AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಪೋಷಕರು ಹಾಗೂ ಸಹೋದರಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ ವ್ಯಕ್ತಿ

ಪೋಷಕರು ಹಾಗೂ ಸಹೋದರಿಯನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ದಾಳಿಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದಿಲಿಯಾ ಗ್ರಾಮದಲ್ಲಿ ಭಾನುವಾರ ಈ ಭೀಕರ ಹತ್ಯೆಗಳು ನಡೆದಿವೆ.ಪೊಲೀಸರ ಪ್ರಕಾರ, ಆರೋಪಿ ತನ್ನ ತಂದೆ, ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ.

ಉತ್ತರ ಪ್ರದೇಶ: ಪೋಷಕರು ಹಾಗೂ ಸಹೋದರಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ ವ್ಯಕ್ತಿ
ಸಾವು
ನಯನಾ ರಾಜೀವ್
|

Updated on: Jul 28, 2025 | 9:49 AM

Share

ಗಾಜಿಪುರ, ಜುಲೈ 28: ಪೋಷಕರು ಹಾಗೂ ಸಹೋದರಿಯನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕಡಿದು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ದಾಳಿಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದಿಲಿಯಾ ಗ್ರಾಮದಲ್ಲಿ ಭಾನುವಾರ ಈ ಭೀಕರ ಹತ್ಯೆಗಳು ನಡೆದಿವೆ.ಪೊಲೀಸರ ಪ್ರಕಾರ, ಆರೋಪಿ ತನ್ನ ತಂದೆ, ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ.

ಅವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಗ್ರಾಮದಲ್ಲಿ ಶಾಂತಿ ಕಾಪಾಡಲು ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕುಟುಂಬದೊಳಗೆ ದೀರ್ಘಕಾಲದ ಜಮೀನು ವಿವಾದವಿದ್ದು, ಇದು ಕೊಲೆಗಳಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಕಾಸ್ಗಂಜ್‌ನಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ ಒಂಬತ್ತು ಮಕ್ಕಳ ತಾಯಿ ರೀನಾ ಮತ್ತು ಆಕೆಯ ಪ್ರಿಯಕರ ಹನೀಫ್ ಸೇರಿ ಆಕೆಯ ಪತಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿತ್ತು.

ಮತ್ತಷ್ಟು ಓದಿ: ರಾಮನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಪೊಲೀಸ್ ತನಿಖೆಯಲ್ಲಿ ರೀನಾ ಮತ್ತು ಹನೀಫ್ ನಡುವೆ ಅಕ್ರಮ ಸಂಬಂಧವಿತ್ತು, ರತಿರಾಮ್ ತಮ್ಮ ಸಂಬಂಧಕ್ಕೆ ಅಡ್ಡಿ ಬರುತ್ತಾರೆಂದು ಅವರನ್ನು ಕೊಲೆ ಮಾಡಿದ್ದಾರೆ. ಗಂಡನನ್ನು ಕಾಡಿಗೆ ಕರೆದೊಯ್ದು, ಕೊಲೆ ಮಾಡಿ ಬಳಿಕ ಬಾವಿಯಲ್ಲಿ ಎಸೆದಿದ್ದರು.

ಮತ್ತೊಂದು ಘಟನೆ ಅಕ್ಕ ಯಾರನ್ನೋ ಪ್ರೀತಿಸಿದ್ದಕ್ಕೆ ಕೊಡಲಿಯಿಂದ ಕಡಿದು ಕೊಂದ ಸಹೋದರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ ರೇಣು ಆಗಾಗ ಯಾವುದೋ ಹುಡುಗನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುತ್ತಿದ್ದಳು. ಇದನ್ನು ಆಕೆಯ ಕಿರಿಯ ಸಹೋದರ ವಿರೋಧಿಸಿದ್ದ.

ಶನಿವಾರ ಸಂಜೆ ಎಲ್ಲರ ನಡುವೆ ಜಗಳ ನಡೆದು, ಮಾರಣಾಂತಿಕ ಹಲ್ಲೆ ನಡೆದಿದೆ. ಅಯೋಧ್ಯೆಯ ಪಟೇರಂಗ ಪ್ರದೇಶದಲ್ಲಿ 22 ವರ್ಷದ ಬಾಲಕಿಯನ್ನು ಆಕೆಯ 17 ವರ್ಷದ ಸಹೋದರ ಕೊಡಲಿಯಿಂದ ಕಡಿದು ಕೊಂದಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಘಟನೆ ನಡೆದ ಸಮಯದಲ್ಲಿ, ಮನೆಯಲ್ಲಿ ಬೇರೆ ಯಾರೂ ಕುಟುಂಬ ಸದಸ್ಯರು ಇರಲಿಲ್ಲ. ಸಹೋದರ ರೇಣು ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಅವರ ತಂದೆ ಚಂದ್ರಭನ್ ಯಾದವ್ ಮಥುರಾದಲ್ಲಿದ್ದರು ಮತ್ತು ಅವರ ತಾಯಿ ಮೇವು ಸಂಗ್ರಹಿಸಲು ಹೋಗಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ