ಪಾಕಿಸ್ತಾನ: ಕುಟುಂಬದ ಅನುಮತಿ ಇಲ್ಲದೆ ಮದುವೆಯಾಗಿದ್ದಕ್ಕೆ ಜೋಡಿಯ ಬರ್ಬರ ಹತ್ಯೆ
ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಕುಟುಂಬದ ವಿರೋಧ ಕಟ್ಟಿಕೊಂಡು ಇಷ್ಟ ಪಟ್ಟವರನ್ನು ಮದುವೆಯಾಗಿದ್ದಕ್ಕೆ ಜೋಡಿಯನ್ನು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಆರೋಪಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದಲ್ಲಿರುವ ಬುಡಕಟ್ಟು ಜನಾಂಗದವರ ಆದೇಶದ ಮೇರೆಗೆ ಅವರನ್ನು ಹತ್ಯೆ ಮಾಡಲಾಗಿದೆ. ಹಂತಕರು ಈ ಕೃತ್ಯವನ್ನು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಇಸ್ಲಾಮಾಬಾದ್, ಜುಲೈ 22: ಕುಟುಂಬದ ಅನುಮತಿ ಇಲ್ಲದೆ ಮದುವೆ(Marriage)ಯಾಗಿದ್ದಕ್ಕೆ ಈ ದಂಪತಿಗೆ ಇದೆಂಥಾ ಶಿಕ್ಷೆ. ಜೋಡಿಯನ್ನು ಹಾಡಹಗಲೇ ಎಲ್ಲರೆದುರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೃತರನ್ನು ಬಾನೋ ಬೀಬಿ ಮತ್ತು ಅಹ್ಸಾನ್ ಉಲ್ಲಾ ಎಂದು ಗುರುತಿಸಲಾಗಿದೆ.
ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದಲ್ಲಿರುವ ಬುಡಕಟ್ಟು ಜನಾಂಗದವರ ಆದೇಶದ ಮೇರೆಗೆ ಅವರನ್ನು ಹತ್ಯೆ ಮಾಡಲಾಗಿದೆ. ಹಂತಕರು ಈ ಕೃತ್ಯವನ್ನು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈದ್ ಅಲ್-ಅಧಾ ರಜೆಯ ಸಮಯದಲ್ಲಿ ಮರುಭೂಮಿ ಪ್ರದೇಶದಲ್ಲಿ ಇದು ನಡೆದಿದೆ. ಈ ಜೋಡಿಯನ್ನು ಕೊಲ್ಲುವ ಮೊದಲು ಶಸ್ತ್ರಸಜ್ಜಿತ ಗುಂಪು ಹಲವಾರು ವಾಹನಗಳಲ್ಲಿ ಅವರನ್ನು ಸುತ್ತುವರೆದಿತ್ತು. ಆದರೆ ಮೃತರ ಕುಟುಂಬದ ಸದಸ್ಯರು ಕೂಡ ಅಲ್ಲಿದ್ದರೇ ಎಂಬುದು ತಿಳಿದುಬಂದಿಲ್ಲ.
ಕರಾಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್, ಅಧಿಕಾರಿಗಳು ಹತ್ಯೆ ನಡೆದ ಸ್ಥಳವನ್ನು ಗುರುತಿಸಿದ್ದಾರೆ ಮತ್ತು ಬುಡಕಟ್ಟು ಹಿರಿಯರ ಬೆಂಬಲದೊಂದಿಗೆ ದಂಪತಿಯನ್ನು ಅವರ ಕುಟುಂಬಗಳು ಕೊಂದಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಮರ್ಯಾದಾ ಹತ್ಯೆ, ಬೇರೆ ಜಾತಿಯವನ ಮದುವೆಯಾಗಿದ್ದಕ್ಕೆ ತಂದೆ, ಅಣ್ಣನಿಂದ ಯುವತಿಯ ಕೊಲೆ
ಈ ಘಟನೆ ಬಲೂಚಿಸ್ತಾನ್‌ನಲ್ಲಿ ನಡೆದಿದೆ. ಎರಡೂ ಕುಟುಂಬಗಳು ಅಪರಾಧದ ಬಗ್ಗೆ ವರದಿ ಮಾಡಿಲ್ಲ. ನಾವು ರಾಜ್ಯದ ಪರವಾಗಿ ಪ್ರಕರಣವನ್ನು ದಾಖಲಿಸುತ್ತಿದ್ದೇವೆ ಎಂದು ರಿಂಡ್ ಹೇಳಿದರು. ಈ ವಿಡಿಯೋ ಶಂಕಿತರನ್ನು ಗುರುತಿಸಲು ಸಹಾಯ ಮಾಡಿದೆ. ನಾವು ಇಲ್ಲಿಯವರೆಗೆ 11 ವ್ಯಕ್ತಿಗಳನ್ನು ಬಂಧಿಸಿದ್ದೇವೆ ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಮೃತರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ಯಾವುದೇ ಸಾಮಾಜಿಕ ಹಾಗೂ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ಹೇಳಿದರು.
Pakistan: A horrifying video from KPK shows the honor killing by an Islamic mob for marrying by choice out of tribe , the killing was carried out by active support from Pakistan authorities
Please REPOST pic.twitter.com/3rVqb6aXi6
— Abdul Kitabi عبد (@KitabiAbdul) July 20, 2025
ಈ ದಂಪತಿಗಳ ಸಾವಿಗೆ ಪಾಕಿಸ್ತಾನದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಗಮನಾರ್ಹ ಪ್ರಭಾವ ಹೊಂದಿರುವ ಅನೌಪಚಾರಿಕ ಬುಡಕಟ್ಟು ನ್ಯಾಯಾಲಯವಾದ ಜಿರ್ಗಾ ಆದೇಶಿಸಿದೆ ಎಂದು ಆರೋಪಿಸಲಾಗಿದೆ. ದೇಶದ ಕಾನೂನು ವ್ಯವಸ್ಥೆಯನ್ನು ಬೈಪಾಸ್ ಮಾಡಿ ತಮ್ಮದೇ ಆದ ಕಠಿಣ ಮತ್ತು ಕಾನೂನುಬಾಹಿರ ತೀರ್ಪುಗಳನ್ನು ವಿಧಿಸುತ್ತವೆ, ವಿಶೇಷವಾಗಿ ಮದುವೆ, ಸಂಬಂಧಗಳು ಅಥವಾ ಕೌಟುಂಬಿಕ ವಿವಾದಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಇದು ತನ್ನದೇ ತೀರ್ಪು ನೀಡುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




