Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರ್ಯಾದಾ ಹತ್ಯೆ, ಬೇರೆ ಜಾತಿಯವನ ಮದುವೆಯಾಗಿದ್ದಕ್ಕೆ ತಂದೆ, ಅಣ್ಣನಿಂದ ಯುವತಿಯ ಕೊಲೆ

ಯುವತಿ ಬೇರೆ ಜಾತಿಯವನನ್ನು ಪ್ರೀತಿಸಿ ಮನೆಯವರ ವಿರುದ್ಧವಾಗಿ ಮದುವೆಯಾಗಿದ್ದಳು. ಇದರಿಂದ ಕೋಪಗೊಂಡ ತಂದೆ ಮತ್ತು ಸಹೋದರ, ಗ್ರೇಟರ್ ನೋಯ್ಡಾದ ಚಿಪ್ಯಾನಾ ಗ್ರಾಮದ ಯುವತಿ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮಾಹಿತಿ ಪಡೆದ ಬಿಸ್ರಖ್ ಕೊತ್ವಾಲಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದರು ಮತ್ತು ಮೂರು ಗಂಟೆಗಳಲ್ಲಿ ಪ್ರಕರಣ ಭೇದಿಸಿದ್ದಾರೆ. ಕೊಲೆ ಆರೋಪಿ ತಂದೆ ಮತ್ತು ಸಹೋದರನನ್ನು ಬಂಧಿಸಿದರು. ಆರೋಪಿಗಳನ್ನು ಬಾಲಕಿಯ ತಂದೆ ಭಾನು ರಾಥೋಡ್ ಮತ್ತು ಸಹೋದರ ಹಿಮಾಂಶು ಎಂದು ಗುರುತಿಸಲಾಗಿದ್ದು, ಅವರು ಚಿಪ್ಯಾನಾ ನಿವಾಸಿಗಳು.

ಮರ್ಯಾದಾ ಹತ್ಯೆ, ಬೇರೆ ಜಾತಿಯವನ ಮದುವೆಯಾಗಿದ್ದಕ್ಕೆ ತಂದೆ, ಅಣ್ಣನಿಂದ ಯುವತಿಯ ಕೊಲೆ
ಆರೋಪಿಗಳು
Follow us
ನಯನಾ ರಾಜೀವ್
|

Updated on: Mar 14, 2025 | 7:58 AM

ನೋಯ್ಡಾ, ಮಾರ್ಚ್​ 14: ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮಗಳ ಬೇರೆ ಜಾತಿಯ ಹುಡುಗನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ಅರಗಿಸಿಕೊಳ್ಳಲಾಗದೆ ಮಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಅದಕ್ಕೆ ತಮ್ಮ ಮಗನ ಸಹಾಯವನ್ನೂ ಪಡೆದಿದ್ದರು.

ಯುವತಿಯನ್ನು ಕೊಂದ ನಂತರ, ಇಬ್ಬರೂ ಆಕೆಯ ದೇಹವನ್ನು ಸುಡುವ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ ನೇಹಾ ರಾಥೋಡ್ ಬೇರೆ ಜಾತಿಯ ವ್ಯಕ್ತಿಯೊಂದಿಗೆ ಹೊಂದಿದ್ದ ಪ್ರೇಮ ಸಂಬಂಧದಿಂದ ತಂದೆ-ಮಗ ಇಬ್ಬರೂ ಕೋಪಗೊಂಡಿದ್ದರು.

23 ವರ್ಷದ  ಯುವತಿ ಉತ್ತರ ಪ್ರದೇಶದ ಹಾಪುರ್ ನಿವಾಸಿ ಸೂರಜ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಇದಕ್ಕೆ ಆಕೆಯ ಕುಟುಂಬದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ನೋಯ್ಡಾ ಸೆಂಟ್ರಲ್‌ನ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾರೆ.

ಮತ್ತಷ್ಟು ಓದಿ: Viral: ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಹೆಂಡತಿ; ಪೊಲೀಸ್‌ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ಆಕೆಯ ಕುಟುಂಬವು ಸೂರಜ್‌ನನ್ನು ಭೇಟಿಯಾಗುವುದನ್ನು ಹಲವು ಬಾರಿ ತಡೆದಿತ್ತು, ಆದರೆ ಅವಳು ಈ ಎಲ್ಲವನ್ನೂ ಧಿಕ್ಕರಿಸಿ ಮಾರ್ಚ್ 11 ರಂದು ಗಾಜಿಯಾಬಾದ್‌ನ ಆರ್ಯ ಸಮಾಜ ಮಂದಿರದಲ್ಲಿ ಸೂರಜ್‌ನನ್ನು ವಿವಾಹವಾಗಿದ್ದಳು. ಅವರ ವಿವಾಹದ ಬಗ್ಗೆ ಮಾಹಿತಿ ಪಡೆದ ನಂತರ, ಆರೋಪಿ ಭಾನು ರಾಥೋಡ್ ಮತ್ತು ಅವರ ಮಗ ಹಿಮಾಂಶು ರಾಥೋಡ್ ಮಾರ್ಚ್ 12 ರ ಬೆಳಗ್ಗೆ ನೇಹಾಳನ್ನು ಕೊಲೆ ಮಾಡಿದ್ದರು.

ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಪೊಲೀಸ್ ಕ್ಷೇತ್ರ ಘಟಕವು ಅಪರಾಧದ ಸ್ಥಳವನ್ನು ಪರಿಶೀಲಿಸಿತು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡಲಾಗಿದ್ದು, ಇತರ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಹಾಪುರದಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಆ ಯುವಕ ಪ್ರಸ್ತುತ ಹಾಪುರದಲ್ಲಿ ಪಿಕಪ್ ಟ್ರಕ್ ಓಡಿಸುತ್ತಾನೆ. ಆ ಯುವಕರು ಜಾಟ್ ಸಮುದಾಯಕ್ಕೆ ಸೇರಿದವನಾಗಿದ್ದು. ಆದರೆ ಹುಡುಗಿ ತೇಲಿ ಸಮುದಾಯಕ್ಕೆ ಸೇರಿದವಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ