ಪ್ರಿಯಕರನೊಂದಿಗೆ ಸೇರಿ ಹಬ್ಬದ ದಿನವೇ ಪತಿಗೆ ಮುಹೂರ್ತ ಇಟ್ಟ ಪತ್ನಿ: ಗಂಡನನ್ನು ಕೊಂದು ನಾಗರಪಂಚಮಿ ಆಚರಣೆ
ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಬಳಿಕ ಪತ್ನಿ ನಾಗರಪಂಚಮಿ ಹಬ್ಬ ಆಚರಿಸಿರುವಂತಹ ಘಟನೆ ನಡೆದಿದೆ. ಸದ್ಯ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕೊಪ್ಪಳ, ಆಗಸ್ಟ್ 01: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು (wife) ಕೊಂದು (kill) ಪತ್ನಿ ನಾಗರ ಪಂಚಮಿ ಆಚರಿಸಿದ್ದ ವಿಲಕ್ಷಣ ಘಟನೆಯೊಂದು ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ನಡೆದಿದೆ. ಸದ್ಯ ಕೊಲೆ ಪ್ರಕರಣ ಭೇದಿಸಿರುವ ಮುನಿರಾಬಾದ್ ಠಾಣೆ ಪೊಲೀಸರು ಆರೋಪಿಗಳಾದ ನೇತ್ರಾವತಿ ಮತ್ತು ಶ್ಯಾಮಣ್ಣ ಎಂಬುವವರನ್ನು ಬಂಧಿಸಿದ್ದಾರೆ. ದ್ಯಾಮಣ್ಣ ವಜ್ರಬಂಡಿ ಕೊಲೆಯಾದ ಪತಿ.
ಪತಿಯನ್ನು ಪರಲೋಕಕ್ಕೆ ಕಳಿಸಿ ನಾಗರಪಂಚಮಿ ಆಚರಿಸಿದ್ದ ಪತ್ನಿ
ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ ಆಗಿದ್ದು, ಲಾರಿ ಚಾಲಕನಾಗಿದ್ದ. ನೇತ್ರಾವತಿ ಮತ್ತು ಶ್ಯಾಮಣ್ಣ ಒಂದೇ ಗ್ರಾಮದವರಾಗಿದ್ದರು. ನೇತ್ರಾವತಿಗೆ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಆಗಿ, ಮೂರು ಮಕ್ಕಳು ಆಗಿದ್ದರೂ ಶ್ಯಾಮಣ್ಣ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಹಿನ್ನಲೆ ಇಬ್ಬರು ಕೊಲೆ ಸಂಚು ರೂಪಿಸಿದ್ದಾರೆ.
ಇದನ್ನೂ ಓದಿ: ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳದಲ್ಲಿ ಸಂಸಾರ: ಒಂದುವರೆ ವರ್ಷದ ಬಳಿಕ ಸಿಕ್ಕಿಬಿದ್ದಳು
ಅದರಂತೆ ಜುಲೈ 25ರಂದು ಬೂದಗುಂಪ ಬಳಿ ಗ್ಯಾರೇಜ್ವೊಂದರಿಂದ ರಾಡ್ ತಂದಿದ್ದ ಶ್ಯಾಮಣ್ಣ, ಅದೇ ರಾಡ್ನಿಂದ ತಮ್ಮ ಜಮೀನಿನಲ್ಲೇ ದ್ಯಾಮಣ್ಣನನ್ನ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಶವಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಕೊಲೆ ಬಳಿಕ ರಾಡ್ ವಾಪಸ್ ಕೂಡ ನೀಡಿದ್ದಾನೆ. ಅತ್ತ ಗಂಡ ಹೆಣವಾಗಿದ್ದರೆ ಇತ್ತ ಮನೆಯಲ್ಲಿ ನೇತ್ರಾವತಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದ್ದಾಳೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಂದ ಪತ್ನಿ
ಕೊಲೆ ಬಳಿಕ ಪತಿ ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಮನೆಯವರಿಗೆ ನಂಬಿಸಿದ್ದಾಳೆ. ತಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು 5 ದಿನ ಮನೆಯಲ್ಲೇ ಇದ್ದಳು. ಇತ್ತ ದ್ಯಾಮಣ್ಣ ಸಹೋದರರು ಅನುಮಾನಗೊಂಡು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮುನಿರಾಬಾದ್ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ಪತಿ ಕೊಲೆ ವಿಚಾರವನ್ನು ನೇತ್ರಾವತಿ ತಿಳಿಸಿದ್ದಾಳೆ. ಆ ಮೂಲಕ ಪ್ರಿಯಕರ ಶ್ಯಾಮಣ್ಣ ಜೊತೆ ಸೇರಿ ಪತಿಯನ್ನ ಕೊಂದಿರುವುದು ಬಹಿರಂಗವಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:03 am, Fri, 1 August 25







