AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹತ್ತಾರು ಅದ್ವಾನ: ಸ್ಕ್ಯಾನಿಂಗ್ ಮಷಿನ್ ಹಾಳಾಗಿ ರೋಗಿಗಳ ಪರದಾಟ

ಬೆಂಗಳೂರಿನ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳ‌ ನಿರ್ಲಕ್ಷಕ್ಕೆ ಬಡ ಜೀವಗಳು ಪರದಾಡುವಂತಗಿದೆ. ರಾಜ್ಯದ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಚಿಕಿತ್ಸಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹತ್ತಾರು ಅದ್ವಾನ: ಸ್ಕ್ಯಾನಿಂಗ್ ಮಷಿನ್ ಹಾಳಾಗಿ ರೋಗಿಗಳ ಪರದಾಟ
ಕಿದ್ವಾಯಿ ಆಸ್ಪತ್ರೆ
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 17, 2025 | 10:58 AM

Share

ಬೆಂಗಳೂರು, ಜುಲೈ 17: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಿದ್ವಾಯಿ ಆಸ್ಪತ್ರೆ (Kidwai Hospital) ಹೆಸರಾಗಿದೆ. ಸಾವಿರಾರು ಕ್ಯಾನ್ಸರ್​ (Cancer) ರೋಗಿಗಳು ಭೇಟಿ ನೀಡುತ್ತಾರೆ. ಆದರೆ ಇದೇ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಹತ್ತಾರು ಅದ್ವಾನಗಳು ಕಂಡುಬಂದಿದ್ದು, ಆಸ್ಪತ್ರೆಗೆ ಕಾಲಿಡುವ ಮುನ್ನ ಎರಡೆರೆಡು ಬಾರಿ ಯೋಚಿಸುವಂತಾಗಿದೆ. ಎಂಆರ್​​ಐ ಸ್ಕ್ಯಾನಿಂಗ್ ಮತ್ತು ಮೆಮೊಗ್ರಾಂ ಮಾಡಿಸಲು ಪರದಾಡುವಂತಾಗಿದೆ.

ರೋಗಿಗಳ ಪರದಾಟ

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ  ಆಸ್ಪತ್ರೆಯಲ್ಲಿ ಕಳೆದ ಹತ್ತು ದಿನಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಏಕೆಂದರೆ ಎಂಆರ್​​ಐ ಸ್ಕ್ಯಾನಿಂಗ್, ಮೆಮೊಗ್ರಾಂ ಸೇರಿದ್ದಂತೆ ಅನೇಕ ಉಪಕರಣಗಳು ಹಾಳಾಗಿವೆ. ಈಗಾಗಲೇ ಹಾಳಾಗಿ ಹತ್ತು ದಿನ ಕಳೆದರೂ ಯಾವುದೇ ಉಪಕರಣಗಳನ್ನು ಸರಿಪಡಿಸಿಲ್ಲ. ಹೀಗಾಗಿ ರೋಗಿಗಳು ನಿತ್ಯ ಪರದಾಡುವಂತಾಗಿದೆ.

ಇದನ್ನೂ ಓದಿ: ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಅನುದಾನ ದುರ್ಬಳಕೆ ಆರೋಪ: ತನಿಖಾ ಸಮಿತಿ ರಚಿಸಿದ ಸರ್ಕಾರ

ಇದನ್ನೂ ಓದಿ
Image
ಬೆಂಗಳೂರಿನ ಈ ನಗರಗಳಲ್ಲಿ ಒಂದು ವಾರ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ
Image
ಬೆಂಗಳೂರು ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಾಯ್ತು ಉತ್ತರಭಾರತ ರೋಗಿಗಳ ಹೊರೆ
Image
ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಅನುದಾನ ದುರ್ಬಳಕೆ ಆರೋಪ
Image
ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದಲ್ಲಾ ಎರಡಲ್ಲಾ ಸಮಸ್ಯೆ: ಅಧಿಕಾರಿಗಳ‌ ನಿರ್ಲಕ್ಷಕ್ಕೆ ಅಸುನೀಗುತ್ತಿವೆ ಬಡ ಜೀವಗಳು

ಉಪಕರಣಗಳು ಹಾಳಾದ ಪರಿಣಾಮ ನೂರಾರು ಕಿಲೋಮೀಟರ್ ದೂರದಿಂದ ಚಿಕಿತ್ಸೆಗೆ ಕಿದ್ವಾಯಿಗೆ ಬಂದು ರೋಗಿಗಳು ವಾಪಸ್ ಹೋಗುತ್ತಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಎಂಆರ್​​ಐ ಚಿಕಿತ್ಸೆಗೆ ಕನಿಷ್ಠ 10 ಸಾವಿರ ರೂ ಖರ್ಚು ಆಗುತ್ತದೆ. ಹೀಗಾಗಿ ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿರುವ ಉಪಕರಣಗಳು ಹಾಳಾಗಿ ರೋಗಿಗಳು ಪರದಾಡುತ್ತಿದ್ದರು ಕಿದ್ವಾಯಿ ಆಸ್ಪತ್ರೆ ಆಡಳಿತ ನಿರ್ದೇಶಕರು ಸರಿ ಪಡಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಎಂಆರ್​ಐ ಸ್ಕ್ಯಾನಿಂಗ್ ವರದಿ ಕೈ ಸೇರದೆ ವೈದ್ಯರು ಡಯಾಗ್ನೋಸ್ ಮಾಡಲಾಗದೆ ವಾಪಸ್ ಕಳಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂ ಹಣ ಖರ್ಚು ಮಾಡಬೇಕಾದ ದುಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದಲ್ಲಾ ಎರಡಲ್ಲಾ ಸಮಸ್ಯೆ: ಅಧಿಕಾರಿಗಳ‌ ನಿರ್ಲಕ್ಷಕ್ಕೆ ಅಸುನೀಗುತ್ತಿವೆ ಬಡ ಜೀವಗಳು

ಒಟ್ಟಿನಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳ‌ ನಿರ್ಲಕ್ಷಕ್ಕೆ ಬಡ ಜೀವಗಳು ಪರದಾಡುವಂತಾಗಿದೆ. ಸರ್ಕಾರ ಇತ್ತ ಗಮನ ಹರಿಸುವ ಮೂಲಕ ಸಮಸ್ಯೆಗಳಿಗೆ ಮುಕ್ತಿ ನೀಡಿ ಬಡ ಜನರ ಪರದಾಟ ತಪ್ಪಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.