AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಈ ನಗರಗಳಲ್ಲಿ ಒಂದು ವಾರ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ

ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ವಿದ್ಯುತ್‌ ಸ್ವೀಕರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್​ ತಂತಿಗಳನ್ನು ಬದಲಾವಣೆ ಕಾರ್ಯ ಹಿನ್ನಲೆ ಗುರುವಾದಿಂದ ಜುಲೈ 24 ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಯಾವೆಲ್ಲಾ ನಗರಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Bengaluru Power Cut: ಬೆಂಗಳೂರಿನ ಈ ನಗರಗಳಲ್ಲಿ ಒಂದು ವಾರ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Jul 17, 2025 | 9:33 AM

Share

ಬೆಂಗಳೂರು ಗ್ರಾಮಾಂತರ, ಜುಲೈ 17: ದೊಡ್ಡಬಳ್ಳಾಪುರ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ವಿದ್ಯುತ್​ ತಂತಿಗಳ ಬದಲಾವಣೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Power outage) ಉಂಟಾಗಲಿದೆ. ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿ ನೀಡಿದ್ದು, ಇಂದಿನಿಂದ (ಜುಲೈ 17) ಜುಲೈ 24 ರವರೆಗೆ ಅಂದರೆ ಒಂದು ವಾರಗಳ ಕಾಲ ನಗರದ ವಿವಿಧೆಡೆ ವಿದ್ಯುತ್‌​ ವ್ಯತ್ಯಯವಾಗಲಿದೆ. ಹಾಗಾದರೆ ಯಾವೆಲ್ಲಾ ನಗರದಲ್ಲಿ ವಿದ್ಯುತ್‌​ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) 220 ಕೆವಿ ದೊಡ್ಡಬಳ್ಳಾಪುರ ವಿದ್ಯುತ್ ಕೇಂದ್ರಕ್ಕೆ ಸಂಪರ್ಕಗೊಂಡಿರುವ 66 ಕೆವಿ ದೊಡ್ಡಬಳ್ಳಾಪುರ-ದೇವನಹಳ್ಳಿ ಪ್ರಸರಣ ಮಾರ್ಗದಲ್ಲಿ ವಿದ್ಯುತ್​ ತಂತಿಗಳನ್ನು ಬದಲಾಯಿಸಲಿದೆ. ಈ ನಿರ್ವಹಣಾ ಕಾರ್ಯವು ಈ ಪ್ರದೇಶದ 66/11 ಕೆವಿ ಸಬ್‌ಸ್ಟೇಷನ್‌ಗಳಿಗೆ ವಿದ್ಯುತ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಬೆಸ್ಕಾಂ ಅಧಿಕೃತ ಸೂಚನೆ ನೀಡಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ವರುಣನ ಆರ್ಭಟ ಜೋರು, ಕೊಡಗು, ಹಾಸನದಲ್ಲಿ ಭಾರಿ ಮಳೆ ಸಾಧ್ಯತೆ

ಇಂದಿನಿಂದ ಜುಲೈ 24 ರವರೆಗೆ ಅಂದರೆ ಒಂದು ವಾರಗಳ ಕಾಲ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ನಿಟ್ಟಿನಲ್ಲಿ ತಮ್ಮ ದಿನದ ಯೋಜನೆಗಳನ್ನು ಮುಂಚಿತವಾಗಿ ಯೋಜಿಸುವಂತೆ ಬೆಸ್ಕಾಂ ಸಾರ್ವಜನಿಕರಲ್ಲಿ ಕೋರಿದೆ.

ಎಲ್ಲೆಲ್ಲಿ ವಿದ್ಯುತ್‌​ ವ್ಯತ್ಯಯ

ದೇವನಹಳ್ಳಿ ಪಟ್ಟಣ, ವಸತಿ ಸಮುಚ್ಚಯಗಳು, ಗೋಕರೆ, ಯರ್ತಿಗಾನಹಳ್ಳಿ ಚಿಕ್ಕಸಣ್ಣೆ ಅವತಿ, ಭುವನಹಳ್ಳಿ, ಬಿದಲೂರು, ಬೊಮವಾರ, ವಿಶ್ವನಾಥಪುರ, ಯಲಿಯೂರು, ಚಿಮಾಚನಹಳ್ಳಿ, ಕನ್ನಮಂಗಳ, ಸಣ್ಣಅಮಾನಿಕೆರೆ, ಹೀರಾನಂದಾನಿ, ಕೋಯಿರ, ತೈಲಗೆರೆ, ಗೊಬ್ಬರಗುಂಟೆ, ಕೋರಮಂಗಲ ವ್ಯಾಪ್ತಿಯ ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರುವುದಿಲ್ಲ.

ಇದನ್ನೂ ಓದಿ: ಬೇಕರಿ, ಕಾಂಡಿಮೆಂಡ್ಸ್ ಬಂದ್ ಅಷ್ಟೇ ಅಲ್ಲ: ಈ ಮೂರು ದಿನ ಹಾಲು, ಹಾಲಿನ ಉತ್ಪನ್ನವೂ ಸಿಗಲ್ಲ!

ಕುಂದಾಣ ವಿದ್ಯುತ್ ಉಪಕೇಂದ್ರದ ಬೆಂಗ್ರಾ ಜಿಲ್ಲಾಡಳಿತ ಕಚೇರಿ, ಕುಂದಾಣ ಗ್ರಾಮ ಪಂಚಾಯತ, ಕೊಯಿರ ಗ್ರಾಮ ಪಂಚಾಯತ, ಆಲೂರು-ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರುವುದಿಲ್ಲ, ಆದ್ದರಿಂದ ವಿದ್ಯುತ್ ಗ್ರಾಹಕರು ಹಾಗೂ ರೈತರು ಸಹಕರಿಸುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:31 am, Thu, 17 July 25