ಕರ್ನಾಟಕದಲ್ಲಿ ಹೊತ್ತಿ ಉರಿಯುತ್ತಿರುವ ಕಾಡುಗಳು: ಫೆ.15ರಿಂದೀಚೆಗೆ 2 ಸಾವಿರಕ್ಕೂ ಅಧಿಕ ಕಾಡ್ಗಿಚ್ಚು ಪ್ರಕರಣಗಳು ದಾಖಲು

ಪ್ರತಿ ಬಾರಿಯೂ ಬೇಸಿಗೆ ಬಿರುಸುಗೊಳ್ಳುತ್ತಿದ್ದಂತೆಯೇ ಅರಣ್ಯ ಇಲಾಖೆಗೆ ಅಗ್ನಿ ಆತಂಕ ಶುರುವಾಗುತ್ತೆ. ಈ ಬಾರಿ ಸಹ ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿವೆ. ಇಲ್ಲಿಯವರೆಗೆ ಸಂಭವಿಸಿದ ಬೆಂಕಿ ಪ್ರಕರಣಗಳು ಎಷ್ಟು? ಕಳೆದ ವರ್ಷ ಎಷ್ಟು? ಇಲ್ಲಿದೆ ಅಂಕಿ-ಸಂಖ್ಯೆ.

ಕರ್ನಾಟಕದಲ್ಲಿ ಹೊತ್ತಿ ಉರಿಯುತ್ತಿರುವ ಕಾಡುಗಳು: ಫೆ.15ರಿಂದೀಚೆಗೆ 2 ಸಾವಿರಕ್ಕೂ ಅಧಿಕ ಕಾಡ್ಗಿಚ್ಚು ಪ್ರಕರಣಗಳು ದಾಖಲು
ಕಾಡ್ಗಿಚ್ಚು
Follow us
ರಮೇಶ್ ಬಿ. ಜವಳಗೇರಾ
| Updated By: Digi Tech Desk

Updated on:Mar 10, 2023 | 10:57 AM

ಬೆಂಗಳೂರು: ಕಾಡ್ಗಿಚ್ಚು ಪ್ರತಿ ಬೇಸಿಗೆಯಲ್ಲಿ(Summer) ಕಾಡನ್ನು(Forest) ಕಾಡುವ ಬಹುದೊಡ್ಡ ವಿಪತ್ತು. ಹೌದು..ಪ್ರತಿ ಬಾರಿಯೂ ಬೇಸಿಗೆ ಬಿರುಸುಗೊಳ್ಳುತ್ತಿದ್ದಂತೆಯೇ ಅರಣ್ಯ ಇಲಾಖೆಗೆ ಅಗ್ನಿ (Fire) ಆತಂಕ ಶುರುವಾಗುತ್ತೆ. ಅದರಂತೆ ಈ ಬಾರಿಯೂ ಸಹ ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಹಲವು ಜಿಲ್ಲೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯ ಕಟ್ಟೆಚ್ಚರ ನಡುವೆಯೂ ಪದೇ ಪದೇ ಕಾಡ್ಚಿಚ್ಚು ಪ್ರಕರಣಗಳು ಸಂಭವಿಸುತ್ತಿದ್ದು, ರಾಜ್ಯದ ಅರಣ್ಯ ದಹನವಾಗುತ್ತಿದೆ. 2023 ಫೆಬ್ರುವರಿ 15ರಿಂದೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,042ಕ್ಕೂ ಹೆಚ್ಚು ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು(fire incidents )ಸಂಭವಿಸಿವೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್ ವರದಿ ಮಾಡಿದೆ. ಹಾಗಾದ್ರೆ, ಕರ್ನಾಟಕದ ಯಾವ ಅರಣ್ಯ ವಯಲಗಳಲ್ಲಿ ಎಷ್ಟು ಕಾಡ್ಗಿಚ್ಚು ಪ್ರಕರಣಗಳು ಸಂಭವಿಸಿವೆ? ಎನ್ನುವ ಅಂಕಿ-ಅಂಶ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಚಾರ್ಮಾಡಿಘಾಟ್​ನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಅಪಾರ ಪ್ರಮಾಣದ ವನ್ಯಸಂಪತ್ತು ಬೆಂಕಿಗಾಹುತಿ

ಕರ್ನಾಟಕ ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಫೆಬ್ರುವರಿ 15 ರಿಂದ ಅರಣ್ಯದಲ್ಲಿ 2,042 ಕ್ಕೂ ಹೆಚ್ಚು ಬೆಂಕಿ ಪ್ರಕರಣಗಳು ಸಂಭವಿಸಿವೆ. ಈ ಪೈಕಿ 627 ಕಾಡ್ಗಿಚ್ಚು ಪ್ರಕರಣಗಳು ಸೇರಿಕೊಂಡಿವೆ. ಇನ್ನು ಅರಣ್ಯ ವಲಯವಾರು ಪ್ರಕಾರ ನೋಡುವುದಾರೆ, ಬೆಳಗಾವಿ-245, ಭದ್ರಾವತಿ-178, ಚಿಕ್ಕಬಳ್ಳಾಪುರ- 128, ಚಿತ್ರದುರ್ಗ-129, ಹಳಿಯಾಳ-151, ಹಾಸನ-117, ರಾಮನಗರ-105 ಮತ್ತು ಸಾಗರದಲ್ಲಿ 163 ಬೆಂಕಿ ಅವಘಡಗಳು ದಾಖಲಾಗಿವೆ. ಬೆಂಕಿ ನಂದಿಸುವ ಅತ್ಯಾಧುನಿಕ ಸಾಮಾಗ್ರಿಗಳು ಇದ್ದರೂ ಅದರ ನಿರ್ವಹಣೆಗೆ ಸಿಬ್ಬಂದಿ ಮತ್ತು ಹಣದ ಕೊರತೆಯಂತಹ ಸವಾಲುಗಳಿವೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಡಿನಲ್ಲಿ ಫೈರ್‌ಲೈನ್‌ಗಳನ್ನು ರಚಿಸುವುದಲ್ಲದೆ, ನಾವು ಅಗ್ನಿಶಾಮಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸುತ್ತೇವೆ. ಅಲ್ಲದೇ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರನ್ನು ಬೆಂಕಿ ನಂದಿಸಲು ಬೆಂಬಲವನ್ನು ಕೋರುತ್ತೇವೆ. ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ವ್ಯವಸ್ಥೆ ಇದೆ. ಆದ್ರೆ, ಬೆಂಕಿ ಜ್ವಾಲೆಯನ್ನು ನಂದಿಸಲು ಭಾರತೀಯ ವಾಯುಪಡೆ (ಐಎಎಫ್) ಹೆಲಿಕಾಪ್ಟರ್‌ಗಳ ಬಳಕೆಗೆ ಪ್ರಸ್ತಾಪವಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಚಿಕ್ಕಮಗಳೂರು: ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್​ಗಳು!

ಕೆಲವು ಅರಣ್ಯ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಬಳಸುವಂತಿಲ್ಲ. ಆದಾಗ್ಯೂ ಥರ್ಮಲ್ ಸೆನ್ಸರ್‌ಗಳೊಂದಿಗೆ ಅಳವಡಿಸಲಾದ ಡ್ರೋನ್‌ಗಳನ್ನು ಖರೀದಿಸಲು ನಾವು ಟೆಂಡರ್‌ ಕರೆದಿದ್ದೇವೆ. ಡ್ರೋನ್‌ಗಳನ್ನು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಮತ್ತು ಅರಣ್ಯ ಇಲಾಖೆ ಮೇಲ್ವಿಚಾರಣೆ ಮಾಡಲಿವೆ. ರೈತರು ಹುಲ್ಲು ಬೆಳೆಯಲು ಕಾಡಿನಲ್ಲಿ ಬೆಂಕಿ ಹಚ್ಚುವುದು ಮಾತ್ರವಲ್ಲದೇ ಪ್ರಾಣಿಗಳನ್ನು ಬೇಟೆಯಾಡಲು ಸುಲಭವಾಗುವ ನಿರ್ದಿಷ್ಟ ಸ್ಥಳಕ್ಕೆ ಅವುಗಳನ್ನು ಓಡಿಸಲು ಬೆಂಕಿ ಹಚ್ಚುತ್ತಾರೆ. ಹೋಗಲು ವಾಹನಗಳು ಹೋಗದಂತಹ ಭೂಪ್ರದೇಶಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತವೆ. ಆದರೂ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಕಾಲ್ನಡಿಗೆಯಲ್ಲಿ ಅಲ್ಲಿಗೆ ಹೋಗುತ್ತಾರೆ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಡ್ಗಿಚ್ಚು ನಿವಾರಣೆಗೆ ಕೇಂದ್ರ ಸರ್ಕಾರ ಕೇವಲ 3 ಕೋಟಿ ರೂ. ನೀಡಿದೆ. ಈ ಪೈಕಿ ಮೊದಲ ಹಂತದಲ್ಲಿ ಕೇವಲ 60 ಲಕ್ಷ ರೂ. ಬಿಡುಗಡೆಯಾಗಿದ್ದು, ಎರಡನೇ ಕಂತಿನ ಹಣ ಬಿಡುಗಡೆ ಮಾಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಕರ್ನಾಟಕದಲ್ಲಿ ಬೆಂಕಿ ನಿಯಂತ್ರಣಕ್ಕೆ ನಿಯೋಜನೆಗೊಂಡಿರುವ ಬಹುತೇಕ ಸಿಬ್ಬಂದಿಗೆ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ. ರಕ್ಷಣಾ ಸಾಧನಗಳನ್ನು ಖರೀದಿಸಲು ಹಣದ ಅಗತ್ಯವಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹೇಳಿದ್ದಾರೆ.

ಕಳೆದ ವಾರ ಚಿಕ್ಕಮಗಳೂರಿನ ಕಾಡ್ಗಿಚ್ಚಿನಲ್ಲಿ ಅರಣ್ಯ ಸಿಬ್ಬಂದಿಯ ಮೂರು ಬೈಕ್‌ಗಳು ಸುಟ್ಟು ಕರಕಲಾಗಿದ್ದವು. ಫೆಬ್ರುವರಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಮಂಜುನಾಥ್ ಅವರು ಸಕಲೇಶಪುರ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿಯನ್ನು ನಂದಿಸುವಾಗ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು. 2022 ರ ಜನವರಿಯಿಂದ ಮಾರ್ಚ್ ವರೆಗೆ 2,262 ಬೆಂಕಿ ಘಟನೆಗಳು ಸಂಭವಿಸಿದ್ದವು. 2021 ರ ಇದೇ ಅವಧಿಯಲ್ಲಿ 2,323 ಅಗ್ನಿ ಅವಘಡ ಪ್ರಕರಣಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.

Published On - 10:54 am, Fri, 10 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ