ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ; ಮೋದಿ ಭೇಟಿ ನೀಡಲಿರುವ ಈ ಕ್ಯಾಂಪಸ್ ಸ್ಪೆಷಾಲಿಟಿ ಏನು ಗೊತ್ತಾ?

ಧಾರವಾಡ ಐಐಟಿ (Dharwad IIT) ನೂತನ ಕಟ್ಟಡ ಪೂರ್ಣಗೊಂಡಿದ್ದು, ಇದೇ ಮಾರ್ಚ್ 12 ರಂದು ಈ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬರಲಿದ್ದಾರೆ.

ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ; ಮೋದಿ ಭೇಟಿ ನೀಡಲಿರುವ ಈ ಕ್ಯಾಂಪಸ್ ಸ್ಪೆಷಾಲಿಟಿ ಏನು ಗೊತ್ತಾ?
IIT Dharwad
Follow us
|

Updated on: Mar 10, 2023 | 1:22 PM

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (IIT) ಓದುವುದು ಭಾರತದ ಪ್ರತಿಯೊಬ್ಬ ಎಂಜಿನಿಯರಿಂಗ್ (Engineering) ವಿದ್ಯಾರ್ಥಿಯ ಕನಸಾಗಿರುತ್ತದೆ. ಭಾರತೀಯ ಐಐಟಿ ಕಾಲೇಜುಗಳು ಅನೇಕ ವಿಜ್ಞಾನಿಗಳು (Scientist) ಮತ್ತು ಎಂಜಿನಿಯರ್‌ಗಳನ್ನು ವಿಷ್ಯಕ್ಕೆ ನೀಡಿದೆ. 1951 ರಲ್ಲಿ, ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಖರಗ್‌ಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲಾಯಿತು. ಇವು ಉನ್ನತ ತಾಂತ್ರಿಕ ಶಿಕ್ಷಣಕ್ಕಾಗಿ ಸ್ವಾಯತ್ತ ಸಾರ್ವಜನಿಕ ಸಂಸ್ಥೆಗಳಾಗಿವೆ ಮತ್ತು ಇಲ್ಲಿ ಬಿ.ಟೆಕ್ ಕೋರ್ಸ್​ಗಳು ಹೆಚ್ಚು ಜನಪ್ರಿಯವಾಗಿವೆ. ಭಾರತದಲ್ಲಿ ಒಟ್ಟು 23 ಐಐಟಿಗಳಿವೆ.

ಧಾರವಾಡ ಐಐಟಿ (Dharwad IIT) ನೂತನ ಕಟ್ಟಡ ಪೂರ್ಣಗೊಂಡಿದ್ದು, ಇದೇ ಮಾರ್ಚ್ 12 ರಂದು ಈ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬರಲಿದ್ದಾರೆ.

ಈ ಧಾರವಾಡ ಐಐಟಿ ವಿಶಷತೆಗಳೇನು ಎಂದು ನೋಡುವುದಾದರೆ:

  1. ಐಐಟಿ ಧಾರವಾಡ ಭಾರತದ ಮೊದಲ ಸ್ಮಾರ್ಟ್ ಮತ್ತು ಹಸಿರು ಕ್ಯಾಂಪಸ್. ಈ ಕ್ಯಾಂಪಸ್ ಧಾರವಾಡದಿಂದ 7 ಕಿಮೀ ದೂರದಲ್ಲಿರುವ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 470 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
  2. ಧಾರವಾಡ ಐಐಟಿ ಕ್ಯಾಂಪಸ್ ತನ್ನದೇ ಇಂಧನ ಮತ್ತು ನೀರಿನ ವ್ಯವಸ್ಥೆ ಹೊಂದಿದೆ. ಸ್ವಾವಲಂಬಿ ಇಂಧನ ಅಂದರೆ ಸೌರಶಕ್ತಿ ಬಳಸಿ ಇಂಧನ ತರಿಸುತ್ತಾರೆ, ಹಾಗೆಯೇ ಕ್ಯಾಂಪಸ್ ಒಳಗೆ ಬಳಸುವ ನೀರಿನ ಮೂಲ ಕೂಡ ಕ್ಯಾಂಪಸ್ ಒಳಗೆ ಇದೇ.
  3. ಸುಸ್ಥಿರತೆಯ ಪರಿಕಲ್ಪನೆಯು ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತು ಆರ್ಥಿಕ ಅಭಿವೃದ್ಧಿ ಎಂಬ ಮೂರು ಅಂಶಗಳನ್ನು ಹೊಂದಿದೆ. ಧಾರವಾಡ ಐಐಟಿ ಒಂದು ಸುಸ್ಥಿರತೆಯ ವಾತಾವರಣವನ್ನು ರಚಿಸಲು ಮುಂದಾಗಿದೆ.
  4. ಇವರದು ಕಟ್ಟಡ ನಿರ್ಮಾಣ ಸಮಯದಲ್ಲಿ ಯಾವುದೇ ರೀತಿಯ ಘನ ತ್ಯಾಜ್ಯವನ್ನು ಹೊರಹಾಕಿಲ್ಲ. ಜೀರೋ-ಡೆಬ್ರಿಸ್ ಕಂಸ್ಟ್ರಕ್ಷನ್ ಎಂದು ಕರೆಯುತ್ತಾರೆ.
  5. ಪರಿಸರ ವಿಜ್ಞಾನ ಮತ್ತು ಐತಿಹಾಸಿಕ ಮೂಲಗಳನ್ನು ಸಂರಕ್ಷಿಸುವುದು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಕ್ಯಾಂಪಸ್‌ನ ನಿರ್ಮಾಣದ ಪ್ರಮುಖ ಅಂಶವಾಗಿತ್ತು.
  6. ದಟ್ಟವಾದ ಅರಣ್ಯವನ್ನು ಒಳಗೊಂಡಿರುವ ಹಸಿರು ಪರಿಸರದಲ್ಲಿ ನೆಲೆಸಿರುವ ಹೊಸ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಯಾವುದೇ ಅಡಚಣೆಯಿಲ್ಲದೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಪರಿಪೂರ್ಣ ವಾತಾವರಣವನ್ನು ಒದಗಿಸುತ್ತದೆ.
  7. ಈಗಾಗಲೇ ಮೂರು ಬ್ಯಾಚ್‌ನ ವಿದ್ಯಾರ್ಥಿಗಳುಧಾರವಾಡ ಐಐಟಿಯಿಂದ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಸಂಸ್ಥೆಯಲ್ಲಿ ಸುಮಾರು 700 ವಿದ್ಯಾರ್ಥಿಗಳು ಓದುತ್ತಿದ್ದಾರೆ.
  8. ಈ ಕ್ಯಾಂಪಸ್​ನಲ್ಲಿ ಆಡಳಿತ ಕಟ್ಟಡ, ಎರಡು ಶೈಕ್ಷಣಿಕ ಬ್ಲಾಕ್‌ಗಳು, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ, ಕೇಂದ್ರ ಉಪನ್ಯಾಸ ರಂಗಮಂದಿರ, ವಾದ್ಯಗಳ ಕೇಂದ್ರ, ಅಧ್ಯಾಪಕರ ವಸತಿ, ವಿದ್ಯಾರ್ಥಿಗಳ ಹಾಸ್ಟೆಲ್, 700 ಆಸನ ಸಾಮರ್ಥ್ಯ ಇರುವ ಸಭಾಂಗಣ ಸೇರಿದಂತೆ 16 ಬ್ಲಾಕ್‌ಗಳಿವೆ. ಕ್ರೀಡಾ ಸೌಲಭ್ಯಗಳು ಕಟ್ಟಡ ಮತ್ತು ಕ್ಯಾಂಟೀನ್ ಅನ್ನು ‘ಸುಸ್ಥಿರ ಹಸಿರು ಕ್ಯಾಂಪಸ್’ ಶೀರ್ಷಿಕೆಯಡಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ; ರಾಜ್ಯದಲ್ಲಿ ಮೊದಲ ದಿನವೇ ಎರಡು ಕಾಪಿ ಕೇಸ್!