Crime: ಟೈರ್ ಸ್ಫೋಟ: ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿ ಚಾಲಕ ಸಾವು

| Updated By: Rakesh Nayak Manchi

Updated on: Oct 10, 2022 | 9:18 AM

ಟೈರ್​ ಸ್ಫೋಟಗೊಂಡ ಹಿನ್ನೆಲೆ ಕೆಎಸ್​​ಆರ್​ಟಿಸಿ ಬಸ್​ ಪಲ್ಟಿಯಾಗಿ ಚಾಲಕ ದುರ್ಮರಣ ಹೊಂದಿದ ಘಟನೆ ಕುಂದಗೋಳ ತಾಲೂಕಿನ ಶೆರೆವಾಡ ಬಳಿ ನಡೆದಿದೆ. ಗಾಯಗೊಂಡ ನಾಲ್ವರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Crime: ಟೈರ್ ಸ್ಫೋಟ: ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿ ಚಾಲಕ ಸಾವು
ಟೈರ್ ಸ್ಫೋಟಗೊಂಡು ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿ ಚಾಲಕ ಸಾವು
Follow us on

ಹುಬ್ಬಳ್ಳಿ: ಟೈರ್​ ಸ್ಫೋಟಗೊಂಡ ಹಿನ್ನೆಲೆ ಕೆಎಸ್​​ಆರ್​ಟಿಸಿ ಬಸ್​ ಪಲ್ಟಿಯಾಗಿ ಚಾಲಕ ದುರ್ಮರಣ ಹೊಂದಿದ ಘಟನೆ ಕುಂದಗೋಳ ತಾಲೂಕಿನ ಶೆರೆವಾಡ ಬಳಿ ನಡೆದಿದೆ. ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಬರುತ್ತಿದ್ದ KA 25 F 3097 ಸಂಖ್ಯೆಯ ಕೆಎಸ್​ಆರ್​ಟಿಸಿ ಬಸ್ ಟೈರ್ ಸ್ಫೋಟಗೊಂಡು ಪಲ್ಟಿ ಹೊಡೆದಿದೆ. ಈ ವೇಳೆ ಬಸ್​ನಲ್ಲೆ ಸಿಲುಕಿಕೊಂಡ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ ಗಾಯಾಗೊಂಡ ನಾಲ್ವರು ಪ್ರಯಾಣಿಕರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ದೇವಸ್ಥಾನ, ಬಾರ್​​ನಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್

ದೇವಸ್ಥಾನ, ಬಾರ್​​ನಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ನಗರದ ವಿವಿಧ ಕಡೆಯಲ್ಲಿರುವ ದೇವಸ್ಥಾನದ ಹುಂಡಿ ಹಣ ಹಾಗೂ ಬಾರ್​ಗಳನ್ನು ಟಾರ್ಗೆಟ್ ಮಾಡಿ ನುಗ್ಗುತ್ತಿದ್ದ ಕಳ್ಳರು ಹಣವನ್ನು ದೋಚಿ ಪರರಾರಿಯಾಗುತ್ತಿದ್ದರು. ಅದರಂತೆ ನಗರದ ವಿವಧ ಕಡೆ ನಡೆದ ಒಟ್ಟು ಐದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಕೊನೆಗೂ ಪೊಲೀಸರ ಅತಿಥಿಗಳಾಗಿದ್ದು, ಬಂಧಿತರನ್ನು ಮಹದೇವಪ್ಪ, ಹಸನ್ ಹಾಗೂ ಕಾಶೀಂಸಾಬ್ ಎಂದು ಗುರುತಿಸಲಾಗಿದೆ. ಇವರಿಂದ 10 ಗ್ರಾಂ ಚಿನ್ನ, 60 ಗ್ರಾಂ ಬೆಳ್ಳಿ ಮತ್ತು 42 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಬಂಧನದಿಂದ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಬಾರ್, ಒಂದು ಮನೆ, ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಒಂದು ಬಾರ್ ಕಳ್ಳತನ, ಅಂಕೋಲಾ ಹಾಗೂ ಯಲ್ಲಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 am, Mon, 10 October 22