ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಲ್ಲ: ವಿ ಸೋಮಣ್ಣ, ಕೇಂದ್ರ ಸಚಿವ
ನಿನ್ನೆ ಸಂಸತ್ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತಾಡಿದ ಸೋಮಣ್ಣ, ಕಾಂಗ್ರೆಸ್ ಮತ್ತು ಇತರ ವಿರೋಧಪಕ್ಷಗಳಿಗೆ ಆಪರೇಶನ್ ಸಿಂಧೂರದ ಬಗ್ಗೆ ಚರ್ಚೆ ಬೇಕಿರಲಿಲ್ಲ, ಅವರಿಗೆ ಬೇಕಿರುವುದು ಪ್ರಚಾರ, ಲೋಕಸಭಾ ಸ್ಪೀಕರ್ ಅವರು ಪ್ರಶ್ನೋತ್ತರ ವೇಳೆ ಬಹಳ ಅಮೂಲ್ಯವಾದದ್ದು, ಅದು ಮುಗಿದ ಬಳಿಕ ಆಪರೇಶನ್ ಸಿಂಧೂರ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡೋದಾಗಿ ಹೇಳಿದರೂ ವಿರೋದ ಪಕ್ಷದವರು ಗಲಾಟೆ ಎಬ್ಬಿಸಿದರು ಎಂದರು.
ತುಮಕೂರು, ಜುಲೈ 22: ನಿನ್ನೆ ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ವಿ ಸೋಮಣ್ಣ ಇವತ್ತು ತುಮಕೂರುನಲ್ಲಿದ್ದರು. ಸಣ್ಣ ವ್ಯಾಪಾರಿಗಳ ಮೇಲೆ ತೆರಿಗೆ ವಿಧಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು ಸಿದ್ದರಾಮಯ್ಯ (CM Siddaramaiah) ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಲ್ಲ, ಪ್ರಧಾನ ಮಂತ್ರಿಯವರು ಕರೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಸೌಜನ್ಯತೆ ಇವರಿಗಿಲ್ಲ, ತೆರಿಗೆ ವಿಷಯವನ್ನು ಅವರು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಾತಾಡಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ 7 ಕೋಟಿ ಕನ್ನಡಿಗರ ಪ್ರತಿನಿಧಿ, ಬೇರೆಯವರ ವಿಷಯದಲ್ಲಿ ಲಘುವಾಗಿ ಮಾತಾಡುವುದನ್ನು ನಿಲ್ಲಿಸಬೇಕು, ರಾಜ್ಯದ ಬೊಕ್ಕಸ ಬರಿದಾಗಿದೆ, ಹಾಗಾಗಿ ಜನರ ಶೋಷಣೆಗೆ ಇಳಿದಿದ್ದಾರೆ ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ: ಜನ ನೀಡುವ ಕಾಸಿನಿಂದಲೇ ಕಮಲ್ ಹಾಸನ್ ಒಬ್ಬ ನಟನಾಗಿ ಬೆಳೆದಿದ್ದು: ವಿ ಸೋಮಣ್ಣ, ಕೇಂದ್ರ ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

