ಬೆಂಗಳೂರು: ವಸತಿ ಖಾತೆ ಸಚಿವ ವಿ ಸೋಮಣ್ಣ (V Somanna) ಇವತ್ತು ಕೂಡ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಯ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮೊದಲಿಗೆ ತಮ್ಮ ಇಲಾಖೆಯ ಯೋಜನೆಗಳ (projects) ಬಗ್ಗೆ ಮಾತಾಡಿದರು. ಕಾಂಗ್ರೆಸ್ ಸೇರುವಿರಾ ಎಂದು ಕೇಳಿದ ಪ್ರಶ್ನೆಗೆ ಅವರು, ನಾನ್ಯಾವತ್ತೂ ಅದರ ಬಗ್ಗೆ ಮಾತಾಡಿಲ್ಲ, ವದಂತಿಯನ್ನು ಯಾರು ಸೃಷ್ಟಿಸಿದ್ದಾರೋ ಅವರನ್ನೇ ಕೇಳಿ ಎಂದರು. ಮುಂದುವರಿದು ಮಾತಾಡಿದ ಅವರು ತಮ್ಮ ಸಮಸ್ಯೆಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿರುವುದಾಗಿ ಹೇಳಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರ ರ‍್ಯಾಲಿಯಲ್ಲಿ (Rally) ಯಾಕೆ ಭಾಗವಹಿಸಿಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ