ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ವಂಚನೆ ಆರೋಪ: ನ್ಯಾಯಕ್ಕಾಗಿ ಇಂಟೀರಿಯರ್ ಡಿಸೈನರ್ ಅಳಲು
ನೂತನ ಮನೆಯ ಇಂಟೀರಿಯರ್ ಕೆಲಸ ಮಾಡಿಸಿದ ನಂತರ ಬಾಕಿ ಹಣವನ್ನು ನೀಡದೆ ವಂಚನೆ ಎಸಗಿದ್ದಲ್ಲದೆ ದಬ್ಬಾಳಿ ನಡೆಸಿರುವುದಾಗಿ ಆರೋಪಿಸಿ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ಇಂಟೀರಿಯರ್ ಡಿಸೈನರ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಎಫ್ಐಆರ್ ದಾಖಲಿಸುತ್ತಿಲ್ಲ, ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಮನಗರ: ನೂತನ ಮನೆಯ ಇಂಟೀರಿಯರ್ ಕೆಲಸ ಮಾಡಿಸಿದ ನಂತರ ಬಾಕಿ ಹಣವನ್ನು ನೀಡದೆ ವಂಚನೆ (Cheating) ಎಸಗಿದ ಆರೋಪ ಸಂಬಂಧ ಬಿಜೆಪಿ ಜಿಲ್ಲಾಧ್ಯಕ್ಷ (Ramanagara BJP District President) ಹುಲುವಾಡಿ ದೇವರಾಜು ಪುತ್ರನ ವಿರುದ್ಧ ಇಂಟೀರಿಯರ್ ಡಿಸೈನರ್ (Interior Designer) ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸುತ್ತಿಲ್ಲ. ಹೀಗಾಗಿ ನನಗಾ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಹುಲುವಾಡಿ ದೇವರಾಜು ಪುತ್ರ ಲಿಖಿತ್ ಬಾಕಿ 9 ಲಕ್ಷ ಹಣವನ್ನೂ ನೀಡದೆ ದಬ್ಬಾಳಿಕೆ ನಡೆಸುತ್ತಿರುವದಾಗಿ ಇಂಟೀರಿಯರ್ ಡಿಸೈನರ್ ಕಿಶೋರ್ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದೂರು ನೀಡಿ ತಿಂಗಳಾದರೂ ಪೊಲೀಸರು ಎಫ್ಐಆರ್ ದಾಖಲಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹುಲುವಾಡಿ ದೇವರಾಜು ಪುತ್ರ ಲಿಖಿತ್ ನೂತನ ಮನೆ ನಿರ್ಮಾಣ ಮಾಡಿದ್ದಾರೆ. ಈ ಮನೆಯ ಇಂಟೀರಿಯರ್ ಕೆಲಸವನ್ನು ಕಿಶೋರ್ ಎಂಬವರಿಗೆ ನೀಡಿದ್ದರು. ಅದರಂತೆ ಕಿಶೋರ್ ತಮಗೆ ವಹಿಸಿದ ಕೆಲಸದಲ್ಲಿ ಶೇ.80ರಷ್ಟು ಪೂರ್ಣಗೊಳಿಸಿದ್ದಾರೆ. ಆದರೆ ಲಿಖಿತ್ ಹಣ ನೀಡದೆ ಸತಾತಿಸುತ್ತಿದ್ದನು. ಮಾತ್ರವಲ್ಲದೆ, ಬಾಕಿ ಕೆಲಸವನ್ನು ಬೇರೋಬ್ಬ ಗುತ್ತಿಗೆದಾರರಿಗೆ ವಹಿಸಿ ಕೆಲಸವನ್ನು ಪೂರ್ಣಗೊಳಿಸಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!
ನೂತನ ಮನೆಯಲ್ಲಿ ಮಾಡಿದ್ದ ಶೇ. 80ರಷ್ಟು ಕೆಲಸದ ಬಾಕಿ 9 ಲಕ್ಷ ಹಣವನ್ನು ನೀಡದೆ ದಬ್ಬಾಳಿಕೆ ನಡೆಸುತ್ತಿರುವುದಾಗಿ ಆರೋಪಿಸಿ ಕಿಶೋರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದೂರು ನೀಡಿ ತಿಂಗಳು ಕಳೆದರೂ ಪೊಲೀಸರು ಮಾತ್ರ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಹೀಗಾಗಿ ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಕಿಶೋರ್ ಅಳಲು ತೋಡಿಕೊಂಡಿದ್ದಾರೆ.
ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ; ಆರೋಪಿ ಅರೆಸ್ಟ್
ದಾವಣಗೆರೆ: ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನ ಮುಡಗೋಡು ಮಳಲಿ ಗ್ರಾಮದ ನಿವಾಸಿ ಮಂಜುನಾಥ (32) ಬಂಧಿತ ಆರೋಪಿಯಾಗಿದ್ದು, ಈತನಿಂದ ಚಿಂಕೆಯ ಒಂದು ಕೊಂಬನ್ನು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ಮಗಿರಿ ಪಟ್ಟಣದಲ್ಲಿ ಜಿಂಕೆ ಕೊಂಬು ಮಾರಾಟ ಮಾಡುವಾಗ ಮಂಜುನಾಥ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈ ಹಿಂದೆ ಕೂಡಾ ಹಲವಾರು ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಫರ್ನೀಚರ್ ಅಂಗಡಿಗೆ ಬಿದ್ದ ಬೆಂಕಿ ನಂದಿಸಲು ಹರಸಾಹಸ
ಆನೇಕಲ್: ಫರ್ನೀಚರ್ ಅಂಗಡಿದೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಫರ್ನೀಚರ್ ವಸ್ತುಗಳ ಹೊತ್ತಿ ಉರಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ದೊಮ್ಮಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿದೆ. ರಘು ರೆಡ್ಡಿ ಎಂಬುವವರಿಗೆ ಸೇರಿದ ಜಾಗದಲ್ಲಿ ಫರ್ನೀಚರ್ ವ್ಯವಹಾರಕ್ಕೆ ಅಂಗಡಿ ಬಾಡಿಗೆಗೆ ನೀಡಲಾಗಿತ್ತು. ಈ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭಿವಿಸಿದ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಸುತ್ತಲೂ ಆವರಿಸಿಕೊಳ್ಳುತ್ತಿದ್ದು, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ಅಕ್ಕಪಕ್ಕದ ಅಂಗಡಿಗಳ ಮಾಲಿಕರಿಗೂ ಆತಂಕ ವ್ಯಕ್ತವಾಗಿದ್ದು, ಅಂಗಡಿಗಳನ್ನು ಮುಚ್ಚಿಸಲಾಗಿದೆ. ಶಾಟ್ ಸೆರ್ಕ್ಯುಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಫುಲ್‌ಟ್ರಾಫಿಕ್ ಜಾಮ್ ಉಂಟಾಗಿದೆ. ಕೈಕೊಂಡರಹಳ್ಳಿ, ದೊಮ್ಮಸಂದ್ರ, ಬಡವಾಣೆ ಪವರ್ ಕಟ್ ಆಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ