ಬೆಂಗಳೂರು: ಕರ್ನಾಟಕ ರಾಜಕೀಯ ಕುರುಕ್ಷೇತ್ರದಲ್ಲಿ ಅತಿದೊಡ್ಡ ಕ್ರಾಂತಿಗೆ ಅಖಾಡ ಸಜ್ಜಾಗಿದೆ. ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಎನ್ನುವ ಲೆವೆಲ್‌ಗೆ ಸದ್ದು ಮಾಡಿರುವ ಮಂಡ್ಯ ಕುರುಕ್ಷೇತ್ರ, ಮತ್ತೊಂದು ರಣಯುದ್ಧಕ್ಕೆ ಸಜ್ಜಾಗಿದೆ. ಅದಕ್ಕೆ ಕಾರಣವೇ ಸುಮಲತಾ ಬಿಜೆಪಿ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹೌದು.. ಅಂದು ಮಂಡ್ಯ ರಾಜಕೀಯ ಇಂಡಿಯಾದಲ್ಲೇ ಕಂಪನ ಎಬ್ಬಿಸಿತ್ತು. ಅಂಬಿ ಅಗಲಿಕೆಯ ಅನುಕಂಪದಲ್ಲೇ ಸೆರೆಗೊಡ್ಡಿ ಮತ ಕೇಳಿದ್ದ ಸುಮಲತಾ ಅಂಬರೀಶ್ ಇದೀಗ ಮತ್ತೊಂದು ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ. ಪಕ್ಷೇತರ ಬಿಟ್ಟು ಬಿಜೆಪಿ ಪಕ್ಷಕ್ಕೆ ಹಾರುವುದಕ್ಕೆ ಸುಮಲತಾ ಅಂಬರೀಶ್ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಇಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವೇ ಎಂದು ಹೇಳಿದ್ದಾರೆ.