AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸ್ನೇಹಿತರಿಂದಲೇ ಅತ್ಯಾಚಾರ​​: ಪ್ರಕರಣ ದಾಖಲು

ಮೊಬೈಲ್ ಫೋನ್ ಕೊಡಿಸುವ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಪರಿಚಿತ ಸ್ನೇಹಿತರಿಂದಲೇ ಗ್ಯಾಂಗ್​​ರೇಪ್​​ ನಡೆದಿರುವಂತಹ ಘಟನೆ ಹುಬ್ಬಳಿಯ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಡೆದಿದೆ.

ಹುಬ್ಬಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸ್ನೇಹಿತರಿಂದಲೇ ಅತ್ಯಾಚಾರ​​: ಪ್ರಕರಣ ದಾಖಲು
ಪ್ರಾತಿನಿಧಿಕ ಚಿತ್ರImage Credit source: vijaykarnataka.com
ಗಂಗಾಧರ​ ಬ. ಸಾಬೋಜಿ
|

Updated on: Mar 09, 2023 | 4:14 PM

Share

ಹುಬ್ಬಳ್ಳಿ: ಮೊಬೈಲ್ ಫೋನ್ ಕೊಡಿಸುವ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಪರಿಚಿತ ಸ್ನೇಹಿತರಿಂದಲೇ ಗ್ಯಾಂಗ್​​ರೇಪ್ (Gangrape) ನಡೆದಿರುವಂತಹ ಘಟನೆ ಹುಬ್ಬಳಿಯ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಡೆದಿದೆ. ದೇವರಾಜ್, ಪಕ್ಕಿರೇಶ್ ಮತ್ತು ಇಬ್ಬರು ಅಪರಿಚಿತರಿಂದ ಕೃತ್ಯವೆಸಗಲಾಗಿದೆ. ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಸ್ನೇಹಿತರು ಬಾಕಿಯನ್ನು ಹುಬ್ಬಳಿಗೆ ಕರೆತಂದಿದ್ದಾರೆ. ಜೀವ ಬೆದರಿಕೆ ಹಾಕಿ ಬಲವಂತವಾಗಿ ಯುವಕರು ಅತ್ಯಾಚಾರವೆಸಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಯುವಕರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.

ವೈದ್ಯರ ನಿರ್ಲಕ್ಷ್ಯದಿಂದ 6 ತಿಂಗಳ ಮಗು ಸಾವು: ಪೋಷಕರ ಆಕ್ರೋಶ

ಬೆಂಗಳೂರು ಗ್ರಾಮಾಂತರ: ವೈದ್ಯರ ನಿರ್ಲಕ್ಷ್ಯದಿಂದ 6 ತಿಂಗಳ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಕಂಬಳಿಪುರ ನಿವಾಸಿ ವೇಣುಗೋಪಾಲ್ ಎಂಬುವವರ 6 ತಿಂಗಳ ಮೃತಪಟ್ಟ ಮಗು. ಓವರ್​​ ಡೋಸ್​ ಕೊಟ್ಟಿದ್ದರಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ. ಕಳೆದ 15 ದಿನಗಳಿಂದ ಹೊಟ್ಟೆ ನೋವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಓವರ್ ಡೋಸ್ ನೀಡಿದ್ದರಿಂದ ಮಗು ಮೃತಪಟ್ಟಿದೆ. ಆಸ್ಪತ್ರೆಯ ಎಲ್ಲಾ ಮೆಡಿಕಲ್​ಗಳನ್ನು ಬಂದ್ ಮಾಡಿಸಿ ಪೋಷಕರಿಂದ ಗಲಾಟೆ ಮಾಡಲಾಗಿದೆ.

ಇದನ್ನೂ ಓದಿ: ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ವಂಚನೆ ಆರೋಪ: ನ್ಯಾಯಕ್ಕಾಗಿ ಇಂಟೀರಿಯರ್ ಡಿಸೈನರ್ ಅಳಲು

ಮಹಿಳೆಯನ್ನು ಕೊಲೆ ಮಾಡಿದ ಕ್ಯಾಬ್ ಡ್ರೈವರ್ ಅರೆಸ್ಟ್

ಬೆಂಗಳೂರು: ಇಂದಿರಾನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ನಗರದ ಹೊರ ವಲಯದಲ್ಲಿ ಎಸೆದು ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಾಗಲೂರು ಪೊಲೀಸರು(Bagalur Police) ಬಂಧಿಸಿದ್ದಾರೆ. ಭಿಮರಾವ್ ಬಂಧಿತ ಆರೋಪಿ. ದೀಪಾ ಕೊಲೆಯಾದ ಮಹಿಳೆ. ಹೊಸಕೋಟೆಯ ಖಾಸಗಿ ಕಂಪನಿಯೊಂದರಲ್ಲಿ ದೀಪಾ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಆರೋಪಿ ಭಿಮರಾವ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಆರೋಪಿ ಭಿಮರಾವ್ ಪ್ರತಿ ದಿನ ದೀಪಾಳನ್ನು ಇಂದಿರಾನಗರದಿಂದ ಪಿಕಮ್-ಡ್ರಾಪ್ ಮಾಡುತ್ತಿದ್ದ. ದೀಪಾ ಕಂಡರೆ ಭಿಮರಾವ್​ಗೆ ಒಂದು ರೀತಿಯ ಹುಚ್ಚು ಮೋಹ. ಹೀಗಾಗಿ ಮಹಿಳೆ ಜೊತೆಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದ. ತನ್ನ ಜೊತೆಗೆ ಗೆಳತಿಯಂತೆ ಇರು ಎಂದು ಪೀಡಿಸುತ್ತಿದ್ದ. ಆದರೆ ದೀಪಾಗೆ ಇದು ಇಷ್ಟವಾಗುತ್ತಿರಲಿಲ್ಲ. ಆಕೆ ಆತನ ಜೊತೆ ಎಷ್ಟು ಅಂದರ ಅಷ್ಟರಂತೆ ಇದ್ದರು.

ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!

ಕೊಲೆ ಮಾಡಿ ಕಾರಿನಲ್ಲಿ ಮೃತ ದೇಹ ಸಾಗಿಸಿ ಎಸ್ಕೇಪ್

ಫೆಬ್ರವರಿ 27 ರಂದು ಇಂದಿರಾನಗರದಲ್ಲಿ ದೀಪಾರನ್ನು ಪಿಕ್ ಅಪ್ ಮಾಡುವಾಗ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಆರೋಪಿ ಕಬ್ಬಿಣದ ಜಾಕ್ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಆಗ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ನಂತರ ಕಾರಿನಲ್ಲಿ ಮೃತ ದೇಹ ಸಾಗಿಸಿ ಬೆಂಗಳೂರು ಹೊರ ವಲಯದ ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನು ಬಿಸಾಕಿ ಎಸ್ಕೇಪ್ ಆಗಿದ್ದಾನೆ.

ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ: ಆರೋಪಿ ಅರೆಸ್ಟ್

ದಾವಣಗೆರೆ: ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನ ಮುಡಗೋಡು ಮಳಲಿ ಗ್ರಾಮದ ನಿವಾಸಿ ಮಂಜುನಾಥ (32) ಬಂಧಿತ ಆರೋಪಿಯಾಗಿದ್ದು, ಈತನಿಂದ ಚಿಂಕೆಯ ಒಂದು ಕೊಂಬನ್ನು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ಮಗಿರಿ ಪಟ್ಟಣದಲ್ಲಿ ಜಿಂಕೆ ಕೊಂಬು ಮಾರಾಟ ಮಾಡುವಾಗ ಮಂಜುನಾಥ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈ ಹಿಂದೆ ಕೂಡಾ ಹಲವಾರು ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!