AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅಳಿಯನಿಂದಲೇ ಮಾವನ ಕೊಲೆ: ಶವ ಸುಟ್ಟ ಹೆಂಡತಿ, ಮಗಳು

ಬೆಂಗಳೂರಿನಲ್ಲಿ ಅಳಿಯನಿಂದಲೇ ಮಾವನ ಕೊಲೆ ನಡೆದಿರುವಂತಹ ಘಟನೆ ನಡೆದಿದೆ. ಕೊಲೆ ಬಳಿಕ ಅಳಿಯನ ಜೊತೆಗೂಡಿ ಮಾವನ ಹೆಂಡತಿ ಮತ್ತು ಮಗಳು ಶವವನ್ನು ಕೋಲಾರದ ಬಳಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಸದ್ಯ ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಅಳಿಯನಿಂದಲೇ ಮಾವನ ಕೊಲೆ: ಶವ ಸುಟ್ಟ ಹೆಂಡತಿ, ಮಗಳು
ಬಾಬು
ಗಂಗಾಧರ​ ಬ. ಸಾಬೋಜಿ
|

Updated on:Aug 02, 2025 | 10:24 AM

Share

ಬೆಂಗಳೂರು, ಆಗಸ್ಟ್​ 02: ಹೆಣ್ಣು ಕೊಟ್ಟ ಮಾವನನ್ನು ಅಳಿಯ ಕೊಲೆ (kill) ಮಾಡಿದರೆ, ಗಂಡನ ಶವವನ್ನು ಹೆಂಡತಿ ಮತ್ತು ಮಗಳು ಸುಟ್ಟು ಹಾಕಿರುವಂತಹ ಘಟನೆಯೊಂದು ಬೆಂಗಳೂರಿನ (bangaluru) ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವನಹಳ್ಳಿ ಮೂಲದ ಬಾಬು (48) ಮೃತ ಮಾವ. ಅಳಿಯ ರಾಮಕೃಷ್ಣ, ಬಾಬು ಪತ್ನಿ ಮುನಿರತ್ನ ಮತ್ತು ಪುತ್ರಿಯಿಂದ ಕೃತ್ಯವೆಸಗಲಾಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದದ್ದೇನು?

ಹಲವು ವರ್ಷದಿಂದ ಕಾಡುಗೋಡಿಯಲ್ಲಿ ಕುಟುಂಬ ವಾಸವಿತ್ತು. ಗೋದಾಮು ಒಂದರಲ್ಲಿ ಬಾಬು ಕೆಲಸ ಮಾಡಿಕೊಂಡಿದ್ದ. 3 ತಿಂಗಳ ಹಿಂದೆ ಪ್ರೀತಿಸಿ ರಾಮಕೃಷ್ಣನನ್ನು ಬಾಬು ಪುತ್ರಿ ಮದುವೆಯಾಗಿದ್ದಳು. ಮಗಳು ಆತನನ್ನು ಮದುವೆಯಾಗಿದ್ದು ಬಾಬುಗೆ ಇಷ್ಟವಿರಲಿಲ್ಲ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಹಬ್ಬದ ದಿನವೇ ಪತಿಗೆ ಮುಹೂರ್ತ ಇಟ್ಟ ಪತ್ನಿ: ಗಂಡನನ್ನು ಕೊಂದು ನಾಗರಪಂಚಮಿ ಆಚರಣೆ

ಜುಲೈ 26ರಂದು ಬಾಬು ಮನೆಗೆ ಬಂದಿದ್ದ ಮಗಳು ಹಾಗೂ ರಾಮಕೃಷ್ಣಗೆ ಬಾಯಿಗೆ ಬಂದಂತೆ ಬೈದಿದ್ದ. ಗಲಾಟೆ ವೇಳೆ ಪತ್ನಿ ಮುನಿರತ್ನ ಕಪಾಳಕ್ಕೂ ಹೊಡೆದಿದ್ದ. ಈ ವೇಳೆ ಅತ್ತೆಗೆ ಹೊಡಿತೀಯಾ ಅಂತಾ ಬಾಬುಗೆ ರಾಮಕೃಷ್ಣ ಕಪಾಳಮೋಕ್ಷ ಮಾಡಿದ್ದು, ಅಳಿಯ ಹೊಡೆದ ಏಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ.

ಆಗ ಮೂವರು ಪ್ಲ್ಯಾನ್​ ಮಾಡಿ ಸಂಬಂಧಿಕರೊಬ್ಬರ ಆ್ಯಂಬುಲೆನ್ಸ್ ತರಿಸಿದ್ದು, ಮುಂಜಾನೆ 3 ಗಂಟೆಗೆ ಬಾಬು ಮೃತದೇಹವನ್ನು ಆ್ಯಂಬುಲೆನ್ಸ್​ನಲ್ಲಿ ಕೋಲಾರಕ್ಕೆ ಶವ ರವಾನೆ ಮಾಡಿದ್ದಾರೆ. ಕೋಲಾರ ಬಳಿ ಪೆಟ್ರೋಲ್ ಸುರಿದು ಬಾಬು ಶವ ಸುಟ್ಟು ಆರೋಪಿಗಳು ಮನೆಗೆ ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಾಲಕ ನಿಶ್ಚಿತ್ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಇದೆಲ್ಲವನ್ನ ನೋಡಿದ್ದ ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರ ಬಳಿ ಹೇಳಿದ್ದಾಳೆ. ಬಾಬು ಸಹೋದರ ದೂರು ಆಧರಿಸಿ ಎಫ್​ಐಆರ್ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಪೊಲೀಸರು, ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.

ವರದಿ: ವಿಕಾಸ್, ಟಿವಿ9 ಕ್ರೈಂ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:08 am, Sat, 2 August 25