AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಶೇಖರ್ ಸಿದ್ದಿ ಬದುಕಿನ ಗ್ರಾಫ್ ನೋಡಿದರೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು ಸ್ಪಷ್ಟವಾಗುತ್ತದೆ

ಚಂದ್ರಶೇಖರ್ ಸಿದ್ದಿ ಬದುಕಿನ ಗ್ರಾಫ್ ನೋಡಿದರೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು ಸ್ಪಷ್ಟವಾಗುತ್ತದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 02, 2025 | 10:57 AM

Share

ಅವಕಾಶಗಳು ಸಿಗದ ಕಾರಣ ಅವರು ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದ್ದರು ಅಂತ ಹೇಳಲಾಗುತ್ತಿದೆ. ಕಾಮಿಡಿ ಖಿಲಾಡಿಗಳು ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾಗ ಅವರಿಗೆ ದೊಡ್ಡ ಜನರ, ಸೆಲಿಬ್ರಿಟಿಗಳ ಪರಿಚಯವಾಗಿರಬಹುದು. ಚಂದ್ರಶೇಖರ್ ಸಿದ್ದಿ ತಮ್ಮ ಸ್ಥಿತಿಯನ್ನು ಅವರಲ್ಲಿ ಹೇಳಿಕೊಂಡಿದ್ದರೆ ಯಾರೋ ಒಬ್ಬರು ಅವರ ನೆರವಿಗೆ ಬರುತ್ತಿದ್ದರು. ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವೂ ಅವರಿಗಿತ್ತು.

ಉತ್ತರ ಕನ್ನಡ,  ಆಗಸ್ಟ್ 2: ಏನೂ ಅಲ್ಲದ ಸ್ಥಿತಿಯಿಂದ ಲೈಮ್​ಲೈಟ್​ಗೆ, ಅಲ್ಲಿಂದ ಪುನಃ ವಾಪಸ್ಸು ಏನೂ ಅಲ್ಲದ ಸ್ಥಿತಿಗೆ! ಪ್ರಾಯಶಃ ಬದುಕಿನಲ್ಲಿ ಜಿಗುಪ್ಸೆ ಹೊಂದಿ ಖಿನ್ನತೆಯನ್ನು ಹೊದ್ದು ಹತಾಷೆಯ ಕೂಪದಲ್ಲಿ ಬೀಳಲು ಕಾಮಿಡಿ ಖಿಲಾಡಿಗಳು (Comedy Khiladigalu) ಕನ್ನಡ ರಿಯಾಲಿಟಿ ಶೋ ಕಲಾವಿದ ಚಂದ್ರಶೇಖರ್ ಸಿದ್ದಿಗೆ ಅಷ್ಟು ಸಾಕಿತ್ತು. ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಮನಹಳ್ಳಿ ಸಿದ್ದಿ ಜನಾಂಗದ ಯುವಕ ಚಂದ್ರಶೇಖರ್ ದುಡುಕಿದರು ಅನ್ನೋದು ಸ್ಪಷ್ಟವಾಗುತ್ತದೆ. ಆತ್ಮಹತ್ಯೆಯ ಮೂಲಕ ಬದುಕಿಗೆ ವಿದಾಯ ಹೇಳುವಂಥ ಸನ್ನಿವೇಶವೇನೂ ಸೃಷ್ಟಿಯಾಗಿರಲಿಲ್ಲ. ಕಾಮಿಡಿ ಖಿಲಾಡಿಗಳೂ ರಿಯಾಲಿಟಿ ಶೋ ಆದರೂ ಬಣ್ಣದ ಬದುಕು ಅವರಲ್ಲಿ ಕನಸುಗಳು ಮೂಡಲು ಕಾರಣವಾಗಿತ್ತು. ಆದರೆ ಕನಸುಗಳು ನನಸಾಗುವ ಲಕ್ಷಣಗಳು ಕಾಣದೆ ಹೋದಾಗ ಅವರಿಗೆ ಹೊಳೆದ ಮಾರ್ಗ ಯಾವ ದೃಷ್ಟಿಯಿಂದಲೂ ಸರಿಯಲ್ಲ.

ಇದನ್ನೂ ಓದಿ:  ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳುವಿರಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ