AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಕ್ಷರಸ್ಥ ಗ್ರಾ ಪಂ ಅಧ್ಯಕ್ಷರ ಶೋಷಣೆ, ಪಿಡಿಓಗಳ ಮೇಲೆ ಹರಿಹಾಯ್ದ ಬಿಜೆಪಿ ಶಾಸಕ ಸುರೇಶ್ ಗೌಡ

ಅನಕ್ಷರಸ್ಥ ಗ್ರಾ ಪಂ ಅಧ್ಯಕ್ಷರ ಶೋಷಣೆ, ಪಿಡಿಓಗಳ ಮೇಲೆ ಹರಿಹಾಯ್ದ ಬಿಜೆಪಿ ಶಾಸಕ ಸುರೇಶ್ ಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 01, 2025 | 6:53 PM

Share

ಕಾಂಗ್ರೆಸ್ ಸರ್ಕಾರ ಬಂದ ನಂತರ ಒಬ್ಬ ಪಿಡಿಓ ₹50ಲಕ್ಷ ತೆರಿಗೆ ಹಣವನ್ನು ಲಪಟಾಯಿಸಿ, ತಿಂದು ನೀರು ಕುಡಿದಿದ್ದ. ಅವನನ್ನು ಸಸ್ಪೆಂಡ್ ಮಾಡಿದ್ದು ನಿಜವಾದರೂ, 6 ತಿಂಗಳಲ್ಲಿ ಅವನು ಕೆಲಸಕ್ಕೆ ವಾಪಸ್ಸು ಬಂದಿದ್ದ, ಯಾರ್ಯಾರಿಗೆ ದುಡ್ಡು ಕೊಟ್ಟನೋ ಗೊತ್ತಿಲ್ಲ. ಸರ್ಕಾರದ ಹಣ ದುರುಪಯೋಗ ಮಾಡಿದವನನ್ನು ಅಸಲಿಗೆ ಜೈಲಿಗೆ ಹಾಕಬೇಕು, ಆದರೆ ಇವನು ಮಾತ್ರ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ ಎಂದು ಸುರೇಶ್ ಗೌಡ ಹೇಳಿದರು.

ತುಮಕೂರು, ಆಗಸ್ಟ್ 1: ತುಮಕೂರು ಗ್ರಾಮೀಣ ಬಿಜೆಪಿ ಶಾಸಕ ಬಿ ಸುರೇಶ್ ಗೌಡಪಂಚಾಯತ್ ಡೆವಲಪ್​ಮೆಂಟ್ (Panchayat Development Officer) ಅಧಿಕಾರಿಗಳ ಜನ್ಮ ಜಾಲಾಡಿದರು. ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನುಚ್ಚುನೂರಾಗಿದೆ, ರಾಜ್ಯದ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಪಿಡಿಓಗಳದ್ದೇ ಕಾರುಬಾರು, ಹೆಚ್ಚು ಓದಿರದ ಅಥವಾ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಶೋಷಿಸಿ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಕಳೆದ 8 ತಿಂಗಳಿಂದ ಒಂದು ಸಭೆಯನ್ನು ಸಹ ನಡೆಸಿಲ್ಲ, ನೀರು ಸರಬರಾಕು, ಕಸ ವಿಲೇವಾರಿ ವ್ಯವಸ್ಥೆಗಳು ಹದಗೆಟ್ಟು ಹೋಗಿವೆ, ಸ್ವಚ್ಛತೆ, ಗ್ರಾಮ ನೈರ್ಮಲ್ಯ ಪದಗಳಿಗೆ ಅರ್ಥವೇ ಇಲ್ಲ ಎಂದು ಸುರೇಶ್ ಗೌಡ ಒಂದೇ ಉಸುರಲ್ಲಿ ಹೇಳಿದರು.

ಇದನ್ನೂ ಓದಿ:   ರಾಜಣ್ಣ ಪ್ರಸ್ತಾಪಿಸಿದ ಹನಿ ಟ್ರ್ಯಾಪ್ ಪ್ರಕರಣ ಕರ್ನಾಟಕ ಇತಿಹಾಸದ ಅತಿದೊಡ್ಡ ಲೈಂಗಿಕ ಹಗರಣ: ಸುರೇಶ್ ಗೌಡ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ