AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾಸಿಪಾಳ್ಯದ ಬಸ್​​ನಿಲ್ದಾಣದ ಶೌಚಾಲಯದಲ್ಲಿ ಸ್ಫೋಟಕ ಸಾಮಗ್ರಿ ತಂದಿಟ್ಟಿದ್ದು ಹೆಣ್ಣೋ ಗಂಡೋ ಅಂತ ಗೊತ್ತಾಗಿಲ್ಲ!

ಕಲಾಸಿಪಾಳ್ಯದ ಬಸ್​​ನಿಲ್ದಾಣದ ಶೌಚಾಲಯದಲ್ಲಿ ಸ್ಫೋಟಕ ಸಾಮಗ್ರಿ ತಂದಿಟ್ಟಿದ್ದು ಹೆಣ್ಣೋ ಗಂಡೋ ಅಂತ ಗೊತ್ತಾಗಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 23, 2025 | 7:02 PM

Share

ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಸಿಬ್ಬಂದಿ ಅಸ್ಪಷ್ಟ ಮಾಹಿತಿ ನೀಡುತ್ತಾರೆ. ಚೀಲ ಪತ್ತೆಯಾದಾಗ ಅವರ ಸಹೋದರ ಕಾರ್ಯ ನಿರ್ವಹಿಸುತ್ತಿದ್ದರಂತೆ. ಶೌಚಾಲಯ ಮುಂಭಾಗ ಇಲ್ಲವೇ ಕೌಂಟರ್ ಇರುವ ಪ್ರದೇಶದಲ್ಲಿ ಸಿಸಿಟಿವಿ ಕೆಮೆರಾಗಳಿಲ್ಲ, ಪ್ರಾಯಶಃ ಸ್ಫೋಟಕಗಳ ಬ್ಯಾಗ್ ಹಿಡಿದು ಬಂದಿದ್ದ ವ್ಯಕ್ತಿಗೆ ಕೆಮೆರಾಗಳಿಲ್ಲದಿರೋದು ಗೊತ್ತಿತ್ತು. ಆದರೆ ಬಸ್​ ನಿಲ್ದಾಣದಲ್ಲಿರುವ ಕೆಮೆರಾಗಳಿಂದ ಬ್ಯಾಗ್ ಮೂಲಕ ವ್ಯಕ್ತಿಯನ್ನು ಪತ್ತೆಹಚ್ಚಬಹುದಾಗಿದೆ.

ಬೆಂಗಳೂರು, ಜುಲೈ 23: ನಗರದ ಕಲಾಸಿಪಾಳ್ಯ (Kalasi Palya) ಬಿಎಂಟಿಸಿ ಮತ್ತು ಖಾಸಗಿ ಬಸ್​ ನಿಲ್ದಾಣಗಳ ನಡುವೆ ಇರುವ ಶೌಚಾಲಯದಲ್ಲಿ ಇವತ್ತು ಬೆಳಗ್ಗೆ ಸಮಾರು 10 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ಸಾಮಗ್ರಿಗಳಿದ್ದ ಚೀಲವೊಂದನ್ನು ಇಲ್ಲಿರುವ ಕೌಂಟರ್ ಮೇಲೆ ಇಟ್ಟು ನಾಪತ್ತೆಯಾಗಿದ್ದಾನೆ. ಆ ಸಮಯದಲ್ಲಿ ಶೌಚಾಲಯದಲ್ಲಿ ಬಹಳ ರಷ್ ಇರುವ ಕಾರಣ ಬ್ಯಾಗ್ ಹೊತ್ತು ಬಂದಿದ್ದ ವ್ಯಕ್ತಿ ಪುರುಷನೋ, ಮಹಿಳೆಯೋ ಅನ್ನೋದು ಕೂಡ ಸಿಬ್ಬಂದಿಗೆ ಗೊತ್ತಾಗಿಲ್ಲ. ಚೀಲ ಬಹಳ ಹೊತ್ತಿನವರೆಗೆ ಕೌಂಟರ್ ಮೇಲೆಯೇ ಇದೆ. ಕೊನೆಗೆ ಸಿಬ್ಬಂದಿ ಅದರಲ್ಲಿ ಏನಿದೆ ಅಂತ ತೆರೆದು ನೋಡಿದಾಗ ಸ್ಫೋಟಕ ಸಾಮಗ್ರಿ ಇರೋದು ಗೊತ್ತಾಗಿದೆ. ಕೂಡಲೇ ಅವರು ಬಿಎಂಟಿಸಿ ಸೆಕ್ಯುರಿಟಿಗೆ ವಿಷಯ ತಿಳಿಸಿದ್ದಾರೆ. ಅವರರು ಪೊಲೀಸರಿಗೆ ಫೋನ್ ಮಾಡಿದಾಗ ಅವರು ಡಾಗ್ ಸ್ಕ್ವ್ಯಾಡ್​ನೊಂದಿಗೆ ಪರಿಶಿಲನೆ ನಡೆಸಿದ್ದಾರೆ.

ಇದನ್ನೂ ಓದಿ:   ಬೆಂಗಳೂರಿನ ಕಲಾಸಿಪಾಳ್ಯ ಬಸ್​ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ, ಸ್ಥಳಕ್ಕೆ ಶ್ವಾನದಳ, ಬಾಂಬ್​ ನಿಷ್ಕ್ರಿಯ ದಳ ದೌಡು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ