ಮೈಸೂರಲ್ಲಿ ಡ್ರಗ್ಸ್ ತಯಾರಿಕಾ ಘಟಕ; ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ: ಪರಮೇಶ್ವರ್
ಮೊನ್ನೆ ಕಲಾಸಿಪಾಳ್ಯ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸಿಕ್ಕ ಸ್ಫೋಟಕ ಸಾಮಗ್ರಿಯ ಬಗ್ಗೆಯೂ ಪರಮೇಶ್ವರ್ ಸಮಗ್ರ ಮಾಹಿತಿ ನೀಡಲ್ಲ. ತಮಿಳುನಾಡು ವ್ಯಕ್ತಿಯೊಬ್ಬ ಕ್ವಾರಿಗೋಸ್ಕರ ಜಿಲೆಟಿನ್ ಸ್ಟಿಕ್ ಗಳನ್ನು ತೆಗೆದುಕೊಂಡು ಹೋಗುತ್ತಿದ್ದನಂತೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಸಂಪೂರ್ಣ ಮಾಹಿತಿ ತನ್ನ ಬಳಿ ಇಲ್ಲ, ವರದಿ ತರಿಸಿಕೊಂಡು ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದು ಅವರು ಹೇಳುತ್ತಾರೆ.
ಬೆಂಗಳೂರು, ಜುಲೈ 28: ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ (police system) ಹೇಗೆ ಕೆಲಸ ಮಾಡುತ್ತಿದೆ ಅನ್ನೋದಿಕ್ಕೆ ಇದು ಜ್ವಲಂತ ಸಾಕ್ಷಿ. ಮೈಸೂರು ಭಾರೀ ಪ್ರಮಾಣದಲ್ಲಿ ಡ್ರಗ್ಸ್ ತಯಾರಿಕೆಯ ಅಡ್ಡವಾಗಿದ್ದರೂ ರಾಜ್ಯದ ಪೊಲೀಸರಿಗೆ ಗೊತ್ತೇ ಆಗಲ್ಲ, ಅದನ್ನು ಮುಂಬೈ ಪೊಲೀಸರು ಬಂದು ಪತ್ತೆ ಮಾಡುತ್ತಾರೆ! ಇಲ್ಲಿ ತಯಾರಾಗುತ್ತಿದ್ದ ಎಂಡಿಎಂಎ ವಿದೇಶಗಳಿಗೂ ಕಳಿಸಲಾಗುತ್ತಿತ್ತಂತೆ. ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪ್ರಕರಣದ ಬಗ್ಗೆ ಮಾಧ್ಯಮದವರು ಕೇಳಿದರೆ, ಇದು ಆತಂಕಕಾರಿ ಮತ್ತು ಕಳವಳಕಾರಿ ಅಂಶ, ಡ್ರಗ್ಸ್ ತಯಾರಿಕಾ ಘಟಕದ ವ್ಯಾಪ್ತಿಯ ಪೊಲೀಸರಿಗೆ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳುತ್ತಾರೆ. ಪೊಲೀಸರ ಕರ್ತವ್ಯಲೋಲುಪತೆ ಎದ್ದುಕಾಣುತ್ತಿದೆ, ಅವರ ವಿರುದ್ಧ ಕ್ರಮ ಜರುಗಿಸುವುದನ್ನು ಪರಮೇಶ್ವರ್ ಮಾತಾಡುವುದಿಲ್ಲ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಹತ್ವದ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

