯಿದ್ದ ಮಠವೊಂದಕ್ಕೆ ಮೊದಲು ಸ್ವಾಮೀಜಿ ಆಗಿದ್ದ. ಆದರೆ, ಆತನನ್ನು ಆ ಮಠದಿಂದ ಹೊರಗೆ ಹಾಕಿದ್ದರು ಎಂದು ಸವದಿ ಹೇಳಿದರು.

ಬಳಿಕ ಬೆಂಗಳೂರಿಗೆ ಬಂದು RSS ಮುಖಂಡನೆಂದು ಬಹಳಷ್ಟು ಕಡೆ ಹೇಳಿದ್ದಾನೆ. ಸಹಜವಾಗಿ ಆತನಿಗೆ ಹೂವಿನ ಹಾರ ಹಾಕಿ ಎಲ್ಲರು ಫೋಟೋ ತೆಗೆಸಿಕೊಳ್ಳುತ್ತಾರೆ. ಇದನ್ನು ಯುವರಾಜ್ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಯುವರಾಜ್ ಒಮ್ಮೆ ಮಾತ್ರ ಭೇಟಿಯಾಗಿ ವಿಷ್ ಮಾಡಿದ್ದ. RSS, ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದ್ದಾನೆ. ಆದರೆ ಈಗ ಅವನು ನಕಲಿ ಎಂಬುದು ಬಯಲಿಗೆ ಬಂದಿದೆ ಎಂದು ಸವದಿ ಹೇಳಿದರು.

‘CCB ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ; ಹೆದರಿ ಓಡಿ ಹೋಗೋ ಕೆಲಸ ನಾನೇನೂ ಮಾಡಿಲ್ಲ’