Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಮ ಕೊಟ್ಟ ಮತದಾರ ಪ್ರಭುಗಳಿಗೆ ಧನ್ಯವಾದ: ಸೋಲು ಖಚಿತವಾಗುತ್ತಿದ್ದಂತೆಯೇ ಡಿಕೆ ಸುರೇಶ್ ಮಾತು

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರುವ ಡಾ. ಮಂಜುನಾಥ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಎರಡು ಬಾರಿ ಸಂಸದರಾಗಿರುವ ಡಿಕೆ ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ.

ವಿರಾಮ ಕೊಟ್ಟ ಮತದಾರ ಪ್ರಭುಗಳಿಗೆ ಧನ್ಯವಾದ: ಸೋಲು ಖಚಿತವಾಗುತ್ತಿದ್ದಂತೆಯೇ ಡಿಕೆ ಸುರೇಶ್ ಮಾತು
ಡಿಕೆ ಸುರೇಶ್
Follow us
Kiran Surya
| Updated By: Ganapathi Sharma

Updated on: Jun 04, 2024 | 2:05 PM

ಬೆಂಗಳೂರು, ಜೂನ್ 4: ಮೂರು ಬಾರಿ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಿ. ನಾಲ್ಕನೇ ಬಾರಿ ಅಗ್ನಿಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ಮಾದ್ಯಮದ ಮುಖಾಂತರ ಕ್ಷೇತ್ರದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ (Bengaluru rural) ಕ್ಷೇತ್ರದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹೇಳಿದರು. ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result) ಪ್ರಕಟಗೊಳ್ಳುತ್ತಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಡಾ. ಸಿಎನ್ ಮಂಜುನಾಥ್ (Dr CN Manjunath) ಗೆಲುವು ಖಚಿತವಾಗುತ್ತಿದ್ದಂತೆಯೇ ಸುರೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಮತದಾರ ಪ್ರಭುಗಳು ಕೊಟ್ಟಿರುವ ತಿರ್ಮಾನವನ್ನು ಸ್ವಾಗತಿಸುತ್ತೇನೆ. ಗೆಲುವು ಸಾಧಿಸಿದ ಡಾ. ಮಂಜುನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಅವಕಾಶ ಕೊಟ್ಟ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿಯವರಿಗೆ ಹಾಗೂ ಸಿಎಂ‌ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.

ಹೊಸಬರು ಚೆನ್ನಾಗಿ ಕೆಲಸ ಮಾಡಲಿ. ಕ್ಷೇತ್ರಕ್ಕೆ ಒಳ್ಳೆಯದಾಗಲಿ. ಕಾರ್ಯಕರ್ತರ ಜೊತೆ ನಾನು ಜೊತೆಯಾಗಿರುತ್ತೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸಬೇಕು. ನಾನು ಸೋಲನ್ನು ಸ್ವೀಕರಿಸಿದ್ದೇನೆ. ಗೆಲ್ಲುವ ವಿಶ್ವಾಶ ಇತ್ತು. ಆದರೆ, ಜನ ಬೇರೆ ತಿರ್ಮಾನ ಕೊಟ್ಟಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಸೋಲಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ತಂತ್ರ ಕುತಂತ್ರ ಕೆಲಸ ಮಾಡುತ್ತದೆ. ಅದನ್ನೇ ಮಾಡಿದ್ದಾರೆ. ನಾನು ಕಾರ್ಯಕರ್ತರ ಜೊತೆ ಇದ್ದವನು. ಈಗಲೂ ಅವರ ಜತೆ ಇರುತ್ತೇನೆ. ನನ್ನ ಹೋರಾಟ ಮುಂದುವರಿಯಲಿದೆ. ಆದಾಗ್ಯೂ ದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ಸಂಖ್ಯೆ ಬಂದಿದೆ ಎಂದು ಅವರು ಹೇಳಿದರು.

400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿತ್ತು. ಮಾಧ್ಯಮಗಳ ಸಮೀಕ್ಷೆಗಳೂ ಹಾಗೆ ಹೇಳಿದ್ದವು. ಆದರೆ, ಅವುಗಳೆಲ್ಲ ಸುಳ್ಳಾಗಿವೆ ಎಂದು ಸುರೇಶ್ ಹೇಳಿದರು.

ಇದನ್ನೂ ಓದಿ: ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರುವ ಡಾ. ಮಂಜುನಾಥ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈಗಾಗಲೇ ಎರಡು ಬಾರಿ ಸಂಸದರಾಗಿರುವ ಡಿಕೆ ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್