AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳದಲ್ಲಿ ಸಂಸಾರ: ಒಂದುವರೆ ವರ್ಷದ ಬಳಿಕ ಸಿಕ್ಕಿಬಿದ್ದಳು

ಪತಿ ನಿಂಗಪ್ಪ ಭದ್ರಾ ಕಾಲುವೆಯಲ್ಲಿ ಕಾಲು ಜಾರಿ ಬಿದಿದ್ದಾನೆಂದು ಪತ್ನಿ ಲಕ್ಷ್ಮೀ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಭದ್ರಾ ಕಾಲುವೆಯಲ್ಲಿ ಎಷ್ಟೇ ಹುಡುಕಿದರೂ ನಿಂಗಪ್ಪ ಪತ್ತೆಯಾಗಿರಲಿಲ್ಲ. ಒಂದು ವರ್ಷದ ಹಿಂದೆ ದಾಖಲಾಗಿದ್ದ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳದಲ್ಲಿ ಸಂಸಾರ: ಒಂದುವರೆ ವರ್ಷದ ಬಳಿಕ ಸಿಕ್ಕಿಬಿದ್ದಳು
ಆರೋಪಿಗಳಾದ ಲಕ್ಷ್ಮೀ, ತಿಪ್ಪೇಶ್​ ನಾಯ್ಕ್​
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ|

Updated on:Jul 28, 2025 | 10:20 PM

Share

ದಾವಣಗೆರೆ, ಜುಲೈ 28: ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳಕ್ಕೆ (Kerala) ಪರಾರಿಯಾಗಿದ್ದ ಪತ್ನಿಯನ್ನು ಚನ್ನಗಿರಿ (Channagiri) ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಲಕ್ಷ್ಮೀ (38) ಬಂಧಿತ ಆರೋಪಿ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಪ್ರಿಯಕರ ತಿಪ್ಪೇಶ್ ನಾಯ್ಕ್ (42) ಮತ್ತು ಸಂತೋಷ್‌ (40) ಎಂಬುವರನ್ನೂ ಕೂಡ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ನಿಂಗಪ್ಪ ಕೊಲೆಯಾದ ವ್ಯಕ್ತಿ. 

ಏನಿದು ಪ್ರಕರಣ?

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆಯ ನಿವಾಸಿ ಲಕ್ಷ್ಮೀ ಮತ್ತು ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದ ನಿವಾಸಿಯಾಗಿದ್ದ ನಿಂಗಪ್ಪ ಮದುವೆಯಾಗಿ ಎಂಟು ವರ್ಷ ಕಳೆದಿದೆ. ಮದುವೆಯಾಗಿ ಎಂಟು ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಮಕ್ಕಳ ಭಾಗ್ಯ ಪಡೆಯಲು ಲಕ್ಷ್ಮೀ ಪತಿಯೊಂದಿಗೆ ಸುತ್ತದ ದೇವಾಲಯವಿರಲಿಲ್ಲ, ಹೋಗದ ಆಸ್ಪತ್ರೆಗಳಿರಲಿಲ್ಲ. ಕೊನೆಗೆ ಒಂದು ದಿನ ನಿಂಗಪ್ಪನಿಗೆ ಮಕ್ಕಳಾಗುವ ಯೋಗವಿಲ್ಲ ಎಂಬುದು ಗೊತ್ತಾಗಿದೆ.

ನಿಂಗಪ್ಪ ಅಡಿಕೆ ಕೆಲಸ ಮಾಡುತ್ತಿದ್ದು ಆತನ ಸ್ನೇಹಿತರಾದ ತಿಪ್ಪೇಶ್ ನಾಯ್ಕ್​ ಹಾಗೂ ಸಂತೋಷ್ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಆಗ, ತಿಪ್ಪೇಶ್ ನಾಯ್ಕ್​ಗೆ ಲಕ್ಷ್ಮೀಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ, ಅನೈತಿಕ ಸಂಬಂಧ ಬೆಳದಿದೆ. ಇದರ ಪರಿಣಾಮವಾಗಿ ಲಕ್ಷ್ಮೀ ಗರ್ಭಿಣಿಯಾಗಿದ್ದಳು.

ಇದನ್ನೂ ಓದಿ
Image
ರಾಮನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ
Image
ಬೆಳಗಾವಿ: ಹೂವಿನ ಅಂಗಡಿ ಮಾಲೀಕನನ್ನು ಕೊಂದ ಬಿರಿಯಾನಿ ಶಾಪ್​ ಓನರ್
Image
ಸ್ನೇಹಿತೆಯ ಮಾತು ನಂಬಿ ಹೋಟೆಲ್​ನಿಂದ ಹೊರಬಂದ ಯುವಕ ಕಿಡ್ನ್ಯಾಪ್​
Image
ಲೈಂಗಿಕವಾಗಿ ತೃಪ್ತಿ ಪಡಿಸಲಿಲ್ಲವೆಂದು ಗಂಡನನ್ನು ಕೊಂದ ಹೆಂಡತಿ!

ತನಗೆ ಮಕ್ಕಳು ಆಗುವುದಿಲ್ಲ ಎಂದು ತಿಳಿದಿದ್ದರೂ ಪತ್ನಿ ಗರ್ಭಿಣಿಯಾಗಿದ್ದರಿಂದ ಅನುಮಾನಗೊಂಡ ನಿಂಗಪ್ಪ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದನು. ಪತಿಯ ವರ್ತನೆಗೆ ಕೋಪಗೊಂಡ ಲಕ್ಷ್ಮೀ ನಾನು ತಾಯಿಯಾಗುವ ಭಾಗ್ಯವನ್ನು ಹಾಳು ಮಾಡಿದ ಪತಿ ನಿಂಗಪ್ಪನನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ರೂಪಿಸಿದಳು.

2024 ರ ಜನವರಿ 18 ರಂದು ಲಕ್ಷ್ಮೀ ತನ್ನ ಪ್ರಿಯಕರ ತಿಪ್ಪೇಶ್ ನಾಯ್ಕ ಜೊತೆ ಸೇರಿಕೊಂಡು ನಿಂಗಪ್ಪನನ್ನು ಪಾರ್ಟಿ ಮಾಡಿಸುವ ನೆಪದಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ, ಲಕ್ಷ್ಮೀ ಮತ್ತು ತಿಪ್ಪೇಶ್​ ಇಬ್ಬರೂ ಸೇರಿಕೊಂಡು ನಿಂಗಪ್ಪನಿಗೆ ಕಂಠಪೂರ್ತಿ ಕುಡಿಸಿದ್ದಾರೆ. ಮದ್ಯದ ನಶೆಯಲ್ಲಿದ್ದ ನಿಂಗಪ್ಪನನ್ನು ಬಸವಾಪುರ ಗ್ರಾಮದ ಬಳಿರುವ ಭದ್ರಾ ನಾಲೆಯಲ್ಲಿ ತಳಿದ್ದಾರೆ. ಬಳಿಕ, ಪತಿ ನಿಂಗಪ್ಪ ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಲಕ್ಷ್ಮೀ ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪೊಲೀಸರು ಭದ್ರಾ ನಾಲೆಯಲ್ಲಿ ಎಷ್ಟೇ ಶೋಧ ಕಾರ್ಯಾ ನಡೆಸಿದರೂ ನಿಂಗಪ್ಪನ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಲಕ್ಷ್ಮೀ ತವರು ಮನೆ ಸೇರಿದ್ದಾಳೆ. ಇತ್ತ ತಿಪ್ಪೇಶ್ ನಾಯ್ಕ್​ ಕೆಲಸಕ್ಕೆಂದು ಕೇರಳಕ್ಕೆ ಹೋಗಿ ಅಲ್ಲಿಯೇ ಸೆಟಲ್​ ಆಗಿದ್ದಾನೆ. ನಂತರ ತಿಪ್ಪೇಶ್​ ಪ್ರೇಯಸಿ ಲಕ್ಷ್ಮೀಯನ್ನು ಕೇರಳಕ್ಕೆ ಕರೆಸಿಕೊಂಡಿದ್ದಾನೆ. ಲಕ್ಷ್ಮೀ ತನ್ನ ತವರು ಮನೆಯಲ್ಲಿ ಯಾರಿಗೂ ಹೇಳದೆ-ಕೇಳದೆ ಕೇರಳಕ್ಕೆ ಹೋಗಿದ್ದಾಳೆ. ಆಗ, ಲಕ್ಷ್ಮೀ ತವರು ಮನೆಯವರು ಲಕ್ಷ್ಮೀ ಕಾಣೆಯಾಗಿದ್ದಾಳೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ

ಲಕ್ಷ್ಮೀ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ತಿಪ್ಪೇಶ್ ನಾಯ್ಕ್​ನ ಸ್ನೇಹಿತ ಸಂತೋಷ್​ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, “ಲಕ್ಷ್ಮೀ ಹಾಗೂ ತಿಪ್ಪೇಶ್ ನಾಯ್ಕನಿಗೆ ಅಕ್ರಮ ಸಂಬಂಧ ಇದೆ. ಲಕ್ಷ್ಮೀ ಗಂರ್ಭಿಣಿಯಾದಾಗ ನಿಂಗಪ್ಪ ಗರ್ಭಪಾತ ಮಾಡಿಸಿದ್ದನು. ಇದರಿಂದ ಕೋಪಗೊಂಡ ಲಕ್ಷ್ಮೀ, ಪ್ರಿಯಕರ ತಿಪ್ಪೇಶ್​ ಜೊತೆ ಸೇರಿಕೊಂಡು ಪತಿ ನಿಂಗಪ್ಪನನ್ನು ಕೊಲೆ ಮಾಡಿದ್ದಾಳೆ” ಎಂದು ಬಾಯಿ ಬಿಟ್ಟಿದ್ದಾನೆ.

ಒಟ್ಟಿನಲ್ಲಿ ಒಂದು ವರ್ಷದ ಹಿಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ ಕೊಲೆ ಎಂದು ದೃಢಪಟ್ಟಿದ್ದು ಆರೋಪಿಗಳು ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 pm, Mon, 28 July 25