ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರಂತೆಯೇ ಕಾಣುವ ವ್ಯಕ್ತಿಯೊಬ್ಬರು ಇಂದು ನಗರದಲ್ಲಿರುವ ದಿವಂಗತ ನಟನ (late actor) ಮನೆ ಮುಂದೆ ಕಾಣಿಸಿದ್ದಾರೆ. ಈ ವ್ಯಕ್ತಿ ಅಂಬರೀಶ್ ಅವರಷ್ಟು ಎತ್ತರಕಾಯದವರಲ್ಲದಿದ್ದರೂ ಮುಖದಲ್ಲಿ ಹೋಲಿಕೆ ಇದೆ ಮತ್ತ್ತು ನಟನ ಹಾಗೆಯೇ ಡ್ರೆಸ್ ಮಾಡಿಕೊಂಡು, ಅದೇ ಥರ ಮೀಸೆ ಬೆಳಸಿದ್ದಾರೆ. ಇವರು ಅದ್ಹೇಗೆ ಇಷ್ಟು ದಿನ ಮಾಧ್ಯಮ ಮತ್ತು ಜನರ ಕಣ್ಣಿಗೆ ಬೀಳಲಿಲ್ಲವೋ? ಅಂಬರೀಶ್ ಅವರ ಪತ್ನಿ ಮತ್ತು ಸಂಸದೆ ಸುಮಲತಾ (Sumalatha) ಅವರು ಇನ್ನು ಸ್ವಲ್ಪ ಹೊತ್ತಿನಲ್ಲಿ ಮಹತ್ವದ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಲಿದ್ದಾರೆ. ಅಂಬರೀಶ್ ಅವರ ಭಾವಚಿತ್ರದ ಮುಂದೆ ನಿಂತು ಅವರು ತಮ್ಮ ಮುಂದಿನ ರಾಜಕೀಯ ನಡೆಯ ನಿರ್ಧಾರ ಪ್ರಕಟಿಸಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ