Bengaluru Power Cut: ಇಂದು ಮತ್ತು ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಆಗಸ್ಟ್ 2 ಮತ್ತು 3 ರಂದು ಬೆಂಗಳೂರಿನ ಸರ್ಜಾಪುರ ಮತ್ತು ಅತ್ತಿಬೆಲೆ ವ್ಯಾಪ್ತಿಯಲ್ಲಿ ವಿದ್ಯುತ್ ಕಾರ್ಯಾಚರಣೆಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಹಾಗಾದರೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 02: ಸರ್ಜಾಪುರ ಮತ್ತು ಅತ್ತಿಬೆಲೆ 66 ಕೆವಿ ವ್ಯಾಪ್ತಿಯಲ್ಲಿ ಹೆಚ್‌ಟಿಎಲ್‌ಎಸ್ ಕಂಡಕ್ಟರ್‌ಗಳ ತಂತಿ ಜೋಡಣೆ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಆಗಸ್ಟ್ 2 ಮತ್ತು 3 ರಂದು ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ (power cut) ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಹಾಗಾದರೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ.
ಎಲ್ಲೆಲ್ಲಿ ವಿದ್ಯುತ್ ಕಡಿತ?
66/11 ಕೆವಿ ಅತ್ತಿಬೆಲೆ ವ್ಯಾಪ್ತಿಯಲ್ಲಿ: ಯಡವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್, ಮಾಯಸಂದ್ರ, ದಾಸನಾಪುರ, ಬಲ್ಲೂರು, ಕಂಬಳಿಪುರ, ಚಿಕ್ಕ ಕಾನಹಳ್ಳಿ, ಇಂಡ್ಲಬೆಲೆ ಮತ್ತು ಹಾರೋಹಳ್ಳಿ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
66/11 ಕೆವಿ ಆನೇಕಲ್ ವ್ಯಾಪ್ತಿಯಲ್ಲಿ: ಆನೇಕಲ್ ಟೌನ್, ಕಾವಲಹೊಸಹಳ್ಳಿ, ಗೌರೇನಹಳ್ಳಿ, ಹಾಲ್ದೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾದ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ.
66/11 ಕೆವಿ ಸಮಂದೂರು ವ್ಯಾಪ್ತಿಯಲ್ಲಿ: ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗಾರ ಹಳ್ಳಿ, ವನಕನಹಳ್ಳಿ.
ಬೆಸ್ಕಾಂ ವಿದ್ಯುತ್ ಬಿಲ್ ಪಾವತಿಯ ಎಟಿಸಿ ಸೇವೆ ಸ್ಥಗಿತ
ಬೆಸ್ಕಾಂ ವಿದ್ಯುತ್ ಬಿಲ್ ಪಾವತಿಯ ಎಟಿಸಿ (ಎನಿ ಟೈಮ್ ಪೇಮೆಂಟ್) ಸೇವೆಯನ್ನು ಶುಕ್ರವಾರದಿಂದ (ಆಗಸ್ಟ್ 1 ರಿಂದ) ಸ್ಥಗಿತಗೊಳಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಎಟಿಪಿ ಪಾವತಿ ಯಂತ್ರ ಸೇವಾ ಪೂರೈಕೆದಾರರ ಗುತ್ತಿಗೆ ಅವಧಿ ಮುಕ್ತಾಯಾಗಿದ್ದು, ಜೊತೆಗೆ ವಿದ್ಯುತ್ ಬಿಲ್ ಪಾವತಿಗೆ ಸಾಕಷ್ಟು ಆಯ್ಕೆಗಳಿವೆ. ಈ ನಿಟ್ಟಿನಲ್ಲಿ ಎಟಿಪಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಗ್ರಾಹಕರು ಅದರ ಬದಲಾಗಿ ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳಲ್ಲಿ ಅಂದರೆ ಬೆಂಗಳೂರು ಒನ್, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿ ಮಾಡಬಹುದಾಗಿದೆ. ಅಷ್ಟೆ ಅಲ್ಲದೇ ಯುಪಿಐ ಮೂಲಕವೂ ವಿದ್ಯುತ್ ಬಿಲ್ಗಳನ್ನು ಪಾವತಿಸಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Sat, 2 August 25








