AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವರ್ಸ್​ ಜೊತೆ ಗೋವಾಕ್ಕೆ ಹೋಗಲು ಹಣ ಇಲ್ಲದೆ ಕಳ್ಳತನದ ಹಾದಿ ಹಿಡಿದ ವಿದ್ಯಾರ್ಥಿಗಳು

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬೆಂಗಳೂರಿನ ಕೊತ್ತನೂರು ಪೊಲೀಸರು ಮೂವರು ಬಿಕಾಂ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳ ಬಳಿ ಇದ್ದ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ ಮತ್ತು 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕಳ್ಳತನ ಹಾದಿ ಹಿಡಿದ್ದು ಏಕೆ? ಇಲ್ಲಿದೆ ವಿವರ

ಲವರ್ಸ್​ ಜೊತೆ ಗೋವಾಕ್ಕೆ ಹೋಗಲು ಹಣ ಇಲ್ಲದೆ ಕಳ್ಳತನದ ಹಾದಿ ಹಿಡಿದ ವಿದ್ಯಾರ್ಥಿಗಳು
ಕಳ್ಳತನ ಹಾದಿ ಹಿಡಿದ ವಿದ್ಯಾರ್ಥಿಗಳು
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ವಿವೇಕ ಬಿರಾದಾರ|

Updated on:Jul 29, 2025 | 5:16 PM

Share

ಬೆಂಗಳೂರು, ಜುಲೈ 29: ಲವರ್ಸ್​ ಜೊತೆ ಗೋವಾಕ್ಕೆ (Goa) ಹೋಗಲು ಹಣ ಇಲ್ಲದೆ ಕಳ್ಳತನ ಹಾದಿ ಹಿಡಿದಿದ್ದ ಮೂವರು ವಿದ್ಯಾರ್ಥಿಗಳನ್ನು (Students) ಬೆಂಗಳೂರಿನ (Bengaluru) ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಿಕಾಂ ವಿದ್ಯಾರ್ಥಿಗಳಾದ ಯಶವಂತ್, ರಮೇಶ್, ತನುಷ್ ಬಂಧಿತರು. ಆರೋಪಿಗಳು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾರೆ. ಆರೋಪಿಗಳು ತಮ್ಮ ಲವರ್ಸ್​ ಜೊತೆ ಗೋವಾಕ್ಕೆ ಹೋಗಿ ಮೋಜು ಮಸ್ತಿ ಮಾಡಬೇಕೆಂದು ಅಂದುಕೊಂಡಿದ್ದರು. ಆದರೆ, ಗೋವಾಕ್ಕೆ ಹೋಗಲು ಆರೋಪಿಗಳ ಬಳಿ ಹಣ ಇರಲಿಲ್ಲ.

ಹೀಗಾಗಿ, ಆರೋಪಿಗಳು ಪರಿಚಯಸ್ಥ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ಹಣದಲ್ಲಿ ಮೂವರೂ ತಮ್ಮ ಲವರ್ಸ್​ ಜೊತೆ ಗೋವಾಗೆ ಹೋಗಿ ಮೋಜು ಮಸ್ತಿ ಮಾಡಿದ್ದಾರೆ. ಲವರ್ಸ್​ ಜೊತೆ ಮೋಜು ಮಸ್ತಿ ಮಾಡಿ, ಆರೋಪಿಗಳು ಬೆಂಗಳೂರಿಗೆ ಬರುತ್ತಿದ್ದಂತೆ ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ, 10 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದಾರೆ.

ಪಿಕ್ ​ಪಾಕೆಟ್​ ಮಾಡ್ತಿದ್ದ ಮಹಿಳೆಯರ ಬಂಧನ

ಬುರ್ಖಾ ಧರಿಸಿ ಬಸ್​ನಲ್ಲಿ ಪಿಕ್​ ಪಾಕೆಟ್​ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಪದ್ಮ, ಅನು ಮತ್ತು ಪ್ರಾರ್ಥನಾ ಬಂಧಿತ ಆರೋಪಿಗಳು. ಬಂಧಿತ ನಾಲ್ವರು ಆರೋಪಿಗಳ ಬಳಿ ಇದ್ದ 190 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಹತ್ತುವ ಮಹಿಳೆಯರನ್ನೇ ಟಾರ್ಗೇಟ್​ ಮಾಡುತ್ತಿದ್ದರು. ಮಹಿಳೆಯರು ಬಸ್​ ಹತ್ತುವಾಗ ಆರೋಪಿಗಳು ಅವರ ಬ್ಯಾಗ್​ ಜಿಪ್​​ ತೆರೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ
Image
ಯುವತಿಯರನ್ನು ಹಿಂಬಾಲಿಸಿಕೊಂಡು ಬಂದ ಪುಂಡರ ಗುಂಪು
Image
ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ಟೆಕ್ಕಿಗೆ ಪಂಗನಾಮ
Image
ಬೆಂಗಳೂರು: ಮಾವ, ಅಳಿಯ ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್‌ಗೆ ಇರಿತ
Image
ಸ್ನೇಹಿತೆಯ ಮಾತು ನಂಬಿ ಹೋಟೆಲ್​ನಿಂದ ಹೊರಬಂದ ಯುವಕ ಕಿಡ್ನ್ಯಾಪ್​

ಇದನ್ನೂ ಓದಿ: ಕಲಾಸಿಪಾಳ್ಯದಲ್ಲಿ ಸ್ಫೋಟಕ ಪತ್ತೆ: 3 ಬಂಧನ, ವಿಚಾರಣೆ ವೇಳೆ ಅಸಲಿ ಸತ್ಯ ಬಾಯಿಬಿಟ್ಟ ಆರೋಪಿಗಳು

ಇಬ್ಬರು ನಟೋರಿಯಸ್ ಕಳ್ಳರ ಬಂಧನ

ನೆಲಮಂಗಲ: ನೆಲಮಂಗಲ ಟೌನ್ ಪೊಲೀಸರು ಇಬ್ಬರು ನಟೋರಿಯಸ್ ಕಳ್ಳರನ್ನು ಬಂಧಸಿದ್ದಾರೆ. ಜಯಂತ್ ಅಲಿಯಾಸ್​ ಬ್ಯಾಟರಿ ಜಯಂತ್, ಯತೀಶ್ ಬಂಧಿತರು. ಆರೋಪಿಗಳು ನೆಲಮಂಗಲದಲ್ಲಿನ ಓರ್ವ ಇಂಜಿನಿಯರ್​ ​​ಮನೆಯಲ್ಲಿನ 56 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದರು. ಪೊಲೀಸರು ಬಂಧಿತರಿಂದ 343 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು 25-26 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Tue, 29 July 25