AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾಸಿಪಾಳ್ಯದಲ್ಲಿ ಸ್ಫೋಟಕ ಪತ್ತೆ: 3 ಬಂಧನ, ವಿಚಾರಣೆ ವೇಳೆ ಅಸಲಿ ಸತ್ಯ ಬಾಯಿಬಿಟ್ಟ ಆರೋಪಿಗಳು

ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜುಲೈ 23 ರಂದು ಪತ್ತೆಯಾದ ಸ್ಫೋಟಕಗಳ ಪ್ರಕರಣದಲ್ಲಿ ಪೊಲೀಸರು ಕೋಲಾರ ಮೂಲದ ಮೂವರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ 22 ಜಿಲೆಟಿನ್ ಕಡ್ಡಿ ಮತ್ತು 30 ಡಿಟೋನೇಟರ್ಸ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಆರೋಪಿಗಳ ಹುಡುಕಾಟ ಕಾರ್ಯಚರಣೆ ಮುಂದುವರೆದಿದೆ.

ಕಲಾಸಿಪಾಳ್ಯದಲ್ಲಿ ಸ್ಫೋಟಕ ಪತ್ತೆ: 3 ಬಂಧನ, ವಿಚಾರಣೆ ವೇಳೆ ಅಸಲಿ ಸತ್ಯ ಬಾಯಿಬಿಟ್ಟ ಆರೋಪಿಗಳು
ಸ್ಫೋಟಕ ಪತ್ತೆ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 29, 2025 | 12:45 PM

Share

ಬೆಂಗಳೂರು, ಜುಲೈ 29: ಇತ್ತೀಚೆಗೆ ಕಲಾಸಿಪಾಳ್ಯ (Kalasipalya) ಬಸ್ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಬೆಂಗಳೂರಿನ ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ (arrest). ಕೋಲಾರ ಮೂಲದ ಗಣೇಶ್​, ಮುನಿರಾಜ್​ ಮತ್ತು ಶಿವಕುಮಾರ್​​ ಬಂಧಿತರು. ಆರೋಪಿಗಳ ವಿಚಾರಣೆ ವೇಳೆ ಕೆಲವು ಮಾಹಿತಿ ಬಹಿರಂಗವಾಗಿದೆ.

ಐದು ತಂಡ ರಚಿಸಿ ತನಿಖೆ ನಡೆಸಿದ್ದ ಕಲಾಸಿಪಾಳ್ಯ ಠಾಣೆ ಪೊಲೀಸರು ಸದ್ಯ ಮೂವರನ್ನು ಬಂಧಿಸುವ ಮೂಲಕ ಬಂಧಿತರಿಂದ 22 ಜಿಲೆಟಿನ್​ ಜೆಲ್​, 30 ಡಿಟೋನೇಟರ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ಆರೋಪಿಗಳ ಪತ್ತೆಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.

ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಬಹಿರಂಗ

ಇನ್ನು ಬಂಧಿತ ಆರೋಪಿಗಳ ವಿಚಾರಣೆ ವೇಳೆ ಕೆಲವು ಮಾಹಿತಿ ಬಹಿರಂಗಗೊಂಡಿವೆ. ಆರೋಪಿಗಳು ಸ್ಫೋಟಕಗಳನ್ನು ಬ್ಯಾಗ್​ನಲ್ಲಿ ತೆಗೆದುಕೊಂಡು ಬಂದಿದ್ದಾರೆ. ನಂತರ ಬಸ್ ನಿಲ್ದಾಣದಲ್ಲಿರು ಶೌಚಾಲಯಕ್ಕೆ  ತೆರಳಿದ್ದು, ಬ್ಯಾಗ್​ಗಳನ್ನು ಹೊರಗಡೆ ಇಟ್ಟು ಹೋಗಿದ್ದಾರೆ. ಈ ವೇಳೆ ಹೊರ ಬಂದಾಗ ಅಲ್ಲಿ ಹೋಮ್ ಗಾರ್ಡ್ಸ್​ ಇರುವುದನ್ನು​ ನೋಡಿ ಬೆದರಿ ಅಲ್ಲಿಯೇ ಬ್ಯಾಗ್​ ಬಿಟ್ಟು  ಹೋಗಿದ್ದಾರೆ ಎನ್ನುವ ಮಾಹಿತಿ ಪತ್ತೆಯಾಗಿದೆ.

ಇದನ್ನೂ ಓದಿ
Image
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ
Image
ಕಲಾಸಿಪಾಳ್ಯ ಬಸ್​ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ: ತನಿಖೆಗೆ ಆರು ತಂಡಗಳ ರಚನೆ
Image
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
Image
ಬೆಂಗಳೂರಿನ ಕಲಾಸಿಪಾಳ್ಯ ಬಸ್​ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ

ಇದನ್ನೂ ಓದಿ: ಬೆಂಗಳೂರಿನ ಕಲಾಸಿಪಾಳ್ಯ ಬಸ್​ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ, ಸ್ಥಳಕ್ಕೆ ಶ್ವಾನದಳ, ಬಾಂಬ್​ ನಿಷ್ಕ್ರಿಯ ದಳ ದೌಡು

ಕೋಲಾರದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದಾರೆ. ಆರೋಪಿಗಳು ಸ್ಫೋಟಕಗಳನ್ನು ಕೊಳ್ಳೆಗಾಲದಲ್ಲಿ ಬೋರ್ವೆಲ್ ಮತ್ತು ಗುಂಡಿಯಲ್ಲಿ ಬಂಡೆ ಒಡೆಯಲು ಬಳಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಜುಲೈ 23ರಂದು ಕೆ.ಆರ್.ಮಾರ್ಕೆಟ್​ ಬಳಿಯ ಕಲಾಸಿಪಾಳ್ಯದಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಆದರೆ ಖಾಸಗಿ ಬಸ್​​​ಸ್ಟ್ಯಾಂಡ್​ನ ಶೌಚಾಲಯದ ಎದುರಿದ್ದ ಚೀಲ ಕಂಡು ಎಲ್ಲ ಬೆಚ್ಚಿ ಬಿದಿದ್ದರು. ಏಕೆಂದರೆ ಅಲ್ಲಿ ಸ್ಫೋಟಕ ವಸ್ತುಗಳು ಪತ್ತೆ ಆಗಿದ್ದವು.

ಇದನ್ನೂ ಓದಿ: ಬೆಂಗಳೂರು ಕಲಾಸಿಪಾಳ್ಯ ಬಸ್​ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ: ತನಿಖೆಗೆ ಆರು ತಂಡಗಳ ರಚನೆ

ಶನಿವಾರ ಬಸ್​ ನಿಲ್ದಾಣದ ನಾಮಕರಣ ನಡೆಯಲಿದ್ದು ಸಿಎಂ, ಡಿಸಿಎಂ ಸೇರಿ ಹಲವು ಗಣ್ಯರು ಆಗಮಿಸಲಿದ್ದರು. ಅದಕ್ಕೂ ಮುನ್ನ ಇಲ್ಲಿ ಸ್ಪೋಟಕ ಪತ್ತೆ ಆಗಿದ್ದು, ಆತಂಕ ಹುಟ್ಟಿಸಿತ್ತು. ಕಲ್ಲುಕ್ವಾರಿಯಲ್ಲಿ ಬಳಸಲು ಕೊಂಡೊಯ್ಯುತ್ತಿದ್ದ ಸ್ಫೋಟಕಗಳು ಇರಬಹುದೆಂದು ಪೊಲೀಸರು ಈ ಮುಂಚೆ ಶಂಕೆ ವ್ಯಕ್ತಪಡಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?