ಬೆಂಗಳೂರು: ಲಿಂಗಧೀರನಹಳ್ಳಿಯಲ್ಲಿ ಬಿಎಂಟಿಸಿ (BMTC) ಸಂಸ್ಥೆಗೆ ಸೇರಿದ ನೈಟ್ ಹಾಲ್ಟ್ ಬಸ್ಸೊಂದಕ್ಕೆ ಕಳೆದ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರೊಳಗೆ ಮಲಗಿ ನಿದ್ರಿಸುತ್ತಿದ್ದ 46-ವರ್ಷ ವಯಸ್ಸಿನ ಕಂಡಕ್ಟರ್ ಮತ್ತುಸ್ವಾಮಿ (Conductor Muthuswamy) ಬಲಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ವಿವರಣೆ ನೀಡಿರುವ ಸಂಸ್ಥೆಯ ಆಂತರಿಕ ಭದ್ರತಾ ಆಧಿಕಾರಿ ರಾಧಿಕಾ (Radhika) ಅವರು ಡ್ರೈವರ್ ಮತ್ತು ಕಂಡಕ್ಟರ್ ರಾತ್ರಿ ಸಮಯ ನಿದ್ರಿಸಲು ರೆಸ್ಟ್ ಇದ್ದರೂ ಡ್ರೈವರ್ ಪ್ರಕಾಶ್ ಮಾತ್ರ ಅಲ್ಲಿ ಮಲಗಿದ್ದರೆ ನತದೃಷ್ಟ ಮುತ್ತುಸ್ವಾಮಿ ಬಸ್ಸಲ್ಲೇ ಮಲಗಿದ್ದರು ಎಂದು ಹೇಳಿದರು. ಬಸ್ 2017 ರ ಮೇಕ್ ಆಗಿದ್ದರಿಂದ ಉತ್ತಮ ಕಂಡೀಷನಲ್ಲಿತ್ತು ಎಂದು ಹೇಳಿದ ಅಧಿಕಾರಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ