AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ: ಪ್ರೇಮಿ ಜತೆ ಸೇರಿ ಗಂಡನ ಕೊಲೆ ಮಾಡಿ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಪತ್ನಿ

ಇತ್ತೀಚೆಗಷ್ಟೇ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಹತ್ಯೆಗೆ ಹೋಲುವ ಮತ್ತೊಂದು ಕೊಲೆ ಮುಂಬೈನಲ್ಲಿ ನಡೆದಿದೆ. ವಿಜಯ್ ಎಂಬಾತನನ್ನು ಅವರ ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿ ಮನೆಯ ಟೈಲ್ಸ್​ ಅಡಿಯಲ್ಲಿ ಹೂತುಹಾಕಿದ್ದ ಘಟನೆ ಬೆಳಕಿಗೆ ಬಂದಿದೆ. ಇದೀಗ ಇಬ್ಬರು ಆರೋಪಿಗಳಾಗಿ ಹುಡುಕಾಟ ನಡೆಯುತ್ತಿದೆ. ಮನೆಗೆ ತಲುಪಿದ ಬಳಿಕ ನೆಲದ ಮೇಲೆ ಬೇರೆ ಬಣ್ಣದ ಟೈಲ್ಸ್​ ಕಂಡಿತ್ತು. ಅದರಿಂದ ಅವರು ಅನುಮಾನಗೊಂಡಿದ್ದರು.

ಮುಂಬೈ: ಪ್ರೇಮಿ ಜತೆ ಸೇರಿ ಗಂಡನ ಕೊಲೆ ಮಾಡಿ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಪತ್ನಿ
ಮುಂಬೈ ಕೊಲೆ
ನಯನಾ ರಾಜೀವ್
|

Updated on: Jul 22, 2025 | 8:30 AM

Share

ಮುಂಬೈ, ಜುಲೈ 22: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿ ಮನೆಯ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬೆಂದಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆಯ ಬಳಿಕ ಯಾರಿಗೂ ಅನುಮಾನ ಬಾರದಂತೆ, ಮನೆಯಲ್ಲಿ ಟೈಲ್ಸ್ ಅಗೆದು ತನ್ನ ಪತಿಯ ಶವವನ್ನು ಹೂತು ಹಾಕಿದ್ದಾಳೆ. ನಂತರ ಅದರ ಮೇಲೆ ಇನ್ನಷ್ಟು ಟೈಲ್ಸ್ ಹಾಕಿದ್ದಳು.

35 ವರ್ಷದ ವಿಜಯ್ ಚವಾಣ್ ತನ್ನ ಪತ್ನಿಯೊಂದಿಗೆ ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ನಲಸೋಪಾರದಲ್ಲಿ ವಾಸಿಸುತ್ತಿದ್ದರು. ವಿಜಯ್ ಕಳೆದ 15 ದಿನಗಳಿಂದ ಕಾಣೆಯಾಗಿದ್ದರು.ಹಾಗಾಗಿ ಅವರ ಸಹೋದರ ಅವರನ್ನು ಹುಡುಕಲು ಮುಂಬೈಗೆ ಬಂದಿದ್ದರು. ಅಲ್ಲಿ ಅವರ ಪತ್ನಿಯೂ ಕಾಣೆಯಾಗಿರುವುದು ಕಂಡುಬಂದಿತ್ತು. ಮನೆಗೆ ತಲುಪಿದ ಬಳಿಕ ನೆಲದ ಮೇಲೆ ಬೇರೆ ಬಣ್ಣದ ಟೈಲ್ಸ್​ ಕಂಡಿತ್ತು. ಅದರಿಂದ ಅವರು ಅನುಮಾನಗೊಂಡಿದ್ದರು.

ಎಲ್ಲರೂ ಸೇರಿ ಟೈಲ್ಸ್​ ತೆಗೆದು ನೋಡಿದಾಗ ಅದರ ಕೆಳಗೆ ವಿಜಯ್ ಮೃತದೇಹ ಕೊಳೆತು ನಾರುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆರಂಭಿಕ ತನಿಖೆಯಲ್ಲಿ ವಿಜಯ್ ಅವರ 28 ವರ್ಷದ ಪತ್ನಿ ಕೋಮಲ್ ಮೇಲೆ ಶಂಕೆ ವ್ಯಕ್ತಪಡಿಸಲಾಯಿತು. ಕೋಮಲ್ ತನ್ನ ಪತಿಯನ್ನು ಕೊಂದು ತನ್ನ ಪ್ರಿಯಕರ ಮೋನು ಜೊತೆ ಪರಾರಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಇದಲ್ಲದೆ, ಇಬ್ಬರ ನಡುವಿನ ಪ್ರೇಮ ಸಂಬಂಧದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಮತ್ತಷ್ಟು ಓದಿ: ರಾಜಾ ರಘುವಂಶಿ ಹತ್ಯೆ; ರಾಜ್ ಕುಶ್ವಾಹ ಖರೀದಿಸಿದ್ದ ಪಿಸ್ತೂಲ್, ಮದ್ದುಗುಂಡುಗಳು ಪತ್ತೆ

ಇತ್ತೀಚೆಗಷ್ಟೇ ಮೇಘಾಲಯದಲ್ಲಿ ಇಂಥದ್ದೇ ಕೊಲೆ ನಡೆದಿತ್ತು ಇಂದೋರ್​ನ ರಾಜಾ ರಘುವಂಶಿಯನ್ನು ಅವರ ಪತ್ನಿ ಸೋನಂ ಹಾಗೂ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಸೇರಿ ಶಿಲ್ಲಾಂಗ್​​ನಲ್ಲಿ ಕೊಲೆ ಮಾಡಿದ್ದರು. ಅವರಿಬ್ಬರು ಮದುವೆಯಾಗಿ ಕೆಲವೇ ದಿನಗಳಾಗಿತ್ತು. ಸೋನಂಗೆ ಈ ಮದುವೆ ಇಷ್ಟವಿರಲಿಲ್ಲ ಆಕೆ ರಾಜ್​ನನ್ನು ಪ್ರೀತಿಸುತ್ತಿದ್ದಳು. ಮನೆಯವರು ಈ ಮದುವೆಗೆ ಒಪ್ಪಿಕೊಂಡಿರಲಿಲ್ಲ.

ಹಾಗಾಗಿ ಮದುವೆ ಬಳಿಕ ಗಂಡನನ್ನು ಕೊಂದು ಪ್ರಿಯಕರನ ಜತೆ ಇರಬೇಕು ಎನ್ನುವ ನಿರ್ಧಾರ ಮಾಡಿ ಹನಿಮೂನ್​ಗೆಂದು ಗಂಡನನ್ನು ಕರೆದೊಯ್ದು ಕೊಲೆ ಮಾಡಿದ್ದಳು. ಇದೀಗ ಇಬ್ಬರನ್ನೂ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು