AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ

ಮಹಿಳೆಯೊಬ್ಬಳು ಲವರ್ ಜತೆ ಸೇರಿ ತನ್ನ ಗಂಡನನ್ನೇ ಕೊಲೆ(Murder) ಮಾಡಿರುವ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ. ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ಇದು ನೆನಪಿಸುತ್ತದೆ. ಮಹಿಳೆ ತನ್ನ ತಾಯಿಯ ಮನೆಯ ಬಳಿ ವಾಸಿಸುತ್ತಿದ್ದ ಟ್ಯೂಷನ್ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದ್ದು, ಮಹಿಳೆ ಆರೋಪಗಳನ್ನು ನಿರಾಕರಿಸಿದ್ದಾರೆ. ಗುರುವಾರ ತಡರಾತ್ರಿ 30 ವರ್ಷದ ಸೋನು ಕುಮಾರ್ ಎಂಬಾತ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಅವರ ದೇಹದಲ್ಲಿ ಹಲವಾರು ಗಾಯಗಳ ಗುರುತುಗಳು ಕಂಡುಬಂದಿದ್ದು, ದೇಹವು ರಕ್ತದಲ್ಲಿ ತೊಯ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ
ಕ್ರೈಂ Image Credit source: India Today
ನಯನಾ ರಾಜೀವ್
|

Updated on: Jul 28, 2025 | 8:11 AM

Share

ಸಮಷ್ಟಿಪುರ, ಜುಲೈ 28: ಮಹಿಳೆಯೊಬ್ಬಳು ಲವರ್ ಜತೆ ಸೇರಿ ತನ್ನ ಗಂಡನನ್ನೇ ಕೊಲೆ(Murder) ಮಾಡಿರುವ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ. ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ಇದು ನೆನಪಿಸುತ್ತದೆ. ಮಹಿಳೆ ತನ್ನ ತಾಯಿಯ ಮನೆಯ ಬಳಿ ವಾಸಿಸುತ್ತಿದ್ದ ಟ್ಯೂಷನ್ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದ್ದು, ಮಹಿಳೆ ಆರೋಪಗಳನ್ನು ನಿರಾಕರಿಸಿದ್ದಾರೆ.

ಗುರುವಾರ ತಡರಾತ್ರಿ 30 ವರ್ಷದ ಸೋನು ಕುಮಾರ್ ಎಂಬಾತ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಅವರ ದೇಹದಲ್ಲಿ ಹಲವಾರು ಗಾಯಗಳ ಗುರುತುಗಳು ಕಂಡುಬಂದಿದ್ದು, ದೇಹವು ರಕ್ತದಲ್ಲಿ ತೊಯ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಸೋನು, ಐದು ವರ್ಷಗಳ ಹಿಂದೆ ಸ್ಮಿತಾ ದೇವಿಯನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ಅವರ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಸ್ಮಿತಾ ಮಾಧೋ ವಿಶನ್‌ಪುರದಲ್ಲಿರುವ ತನ್ನ ತಾಯಿಯ ಮನೆಯಲ್ಲಿಯೇ ಇರಬೇಕೆಂದು ಒತ್ತಾಯಿಸಿದ್ದರಿಂದ ಆಗಾಗ ಜಗಳಗಳು ನಡೆಯುತ್ತಿದ್ದವು. ಗ್ರಾಮ ಪಂಚಾಯತಿ ದಂಪತಿ ರಾಜಿಮಾಡಿಕೊಂಡು ಖುಷಿಯಾಗಿರಿ ಎಂದು ಸಲಹೆ ನೀಡಿತ್ತು, ಇದರ ಪರಿಣಾಮವಾಗಿ ಅವರ ನಡುವೆ ಲಿಖಿತ ಒಪ್ಪಂದವೂ ಆಗಿತ್ತು.

ಮತ್ತಷ್ಟು ಓದಿ: ಮುಂಬೈ: ಪ್ರೇಮಿ ಜತೆ ಸೇರಿ ಗಂಡನ ಕೊಲೆ ಮಾಡಿ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಪತ್ನಿ

ಕುಟುಂಬ ಸದಸ್ಯರ ಪ್ರಕಾರ, ಹರಿಓಂ ಮಕ್ಕಳಿಗೆ ಪಾಠ ಮಾಡಲು ಸೋನು ಮನೆಗೆ ನಿತ್ಯ ಭೇಟಿ ನೀಡಲು ಪ್ರಾರಂಭಿಸಿದ ನಂತರ ಪರಿಸ್ಥಿತಿ ಹದಗೆಟ್ಟಿತ್ತು. ಒಂದು ಸಂಜೆ, ಸೋನು ಮನೆಗೆ ತಡವಾಗಿ ಬಂದಾಗ, ಟ್ಯೂಷನ್ ಶಿಕ್ಷಕರೊಂದಿಗೆ ತನ್ನ ಹೆಂಡತಿ ಕೆಟ್ಟ ಪರಿಸ್ಥಿತಿಯಲ್ಲಿ ಇರುವುದನ್ನು ನೋಡಿದ್ದರು. ತೀವ್ರ ವಾಗ್ವಾದ ನಡೆಯಿತು, ಮತ್ತು ಅವನು ಹರಿಓಮ್‌ಗೆ ಇನ್ನೆಂದೂ ಮನೆ ಕಡೆ ತಲೆ ಹಾಕಬೇಡ ಎಂದು ಎಚ್ಚರಿಕೆ ನೀಡಿದ್ದ ಎಂದು ಸೋನು ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಹರಿಓಂ ಕೆಲವು ದಿನಗಳವರೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರೂ, ಸೋನುವಿನ ಅಣ್ಣ ತನ್ನ ಮಕ್ಕಳಿಗೆ ಪಾಠ ಮಾಡಲು ಕರೆ ಮಾಡಿದಾಗ ಅವನು ಮತ್ತೆ ಆಕೆಯ ಸಂಪರ್ಕಕ್ಕೆ ಬಂದಿದ್ದಾನೆ. ಕೊಲೆಯಾದ ರಾತ್ರಿ, ಸೋನು ತನ್ನ ಆಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಹೊರಗೆ ಹೋಗಿದ್ದ ಆದರೆ ಮತ್ತೆ ಹಿಂತಿರುಗಲಿಲ್ಲ. ಮರುದಿನ ಬೆಳಗ್ಗೆ ಅವನ ಶವ ಮನೆಯಲ್ಲಿ ಪತ್ತೆಯಾಗಿತ್ತು.

ಸೋನುವಿನ ತಂದೆ ತನ್ನ ಸೊಸೆ ಸ್ಮಿತಾ ವಿರುದ್ಧ ತನ್ನ ಮಗನನ್ನು ಇಬ್ಬರು ಅಥವಾ ಮೂವರು ಇತರ ಜನರೊಂದಿಗೆ ಸೇರಿ ಕೊಲೆ ಮಾಡಿದ್ದಾರೆ ಎಂದು ಸ್ಪಷ್ಟ ಆರೋಪ ಮಾಡಿದ್ದಾರೆ, ಅದರಲ್ಲಿ ಅವರಲ್ಲಿ ಆಕೆಯ ಪ್ರಿಯಕರನೆಂದು ಹೇಳಲಾದ ವ್ಯಕ್ತಿಯೂ ಸೇರಿದ್ದಾರೆ. ಪೊಲೀಸರು ಸ್ಮಿತಾಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಟ್ಯೂಷನ್ ಶಿಕ್ಷಕ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಮಿತಾ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ, ಸೋನು ಕುಮಾರ್ ತಮ್ಮ ಮನೆಯೊಳಗೆ ಮೃತಪಟ್ಟಿರುವುದನ್ನು ನೋಡಿ ನನಗೂ ಆಘಾತವಾಗಿದೆ ಎಂದಿದ್ದಾಳೆ. ಅವರು ರಾತ್ರಿ 1 ಗಂಟೆಗೆ ಮನೆಗೆ ಬಂದಿದ್ದರು. ನಂತರ ನನ್ನೊಂದಿಗೆ ಜಗಳವಾಡಿದ್ದರು. ಅವರು ನಿತ್ಯ ಕುಡಿದು ಜಗಳವಾಡುತ್ತಿದ್ದರು. ನಂತರ ನಾನು ಮಲಗಲು ಹೋದೆ. ಬೆಳಗ್ಗೆ 4 ಗಂಟೆಗೆ ಎದ್ದಾಗ, ಶವ ಕಂಡಿತ್ತು. ತಕ್ಷಣ ನಾನೇ ಕರೆ ಮಾಡಿ ಎಲ್ಲರಿಗೂ ವಿಷಯ ತಿಳಿಸಿದ್ದೇನೆ. ರಾತ್ರಿ ಅವರು ಬಂದಾಗಲೇ ಶರ್ಟ್​​ ಮೇಲೆ ರಕ್ತ ಹಾಗೂ ಮಣ್ಣಿನ ಕಲೆ ಇತ್ತು ಎಂದಿದ್ದಾರೆ.

ಘಟನಾ ಸ್ಥಳವನ್ನು ಪರಿಶೀಲಿಸಲು ಪೊಲೀಸರು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಕರೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇಂದೋರ್ ಮೂಲದ ರಾಜಾ ರಘುವಂಶಿಯನ್ನು ಅವರ ಪತ್ನಿ ಸೋನಂ ಹನಿಮೂನ್​​ಗೆಂದು ಮೇಘಾಲಯಕ್ಕೆ ಕರೆದೊಯ್ದು ಅಲ್ಲಿ ಲವರ್ ಕೈಯಲ್ಲಿ ಹತ್ಯೆ ಮಾಡಿಸಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ