ಪ್ರಧಾನಿ ಮೋದಿ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ, ಅಪ್ರಸ್ತುತ ಪ್ರಶ್ನೆಗಳಿಗೆ ಉತ್ತರಿಸಲ್ಲ: ವಿ ಸೋಮಣ್ಣ
ಬಿಜೆಪಿಯಲ್ಲಿ ಆಫರ್, ಒಲಿದು ಬರುವ; ಮೊದಲಾದ ಪದಗಳೊಗೆ ಆಸ್ಪದವಿಲ್ಲ, ಮಾದಪ್ಪನ ಹುಡುಕಿಕೊಂಡು ಹೋದರೆ ಸಿಗಲ್ಲ, ಮಾದಪ್ಪ ನಮ್ಮ ಜೊತೆಯಲ್ಲೇ ಇರಬೇಕು, ಇವತ್ತು ನಾನು ಮಾದಪ್ಪನ ದರ್ಶನ ಮಾಡಿಕೊಂಡು ಸಂತೋಷವಾಗಿದ್ದೇನೆ, ಯಾವುದನ್ನೂ ಆಶಿಸದೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಲಿದೆ ಎಂದು ಸೋಮಣ್ಣ ಹೇಳಿದರು.
ಚಾಮರಾಜನಗರ, ಜುಲೈ 18: ಮಲೆ ಮಹದೇಶ್ವರನ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ತನಗೆ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನ (state BJP president) ನೀಡುವ ಬಗ್ಗೆ ಹರಿದಾಡುತ್ತಿರುವ ವದಂತಿಯನ್ನು ಡೌನ್ ಪ್ಲೇ ಮಾಡಿ ಮಾತಾಡಿದರು. ನನ್ನ ಪರಿಶ್ರಮ, ಬದ್ಧತೆ ಮತ್ತು ನಡಾವಳಿಯನ್ನು ಗಮನಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ಜವಾಬ್ದಾರಿಯನ್ನು ನೀಡಿದ್ದಾರೆ, 32 ರಾಜ್ಯಗಳ ಹೊಣೆಗಾರಿಕೆ ನನ್ನ ಮೇಲಿದೆ, ಹಾಗಾಗಿ ಅಪ್ರಸ್ತುತವೆನಿಸುವ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ ಎಂದು ಸೋಮಣ್ಣ ಹೇಳುತ್ತಾರೆ.
ಇದನ್ನೂ ಓದಿ: ರೆಡ್ಡಿ-ಶ್ರೀರಾಮುಲು ವೈಮನಸ್ಸು ಶಮನಕ್ಕಾಗಿ ಸೋಮಣ್ಣ ಪ್ರಯತ್ನ, ನಾನೂ ಕೈ ಜೋಡಿಸುವೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ