AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Metro Yellow Line: ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್

ಆರ್.ವಿ.ರೋಡ್ ಟು ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್​​ಗಾಗಿ ಕಾದು ಕಾದು ಸುಸ್ತಾಗಿದ್ದವರಿಗೆ ಕೊನೆಗೂ ರೈಲ್ವೆ ಕಮಿಷನರ್ ಶುಭ ಸುದ್ದಿ ನೀಡಿದ್ದು, ಸದ್ಯದಲ್ಲೇ ಡ್ರೈವರ್ಲೆಸ್ ರೈಲುಗಳು ಟ್ರ್ಯಾಕಿಗಿಳಿಯಲಿವೆ. ಜುಲೈ 22 ರಿಂದ 25 ರವರೆಗೆ ಸುರಕ್ಷತಾ ಪರೀಕ್ಷೆ ನಡೆಸಿದ್ದ ರೈಲ್ವೆ ಸುರಕ್ಷತಾ ಆಯುಕ್ತರು ಚಾಲಕರಹಿತ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Bengaluru Metro Yellow Line: ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್
ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್
Kiran Surya
| Edited By: |

Updated on: Aug 02, 2025 | 10:41 AM

Share

ಬೆಂಗಳೂರು, ಆಗಸ್ಟ್ 2: ಆರ್.ವಿ.ರೋಡ್​ನಿಂದ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಯಾವಾಗ ರೈಲು ಸಂಚಾರ ಆರಂಭವಾಗುತ್ತದೆ ಎಂದು ಕಾದಿದ್ದ ಪ್ರಯಾಣಿಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಹಳದಿ ಮಾರ್ಗದಲ್ಲೂ ಮೆಟ್ರೋ ರೈಲು ಸಂಚಾರ ಮಾಡಲಿದೆ. ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಸಿಕ್ಕಿದೆ. ಜುಲೈ 22 ರಿಂದ 25 ರವರೆಗೆ ಹಳದಿ ಮಾರ್ಗವನ್ನು ಪರಿಶೀಲನೆ ಮಾಡಿದ್ದ ಸೌತ್ ಜೋನ್ ರೈಲ್ವೆ ಸುರಕ್ಷತಾ ಆಯುಕ್ತ ಎಎಂ ಚೌಧರಿ ನೇತೃತ್ವದ ತಂಡ 19.15 ಕಿಮೀ ವಿಸ್ತೀರ್ಣವಿರುವ ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಮಾರ್ಗದಲ್ಲಿ ಚೀನಾ ನಿರ್ಮಿತ ಚಾಲಕ ರೈಲುಗಳು ಸಂಚಾರ ಮಾಡಲಿವೆ. 16 ಮೆಟ್ರೋ ಸ್ಟೇಷನ್​ಗಳನ್ನು ಹೊಂದಿರುವ ಮಾರ್ಗವಿದಾಗಿದ್ದು, 25 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಸದ್ಯ ಯೆಲ್ಲೋ ಲೈನ್​ನಲ್ಲಿ ಸಂಚಾರ ಮಾಡಲು ಬಿಎಂಆರ್​ಸಿಎಲ್ ಬಳಿ ಮೂರು ರೈಲುಗಳು ಮಾತ್ರವಿದೆ.

ಆರ್​​ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಮೆಟ್ರೋ ಸ್ಟೇಷನ್​ಗಳು

  • ಆರ್.ವಿ ರೋಡ್
  • ರಾಗಿಗುಡ್ಡ
  • ಜಯದೇವ ಆಸ್ಪತ್ರೆ
  • ಬಿಟಿಎಂ ಲೇಔಟ್
  • ಸೆಂಟ್ರಲ್ ಸಿಲ್ಕ್ ಬೋರ್ಡ್
  • ಬೊಮ್ಮನಹಳ್ಳಿ
  • ಹೊಂಗಸಂದ್ರ
  • ಕೂಡ್ಲುಗೇಟ್
  • ಸಿಂಗಸಂದ್ರ
  • ಹೊಸರೋಡ್
  • ಬೇರೆಟೇನಾ ಅಗ್ರಹಾರ
  • ಎಲೆಕ್ಟ್ರಾನಿಕ್ ಸಿಟಿ
  • ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ
  • ಹೂಸ್ಕೂರು ರೋಡ್
  • ಬಯೋಕಾನ್ ಹೆಬ್ಬಗೋಡಿ
  • ಬೊಮ್ಮಸಂದ್ರ

ಈ ಮೆಟ್ರೋ ಮಾರ್ಗದಲ್ಲಿ 16 ಎತ್ತರಿಸಿದ ಮೆಟ್ರೋ ಸ್ಟೇಷನ್​ಗಳಿದ್ದು, ಎಲ್ಲಾ ಮೆಟ್ರೋ ಸ್ಟೇಷನ್​ಗಳಿಗೂ ಚಾಲಕರಹಿತ ರೈಲುಗಳು ಸಂಚಾರ ಮಾಡಲಿವೆ. ಆದರೆ 25 ನಿಮಿಷಗಳಿಗೊಮ್ಮೆ ಒಂದು ಮೆಟ್ರೋ ರೈಲು ಸಂಚಾರ ಮಾಡಲಿದೆ. ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ 5 ರಿಂದ 7 ನಿಮಿಷಕ್ಕೊಂದರಂತೆ ರೈಲು ಸಂಚಾರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹಳದಿ ಮಾರ್ಗಕ್ಕೆ ಹೆಚ್ಚಿನ ರೈಲುಗಳು ಬಂದ ನಂತರ ಈ‌ ಮಾರ್ಗದಲ್ಲೂ 5 ರಿಂದ 7 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.

ಇದನ್ನೂ ಓದಿ: Metro Yellow Line: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ

ಒಟ್ಟಿನಲ್ಲಿ, ಈ ಬಾರಿಯಾದರೂ ಅಂದುಕೊಂಡಿರುವಂತೆಯೇ ಬಿಎಂಆರ್​ಸಿಎಲ್ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಿದರೆ ಸಾಕು ಎನ್ನುವಂತಾಗಿದೆ. ಈ ಬಾರಿಯಾದರೂ ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾರಂಭ ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್