ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್ಗೆ ಬಾಸ್ ಅಂತಾರೆ: ಪುಷ್ಪ
ಆಗಸ್ಟ್ 1ರಂದು ‘ಕೊತ್ತಲವಾಡಿ’ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುಷ್ಪ ಅವರು ಮಾತನಾಡಿದರು. ಅವರ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆಗಸ್ಟ್ 1ರಂದು ‘ಕೊತ್ತಲವಾಡಿ’ (Kothalavadi) ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುಷ್ಪ ಅವರು ಮಾತನಾಡಿದರು. ಅವರ ವಿಡಿಯೋಗಳು ವೈರಲ್ ಆಗುತ್ತಿವೆ. ಆ ಕುರಿತು ಅವರು ಪ್ರತಿಕ್ರಿಯೆ ನೀಡಿದರು. ‘ನನಗೆ ನಟನೆ ಮಾಡೋಕೆ ಬರಲ್ಲ. ನಟನೆ ಎಷ್ಟು ಕಷ್ಟ ಎಂಬುದು ಯಶ್ (Yash) ಬಂದ್ಮೇಲೆ ನನಗೆ ಗೊತ್ತಾಗಿದ್ದು. ಯಶ್ ಸಾಕಷ್ಟು ಹೆಸರು ಮಾಡಿದ್ದಾನೆ. ಹೂವಿನ ಜೊತೆ ನಾರು ಹೋದಂತೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಕೆಲಸದ ಹುಡುಗರು ಮೊದಲು ನನಗೆ ಬಾಸ್ ಎನ್ನುತ್ತಿದ್ದರು. ಈಗ ಯಶ್ಗೆ ಬಾಸ್ ಅಂತಾರೆ’ ಎಂದಿದ್ದಾರೆ ಪುಷ್ಪ ಅರುಣ್ ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos