ಡಿಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್​ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಸುರೇಶ್ ಗೌಡ, ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಸಿದ್ದರಾಮಯ್ಯ ಇವರೆಲ್ಲರೂ ಡಿ.ಕೆ.ಸುರೇಶ್​ರನ್ನು ಸೋಲಿಸ್ತಾರೆಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ, ಈಗ ಅದು ರಿಪೀಟ್ ಆಗಿದೆ. ಡಿ.ಕೆ.ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ ಆ್ಯಂಡ್​ ಟೀಮ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡಿಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್​ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ
ಡಿಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್​ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 08, 2024 | 3:00 PM

ತುಮಕೂರು, ಜೂನ್​ 08: ಡಿ.ಕೆ.ಸುರೇಶ್ (DK Suresh) ಸೋಲಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಆ್ಯಂಡ್​ ಟೀಮ್ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನಿಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗಿ ಮಾತನಾಡಿದ ಅವರು, ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಸಿದ್ದರಾಮಯ್ಯ ಇವರೆಲ್ಲರೂ ಡಿ.ಕೆ.ಸುರೇಶ್​ರನ್ನು ಸೋಲಿಸ್ತಾರೆಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ, ಈಗ ಅದು ರಿಪೀಟ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಬೇಕು ಅಂತಾ ಒಂದು ಅಹಿಂದ ಟೀಮ್ ಯಾವಾಗಲೂ ಸಹ ಕೆಲಸ ಮಾಡುತ್ತೆ. ಆ ಅಹಿಂದ ಟೀಮ್ ಮತ್ತು ಸಿದ್ದರಾಮಯ್ಯ ಸೇರಿ ಡಿ.ಕೆ.ಸುರೇಶ್ ಸೋಲಿಸಿದ್ದಾರೆ. 2 ಲಕ್ಷ ಮತಗಳ ಅಂತರದಿಂದ ಸುರೇಶ್​ರನ್ನು ಸೋಲಿಸ್ತಾರೆಂದು ಹೇಳಿದ್ದೆ. ಅದಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಸುರೇಶ್​ರನ್ನು ಸೋಲಿಸಿದ್ದಾರೆ. ಇದು ಸಂಚಿನ ಒಂದು ಭಾಗ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿರಾಮ ಕೊಟ್ಟ ಮತದಾರ ಪ್ರಭುಗಳಿಗೆ ಧನ್ಯವಾದ: ಸೋಲು ಖಚಿತವಾಗುತ್ತಿದ್ದಂತೆಯೇ ಡಿಕೆ ಸುರೇಶ್ ಮಾತು

ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬಾರದೆಂದು ಸಂಚು ರೂಪಿಸಿದ್ದಾರೆ. ಡಿ.ಕೆ.ಶಿವಕುಮಾರ್​ ನೈತಿಕತೆ ಕುಸಿಯಬೇಕು ಅಂತಾ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ, ಈ ಸರ್ಕಾರವೂ ಉಳಿಯಲ್ಲ. ರಾಜಕೀಯ ಧ್ರುವೀಕರಣ ಶುರುವಾಗುತ್ತೆ ಎಂದಿದ್ದಾರೆ.

ಕಾಂಗ್ರೆಸ್​ನಲ್ಲಿ ಒಳಜಗಳ ಶುರುವಾಗುತ್ತೆ. ಈಗಾಗಲೇ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರ ಕಿತ್ತಾಟ ಶುರುವಾಗಿದೆ. ಬೆಂಗಳೂರು ಗ್ರಾಮಾಂತರ ಸೋಲಿನಿಂದ ಇಲ್ಲೂ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜನರ “ಹೃದಯ” ಗೆದ್ದ ಡಾ. ಮಂಜುನಾಥ್​ ಸಂಸತ್ತು ಪ್ರವೇಶ

ಜೂನ್ 4 ರಂದು, ಭಾರತೀಯ ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಡಿಕೆ ಸುರೇಶ್ ಅವರನ್ನು 2,69,647 ರಿಂದ ಸೋಲಿಸಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಪ್ರವೇಶದ ಮೊದಲ ಹೆಜ್ಜೆಯಲ್ಲೇ ಪ್ರಭಾವಿ ನಾಯಕನನ್ನು ಮಣಿಸಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಮಂಜುನಾಥ್ ಅವರು 10,79,002 ಮತಗಳನ್ನು ಪಡೆದುಕೊಂಡಿದ್ದು, ಡಿಕೆ ಸುರೇಶ್ ಅವರ 8,09,355 ಮತಗಳನ್ನು ಪಡೆದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.