ಧಾರವಾಡ ನಗರದ ಕಮಲಾಪುರ ನಿವಾಸಿ ಅನ್ನಪೂರ್ಣಾ ಹುಲ್ಲಮನಿ ಅವರು ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ (Dharwad Vikas Urban Credit Society) 2020ರ ಫೆಬ್ರವರಿಯಲ್ಲಿ 17ರಂದು ರೂ 1.50 ಲಕ್ಷ ಮತ್ತು 2021ರ ಮೇ 7ರಂದು ರೂ.1 ಲಕ್ಷ ಹಣವನ್ನು ಒಂದು ವರ್ಷದ ಅವಧಿಗೆ ಠೇವಣಿ ಇಟ್ಟಿದ್ದರು. ಠೇವಣಿ ಅವಧಿ ಮುಗಿದ ಮೇಲೆ ಎರಡೂ ಠೇವಣಿಗಳ ಹಣ ಕೊಡುವಂತೆ ಸೊಸೈಟಿಗೆ ವಿನಂತಿಸಿದರೂ ಠೇವಣಿ ಹಣ (Deposit) ಅಥವಾ ಬಡ್ಡಿಯನ್ನು (Interest) ವಾಪಸ್ಸು ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನ್ನಪೂರ್ಣಾ ಅವರು ಸೊಸೈಟಿ ವಿರುದ್ಧ ಗ್ರಾಹಕರ ಆಯೋಗದಲ್ಲಿ ( Dharwad Consumer Commission) ದೂರು ದಾಖಲು ಮಾಡಿದ್ದರು.
ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಠೇವಣಿ ಅವಧಿ ಮುಗಿದ ಮೇಲೆ ಕರಾರಿನಂತೆ ಬಡ್ಡಿ ಸಮೇತ ಠೇವಣಿದಾರರಿಗೆ ಹಣ ಹಿಂದಿರುಗಿಸುವುದು ಸೊಸೈಟಿಯ ಕರ್ತವ್ಯ.
ಇದನ್ನೂ ಓದಿ: ಫ್ಯ್ಲಾಟ್ ನಿರ್ಮಿಸಿಕೊಡದ ಬಿಲ್ಡರ್! ಧಾರವಾಡ ಗ್ರಾಹಕರ ಆಯೋಗದ ಆದೇಶವೇನು?
ಆದರೆ, ಠೇವಣಿ ಅವಧಿ ಮುಗಿದು ಸುಮಾರು ಎರಡ್ಮೂರು ವರ್ಷಗಳು ಕಳೆದರೂ ಠೇವಣಿ ಹಣ ಅಥವಾ ಅದರ ಮೇಲಿನ ಬಡ್ಡಿ ಹಿಂದಿರುಗಿಸದೇ ಇರುವುದು ತಪ್ಪು. ಹಾಗಾಗಿ ಠೇವಣಿ ಹಣ ಒಟ್ಟು ರೂ. 2.50 ಲಕ್ಷ ಹಾಗೂ ಅದರ ಮೇಲೆ ಶೇ 13.5ರಷ್ಟು ಠೇವಣಿ ಇಟ್ಟ ದಿನಾಂಕದಿಂದ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಸೊಸೈಟಿಗೆ ನಿರ್ದೇಶಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ -ಡೆಪಾಸಿಟ್ ಹಿಂದಿರುಗಿಸದ ಸರಸ್ವತಿ ಕೋ ಆಪ್ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್
ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ರೂ. 25 ಸಾವಿರ ಪರಿಹಾರ ಮತ್ತು ಅವರ ಪ್ರಕರಣ ಖರ್ಚು ವೆಚ್ಚವೆಂದು ರೂ. 10 ಸಾವಿರ ಕೊಡುವಂತೆ ಎದುರುದಾರ ಸೊಸೈಟಿಯವರಿಗೆ ಆಯೋಗ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ