ವಿದ್ಯುತ್ ಬಿಲ್ ಪಾವತಿ ಸೇರಿ 5 ಎಸ್ಕಾಂ ಆನ್‌ಲೈನ್ ಸೇವೆ 2 ದಿನ ಸ್ಥಗಿತ
ಕರ್ನಾಟಕದ ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದೆ. ಈ ಹಿನ್ನೆಲೆ ಎರಡು ದಿನಗಳ ಕಾಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಆನ್ ಲೈನ್ ಸೇವೆ ಇರುವುದಿಲ್ಲ. ಹಾಗಾದ್ರೆ, ಯಾವ ದಿನದಂದು ಯಾವೆಲ್ಲಾ ಸೇವೆ ಇರುವುದಿಲ್ಲ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಜುಲೈ.22): ಮಾಹಿತಿ ತಂತ್ರಜ್ಞಾನ ಉನ್ನತೀಕರಣ ಹಿನ್ನೆಲೆಯಲ್ಲಿ ಕರ್ನಾಟಕದ ಐದೂ ಎಸ್ಕಾಂಗಳ (Escom) ವ್ಯಾಪ್ತಿಯಲ್ಲಿನ ಆನ್ ಲೈನ್ ಸೇವೆ ಇರುವುದಿಲ್ಲ. ಜುಲೈ 25ರ ರಾತ್ರಿ 8.30 ರಿಂದ ಜುಲೈ 27ರ ರಾತ್ರಿ 10 ರವರೆಗೆ ಬೆಸ್ಕಾಂ (bescom), ಹೆಸ್ಕಾಂ (hescom), ಜೆಸ್ಕಾಂ, ಮೆಸ್ಕಾಂ ಹಾಗೂ ಸೆಸ್ಕ್ ಗಳ ವ್ಯಾಪ್ತಿಗಳ ಆನ್ ಲೈನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಮತ್ತು ಹೊಸ ಸಂಪರ್ಕ ಸೇವೆ ಲಭ್ಯವಿರುವುದಿಲ್ಲ.
ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಸಿರಾ, ಚೆನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್ , ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ ಉಪ ವಿಭಾಗಗಳ ವ್ಯಾಪ್ತಿಗಳಲ್ಲಿ ಆನ್ ಲೈನ್ ಸೇವೆ ಬಂದ್ ಆಗಲಿದೆ.
ಸದ್ಯ ಸಾರ್ವಜನಿಕರು ಬಳಕೆ ಮಾಡುತ್ತಿರುವ ಆನ್‌ಲೈನ್ ಸೇವೆಗಳನ್ನು ಉನ್ನತೀಕರಣ ಮಾಡಲಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಬಿಲ್ ಪಾವತಿ, ದೂರು ದುಮ್ಮಾನ, ಹೊಸ ಸಂಪರ್ಕ ಸೇರಿದಂತೆ ಎಲ್ಲಾ ಸೇವೆಗಳು ಅತೀ ಸುಲಭವಾಗಿ ಲಭ್ಯವಾಗುವಂತೆ ಹಾಗೂ ಸರಳ ಪ್ರಕ್ರಿಯೆಗಳನ್ನು ಒಳಗೊಂಡಿರುವಂತೆ ಮಾಡಲಾಗುತ್ತಿದೆ. ಬ್ಯಾಕೆಂಡ್ ಟೀಂ ಈ ಕುರಿತು 2 ದಿನ ಕಾರ್ಯನಿರ್ವಹಸಲಿದೆ. ಹೊಸ ಇಂಟರ್‌ಪೇಸ್ ಜುಲೈ 27ರ ರಾತ್ರಿ 10 ಗಂಟೆ ಬಳಿಕ ಲಭ್ಯವಾಗಲಿದೆ.
Published On - 8:28 pm, Tue, 22 July 25




