ಬೆಂಗಳೂರು: ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವದು ಹೆಚ್ಚು ಕಡಿಮೆ ಖಚಿತವಾದಂತಿದೆಯಾದರೂ ಇಂದು ಬೆಂಗಳೂರಿಂದ ಮಂಡ್ಯಕ್ಕೆ ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಗೊಂದಿಗೆ ಮಾತಾಡಿದ ಸುಮಲತಾ ಅವರು ಅದನ್ನು ಬಹಿರಂಗಡಿಸಲಿಲ್ಲ. ಗುರುವಾರ ರಾತ್ರಿ ಅವರು ನಗರದ ಖಾಸಗಿ ಹೋಟೆಲೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸುಮಲತಾ; ತಮ್ಮ ನಿರ್ಧಾರವನ್ನು ಮಂಡ್ಯದಲ್ಲಿ, ತಮ್ಮ ಜನರ ಮುಂದೆ ಪ್ರಕಟಿಸುವುದಾಗಿ ಹೇಳಿದರು. ಇನ್ನೊಂದು ಗಂಟೆಯಲ್ಲಿ ಮಾಧ್ಯಮದ ಎಲ್ಲ ಪ್ರಶ್ನೆಗಳಗೆ ಇತ್ತರ ಸಿಗಲಿದೆ ಎಂದು ಹೇಳಿ ಅವರು ಮಂಡ್ಯದತ್ತ ತೆರಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ