ಧಾರವಾಡ: ನೂತನವಾಗಿ ಧಾರವಾಡದಲ್ಲಿ ನಿರ್ಮಿಸಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯನ್ನು ನಾಳೆ(ಮಾ.12) ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ, ಐಐಟಿ ಸುತ್ತ ಮುತ್ತ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಸಮಾರಂಭದ ವೇದಿಕೆ, ಪಾರ್ಕಿಂಗ್, ಐಐಟಿಗೆ ಸೇರುವ ರಸ್ತೆಗಳಲ್ಲಿ ಒಟ್ಟು 1484 ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದ್ದು, 5 ಎಸ್ಪಿ, 8 ಹೆಚ್ಚುವರಿ ಎಸ್ಪಿ, 28 ಡಿವೈಎಸ್ಪಿ, 63 ಪೊಲೀಸ್ ಇನ್ಸ್ಪೆಕ್ಟರ್, 134 ಪಿಎಸ್ಸೈ, 158 ಎಎಸ್‌ಐ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 3.05ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ ಮಾಡಿ, ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಮಾರಂಭದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ಸಮಾವೇಶಕ್ಕೆ ಬರುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. 60ಕ್ಕೂ ಹೆಚ್ಚು ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಒಳ ಬಿಡಲಿದ್ದಾರೆ.
ಹಸಿರು ವಲಯವಾಗಿ ಸಜ್ಜಾಗುತ್ತಿದೆ ಆಡಳಿತ ಭವನ
ಇನ್ನು ಧಾರವಾಡದ ಐಐಟಿ ಮುಖ್ಯ ಕಟ್ಟಡದಲ್ಲಿ ತಯಾರಿ ಭರದಿಂದ ಸಾಗಿದೆ. ಐಐಟಿ ಮುಂಭಾಗದಲ್ಲಿ ಹತ್ತು ಅಡಿ ಎತ್ತರ ಬೃಹತ್ ವೇದಿಕೆ ಸಿದ್ಧಗೊಂಡಿದೆ. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ಕಲಾಕೃತಿ ತಯಾರಿಸಲಾಗದ್ದು, ಇದು ವಿಭಿನ್ನವಾಗಿ ಪ್ರಧಾನಿಯವರನ್ನ ಸ್ವಾಗತಿಸಲಿವೆ. ಆಡಳಿತ ಭವನ ಹಸಿರು ವಲಯವಾಗಿ ಸಜ್ಜಾಗುತ್ತಿದ್ದು, ಫೇಸ್ 1ರಲ್ಲಿ ನಿರ್ಮಾಣ ಆಗಿರುವ 18 ವಿಭಾಗಗಳಲ್ಲಿ ಸದ್ಯ ಫೇಸ್ 1ರ ಕಟ್ಟಡಗಳೊಂದಿಗೆ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಮುಖ್ಯದ್ವಾರ, ಆಡಳಿತ ಭವನ, 2 ಅಕಾಡೆಮಿಕ ವಿಭಾಗ, ಗ್ರಂಥಾಲಯ, ಕಂಪ್ಯೂಟರ್ ವಿಭಾಗ, ಎರಡು ಹಾಸ್ಟೆಲ್, ಮೆಸ್ , ಗೆಸ್ಟ್ ಹೌಸ್ ಸೇರಿ 18 ವಿಭಾಗವನ್ನ ಸುಮಾರು 850 ಕೋಟಿ ರೂ. ವೆಚ್ಚದಲ್ಲಿ 470 ಎಕರೆ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ. ನೂತನ ಕ್ಯಾಂಪಸ್‌ನಲ್ಲಿ ಒಟ್ಟು 856 ವಿದ್ಯಾರ್ಥಿಗಳು ಕಲಿಯಲಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಮಾ.12ರಂದು ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂನ್ನು ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ
ಐಐಟಿ ಮುಂಭಾಗದಲ್ಲಿ ಸಿದ್ಧಗೊಂಡಿರೋ ಬೃಹತ್ ವೇದಿಕೆ
ನಾಳೆ ಐಐಟಿ ಕಟ್ಟಡ ಉದ್ಘಾಟನೆಗೆ ಪ್ರಧಾನಿ ಆಗಮಿಸಲಿರುವ ಹಿನ್ನಲೆ, ಹತ್ತು ಅಡಿ ಎತ್ತರ ಬೃಹತ್ ವೇದಿಕೆ ನಿಮಾರ್ಣ ಮಾಡಲಾಗಿದೆ. ಜೊತೆಗೆ ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ಕಲಾಕೃತಿ ಮಾಡಲಾಗಿದ್ದು ವಿಭಿನ್ನವಾಗಿ ಮೋದಿಗೆ ಸ್ವಾಗತಿಸಲಿವೆ. ಇನ್ನು ವೇದಿಕೆ, ಪೆಂಡಾಲ್, ಊಟದ ವ್ಯವಸ್ಥೆ, ಪಾರ್ಕಿಂಗ್‌ಗಾಗಿ 120 ಎಕರೆ ಪ್ರದೇಶ ಬಳಕೆ ಮಾಡಿಕೊಳ್ಳಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sat, 11 March 23