Karnataka PUC Exam 2023: ದ್ವಿತೀಯ ಪಿಯುಸಿ ಪರೀಕ್ಷೆ; ರಾಜ್ಯದಲ್ಲಿ ಮೊದಲ ದಿನವೇ ಎರಡು ಕಾಪಿ ಕೇಸ್!
KSEAB ಅಧ್ಯಕ್ಷ ಗೋಪಾಲಕೃಷ್ಣ ಅವರು TNIE ಗೆ ಎರಡು ಕಡೆ ಪರೀಕೆಯಲ್ಲಿ ಕಾಪಿ ಹೊಡೆದ ಘಟನೆ ವರದಿಯಾಗಿವೆ, ಒಂದು ಯಾದಗಿರಿ ಮತ್ತು ಇನ್ನೊಂದು ಬೆಳಗಾವಿಯಲ್ಲಿ ಎಂದು ತಿಳಿಸಿದರು.
ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ವರ್ಷದ ಪದವಿ ಪೂರ್ವ (PUC Exam) ಬೋರ್ಡ್ ಪರೀಕ್ಷೆ ಗುರುವಾರ (ಮಾರ್ಚ್ 9) ಆರಂಭವಾಗಿದೆ. 5.33 ಲಕ್ಷ ವಿದ್ಯಾರ್ಥಿಗಳಲ್ಲಿ(Students), 5.1 ಲಕ್ಷ ವಿದ್ಯಾರ್ಥಿಗಳು ತಮ್ಮ ಪ್ರಥಮ ಭಾಷಾ ಪರೀಕ್ಷೆಯನ್ನು ಬರೆದಿದ್ದಾರೆ, ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 95.55 ರಷ್ಟು ಹಾಜರಾತಿಯನ್ನು ವರದಿ ಮಾಡಿದೆ. KSEAB ಅಧ್ಯಕ್ಷ ಗೋಪಾಲಕೃಷ್ಣ ಅವರು TNIE ಗೆ ಎರಡು ಕಡೆ ಪರೀಕೆಯಲ್ಲಿ ಕಾಪಿ ಹೊಡೆದ ಘಟನೆ ವರದಿಯಾಗಿವೆ, ಒಂದು ಯಾದಗಿರಿ ಮತ್ತು ಇನ್ನೊಂದು ಬೆಳಗಾವಿಯಲ್ಲಿ ಎಂದು ತಿಳಿಸಿದರು.
ಒಟ್ಟು 23,771 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.98.99ರಷ್ಟು ವಿದ್ಯಾರ್ಥಿಗಳ ಹಾಜರಾತಿ ದಾಖಲಾಗಿದ್ದರೆ, ಬೀದರ್‌ನಲ್ಲಿ ಅತಿ ಕಡಿಮೆ ಅಂದರೆ ಶೇ.90.49ರಷ್ಟು ವಿದ್ಯಾರ್ಥಿಗಳ ಹಾಜರಾತಿ ದಾಖಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಕ್ರಮವಾಗಿ ಶೇ.95.73 ಮತ್ತು ಶೇ.96.8ರಷ್ಟು ದಾಖಲಾಗಿವೆ.
ರಾಜ್ಯದಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಘಟನೆಗಳು ನಡೆದಿಲ್ಲ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಈ ಹಿಂದೆ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಬಿಡುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಮಂಡ್ಯಗೆ ಹೋಗಿ ನನ್ನ ಜನರ ಎದುರು ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ ಅಂಬರೀಶ್
ಆದರೆ, ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಕೆಲ ಬಾಲಕಿಯರು ಅಧಿಕಾರಿಗಳು ಮನವೊಲಿಸಿದ ಬಳಿಕ ಅದನ್ನು ತೆಗೆಯಲು ಒಪ್ಪಿದರು. ಮಲ್ಲೇಶ್ವರಂನಲ್ಲಿ ಅಂತಹ ಒಂದು ಪ್ರಕರಣ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ, ಅಲ್ಲಿನ ಪ್ರಾಂಶುಪಾಲರು ಹಿಜಾಬ್ ಅನ್ನು ತೆಗೆದುಹಾಕುವಂತೆ ಕೇಳಿಕೊಂಡ ನಂತರ ವಿದ್ಯಾರ್ಥಿಯೊಬ್ಬರು ಹಿಜಾಬ್ ಅನ್ನು ತೆಗೆಯಲು ಒಪ್ಪಿಕೊಂಡರು.
ಮಂಡಳಿಯು ರಾಜ್ಯಾದ್ಯಂತ 1,109 ಕೇಂದ್ರಗಳನ್ನು ಸ್ಥಾಪಿಸಿತ್ತು. ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸಲು ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಾಗೇಶ್ ತಿಳಿಸಿದರು. ಸಚಿವರು ತಮ್ಮ ತಿಪಟೂರು ಕ್ಷೇತ್ರದ ಕೆಲವು ಕೇಂದ್ರಗಳಿಗೆ ಭೇಟಿ ನೀಡಿದರು.
Published On - 12:11 pm, Fri, 10 March 23