AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಜೀವವನ್ನೇ ತೆಗೆದ ಚಿಕನ್ ಪಾರ್ಟಿ; ಹೆಂಡತಿಯ ಮನೆಯಲ್ಲಿ ಊಟ ಮಾಡಿದ ಗಂಡ ಸಾವು!

ಅಪರೂಪಕ್ಕೆ ಮನೆಗೆ ಬಂದ ಅಳಿಯ-ಮಗಳಿಗಾಗಿ ಮಾಂಸದ ಅಡುಗೆ ಮಾಡಲಾಗಿತ್ತು. ಆದರೆ, ಆ ಔತಣಕೂಟವೇ ಅವರ ಪಾಲಿಗೆ ಮೃತ್ಯುವಾಗಲಿದೆ ಎಂಬುದು ಆ ದಂಪತಿಗೆ ಗೊತ್ತಿರಲಿಲ್ಲ. ಚಿಕನ್ ತಿಂದು ಅಳಿಯ ಹಾಗೂ ಚಿಕನ್ ಅಡುಗೆ ಮಾಡಿದ್ದ ಅತ್ತೆ ಇಬ್ಬರೂ ಸಾವನ್ನಪ್ಪಿದ್ದಾರೆ. ಮಗಳು, ಅಪ್ಪ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದೆ. ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲಿ ಸೂತಕ ಮನೆಮಾಡಿದೆ.

Shocking News: ಜೀವವನ್ನೇ ತೆಗೆದ ಚಿಕನ್ ಪಾರ್ಟಿ; ಹೆಂಡತಿಯ ಮನೆಯಲ್ಲಿ ಊಟ ಮಾಡಿದ ಗಂಡ ಸಾವು!
Chicken
ಸುಷ್ಮಾ ಚಕ್ರೆ
|

Updated on:Aug 01, 2025 | 5:05 PM

Share

ನವದೆಹಲಿ, ಆಗಸ್ಟ್ 1: ಛತ್ತೀಸ್‌ಗಢದ (Chhattisgarh) ಕೊರ್ಬಾ ಜಿಲ್ಲೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಮಗಳು- ಅಳಿಯ ಮನೆಗೆ ಬಂದಿದ್ದರಿಂದ ಮನೆಯಲ್ಲಿ ಚಿಕನ್ ಮತ್ತು ಮದ್ಯದ ಪಾರ್ಟಿ ನಡೆದಿತ್ತು. ಮಾಂಸದ ಅಡುಗೆ ಊಟ ಮಾಡಿದ ನಂತರ ಅಳಿಯ ಫುಡ್ ಪಾಯ್ಸನ್​​ನಿಂದ (Food Poisoning) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಾನೇ ಮಾಡಿದ ಅಡುಗೆಯನ್ನು ತಿಂದ ಅತ್ತೆಯೂ ಮೃತಪಟ್ಟಿದ್ದಾರೆ. ಆ ಊಟ ಮಾಡಿದ ಮಗಳು, ಆಕೆಯ ಅಪ್ಪ ಸೇರಿದಂತೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಛತ್ತೀಸ್‌ಗಢದ ಕೊರ್ಬಾದಲ್ಲಿ ಚಿಕನ್ ಮಾಂಸ ತಿಂದ ತಕ್ಷಣ ಕುಟುಂಬದ ಎಲ್ಲರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ವಾಂತಿ ಮತ್ತು ಅತಿಸಾರದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅತ್ತೆ ಮತ್ತು ಅಳಿಯ ಸಾವನ್ನಪ್ಪಿದರು. ಕುಟುಂಬದ ಇತರ ಮೂವರು ಸದಸ್ಯರ ಸ್ಥಿತಿಯೂ ಗಂಭೀರವಾಗಿದೆ.

ಇದನ್ನೂ ಓದಿ: 13 ವರ್ಷದ ಬಾಲಕಿಯನ್ನು ಮದುವೆಯಾದ 40 ವರ್ಷದ ಅಂಕಲ್!

ರಾಜ್‌ಗಮರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊರ್ಕೋಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಳಿಯ ಬಂದ ಮೇಲೆ ಮನೆಯಲ್ಲಿ ವಿಶೇಷ ಔತಣಕೂಟ ಆಯೋಜಿಸಲಾಗಿತ್ತು. ಚಿಕನ್ ಮತ್ತು ಮದ್ಯವನ್ನು ಬಡಿಸಲಾಗಿತ್ತು. ಆದರೆ ಈ ಪಾರ್ಟಿ ಎಲ್ಲರಿಗೂ ಸಾವು ಬದುಕಿನ ಪ್ರಶ್ನೆಯಾಗಿ ಮಾರ್ಪಟ್ಟಿತು. ತನಿಖೆಯಿಂದ ಇದು ಫುಡ್ ಪಾಯ್ಸನ್ ಪ್ರಕರಣ ಎಂದು ತಿಳಿದುಬಂದಿದೆ. ಪಾರ್ಟಿಯಲ್ಲಿ ಬಡಿಸಿದ ಮದ್ಯವೂ ವಿಷಕಾರಿಯಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ತನಿಖೆ ಪೂರ್ಣಗೊಂಡ ನಂತರವೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.

ಇದನ್ನೂ ಓದಿ: ಮನೆಯ ಬೆಡ್​ರೂಂನಲ್ಲಿ ತಂಗಿಯೊಂದಿಗೆ ಗುಪ್ತಚರ ಬ್ಯೂರೋ ಅಧಿಕಾರಿಯ ಶವ ಪತ್ತೆ; ಕೊಂದವರು ಯಾರು?

60 ವರ್ಷದ ರಾಜ್ಮೀನ್ ಬಾಯಿ ಶಿವನಗರ ಚೌಹಾಣ್ ಪಾರಾದಲ್ಲಿ ವಾಸಿಸುತ್ತಿದ್ದರು. ರಾಜ್ಮೀನ್ ಬಾಯಿ ಅವರ ಅಳಿಯ ದೇವ್ ಸಿಂಗ್ ಗುರುವಾರ ರಾತ್ರಿ ತಮ್ಮ ಪತ್ನಿ ಚಮೇಲಿ ಜೊತೆ ಮಾವನ ಮನೆಗೆ ಬಂದಿದ್ದರು. ಅವರು ಭೈಷ್ಮಾ ದಾದರ್ ಕಲಾ ನಿವಾಸಿಯಾಗಿದ್ದರು. ಅವರಿಗೆ ಭರ್ಜರಿ ಔತಣ ನೀಡಲು ರಾಜ್ಮೀನ್ ಬಾಯಿ, ಆಕೆಯ ಗಂಡ, ಆಕೆಯ ಮಗ ರಾಜ್‌ಕುಮಾರ್ ಒಟ್ಟಿಗೆ ಚಿಕನ್ ಪಾರ್ಟಿ ಮಾಡಿದರು. ಊಟವಾದ ನಂತರ, ಮೊದಲು ರಾಜ್ಮೀನ್ ಬಾಯಿ ಅವರ ಆರೋಗ್ಯ ಹದಗೆಟ್ಟಿತು. ನಂತರ, ಅಳಿಯನ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆಯ ಸಮಯದಲ್ಲಿ ಇಬ್ಬರೂ ಸಾವನ್ನಪ್ಪಿದರು. ಉಳಿದವರ ಸ್ಥಿತಿ ಗಂಭೀರವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:04 pm, Fri, 1 August 25

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​